ಬೆಂಗಳೂರು, ಮಾ. 10 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 25 ಎಕರೆ ಭೂಮಿಯನ್ನು ಕಬಳಿಕೆ ಮಾಡಲಾಗಿದೆ. ಬಿಡಿಎ ಅಧಿಕಾರಿಗಳು ಭೂಗಳ್ಳರ ಜೊತೆ ಶಾಮೀಲಾಗಿ ಅಕ್ರಮ ನಡೆಸಿದ್ದಾರೆ. ಬರೋಬ್ಬರಿ 1,000 ಕೋಟಿ ರೂ.ಗೂ ಅಧಿಕ ಮೌಲ್ಯದ್ದಾಗಿದ್ದು, ಕಂದಾಯ ನಿವೇಶನಗಳನ್ನಾಗಿ ಪರಿವರ್ತಿಸಲಾಗಿದೆ. ಬಳಿಕ ಭೂಗಳ್ಳರು ಹಾಗೂ ಸರ್ಕಾರಿ ಅಧಿಕಾರಿಗಳು ಇದನ್ನು ಮಾರಾಟ ಮಾಡಿದ್ದಾರೆ. ಹೀಗೆಂದು ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಅವರು ನಿನ್ನೆ ಮಾಧ್ಯಮದ ಎದುರು ಆರೋಪ ಮಾಡಿದ್ದಾರೆ.
ವಾರದ ಹಿಂದಷ್ಟೇ ಆರ್‌ಟಿಐ ಕಾರ್ಯಕರ್ತ ಹೇಮಂತ್ ರಾಜು ಅವರು ಉಮಾಪತಿ ಶ್ರೀನಿವಾಸ್ ಗೌಡ ಅವರು ಕ್ರಮವಾಗಿ ಏಳು ಬಿಡಿಎ ನಿವೇಶನಗಳನ್ನು ಖರೀದಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಇದನ್ನು ತಮ್ಮ ಪೂರ್ವಜರ ಆಸ್ತಿ ಎಂದು ಸಮರ್ಥನೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ಉಮಾಪತಿ ಶ್ರೀನಿವಾಸ್ ಗೌಡ ಅವರು ಆರೋಪ ಮಾಡಿದ್ದಾರೆ. ಈ ಬಗ್ಗೆ ಬೊಮ್ಮನಹಳ್ಳಿ ಟಿಕೆಟ್ ಆಕಾಂಕ್ಷಿ ಹಾಗೂ ಸಿನಿಮಾ ನಿರ್ಮಾಪಕರಾಗಿರುವ ಉಮಾಪತಿ ಶ್ರೀನಿವಾಸ ಗೌಡ ಅವರು ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ದೇವರಚಿಕ್ಕನಹಳ್ಳಿ ಸುತ್ತಮುತ್ತ ಅಕ್ರಮ ನಡೆದಿದೆ.
ಸರ್ವೆ ನಂಬರ್ 27/1 ರಿಂದ 29/35 ವರೆಗಿನ ಸರ್ವೆ ನಂಬರ್‌ಗಳಲ್ಲಿ ಅಕ್ರಮ ನಡೆದಿದೆ. 30 ವರ್ಷಗಳ ಹಿಂದೆ ಬಿಡಿಎ 16 ಕೋಟಿ ರೂ. ಅನ್ನು ಲೇಔಟ್ ರಚನೆಗೆ ಖರ್ಚು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ಕರ್ನಾಟಕ ಹೈಕೋರ್ಟ್‌ಗೆ ತೆರಳಿದ್ದರು. ಹೈಕೋರ್ಟ್ ನಲ್ಲಿ ಬಿಡಿಎ ಪರವಾಗಿ ತೀರ್ಪನ್ನು ನೀಡಿತ್ತು. ಅದೇ ಜನರು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಅಲ್ಲೂ ಕೂಡ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು. ಈಷ್ಟೆಲ್ಲಾ ಆದಮೇಲೂ ಆಸ್ತಿಯನ್ನು ಕಂದಾಯ ನಿವೇಶನಗಳನ್ನಾಗಿ ಪರಿವರ್ತಿಸಿ ಭೂಗಳ್ಳರು ಲಾಭ ಮಾಡಿಕೊಂಡಿದ್ದಾರೆ.
ಇನ್ನು ಹೀಗೆ ಪಡೆದ ಜಾಗವನ್ನು ಪ್ರತೀ ಚದರ ಅಡಿಗೆ 12,000 ರೂ. ನಂತೆ ಮಾರಾಟ ಮಾಡಿದ್ದಾರೆ. ಈ ಅಕ್ರಮದಲ್ಲಿ ರಾಮ್ ಮೋಹನ್, ಸುನೀತಾ ಬಿ, ಉಮೇಶ್ ಹಾಗೂ ಮುನಿ ರೆಡ್ಡಿ ಭಾಗಿಯಾಗಿದ್ದಾರೆ ಎಂದು ಉಮಾಪತಿ ಅವರು ಆರೋಪಿಸಿದ್ದಾರೆ. ಈ ಸಂಬಂಧ ನೂರಾರು ಮಾಲೀಕರು ನನ್ನ ಬಳಿ ಬಂದು ನ್ಯಾಯ ಕೇಳುತ್ತಿದ್ದಾರೆ. ಇದು ಯಅವುದೇ ರೀತಿಯ ರಾಜಕೀಯ ಸ್ಟಂಟ್ ಅಲ್ಲ ಎಂದು ಉಮಾಪತಿ ಶ್ರೀನಿವಾಸ್ ಗೌಡ ಅವರು ಹೇಳಿದ್ದಾರೆ.