26.4 C
Bengaluru
Monday, December 23, 2024

ಮಹಿಳಾ ಮೀಸಲು ವಿಧೇಯಕಕ್ಕೆ ಬಿತ್ತು ರಾಷ್ಟ್ರಪತಿ ಮುರ್ಮು ಅಂಕಿತ

ದೆಹಲಿ;ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುವ ವಿಧೇಯ ಕಕ್ಕೆ ರಾಷ್ಟ್ರಪತಿ ದೌಪದಿ ಮುರ್ಮು ಗುರುವಾರ ಒಪ್ಪಿಗೆ ಸೂಚಿಸಿದ್ದಾರೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಈ ವಿಷಯ ತಿಳಿಸಿದೆ.ಇದೀಗ ನಾರಿ ಶಕ್ತಿ ವಂದನ್ ಅಧಿನಿಯಮ್ ಕಾನೂನಾಗಿ ಬದಲಾಗಿದೆ.ಈ ಕಾನೂನು ಜಾರಿಯಾದ ಬಳಿಕ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ.ಉಪರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸುವ ಮೊದಲು, ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಚೇರ್ಮನ್ ಜಗದೀಪ್ ಧನಖರ್ ಅವರು ಗುರುವಾರ ಸಂಸತ್ತಿನಲ್ಲಿ ಅಂಗೀಕರಿಸಿದ ಸಂವಿಧಾನ ತಿದ್ದುಪಡಿ ಮಸೂದೆಗೆ ಸಹಿ ಅಂಕಿತ ಹಾಕಿದರು. ಹೊಸ ಜನಗಣತಿ ಮತ್ತು ಡಿಲಿಮಿಟೇಶನ್ ನಂತರ ಮೀಸಲಾತಿ ಜಾರಿಗೆ ಬರಲಿದೆ. ರಾಷ್ಟ್ರಪತಿಗಳಿಂದ ಒಪ್ಪಿಗೆ ಪಡೆದರೂ ಕಾನೂನು ಮಾತ್ರ ಸಧ್ಯಕ್ಕೆ ಜಾರಿಯಾಗುತ್ತಿಲ್ಲ.ಸಂಸತ್ತಿನ ವಿಶೇಷ ಅಧಿವೇಶನದಲ್ಲಿ, ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಿತು.ಈ ಮಸೂದೆಯಲ್ಲಿ ಒಬಿಸಿ ಮೀಸಲಾತಿ ನೀಡಬೇಕು ಮತ್ತು ಸಂಸತ್ತಿನಲ್ಲಿ ಅಂಗೀಕಾರದ ನಂತರ ರಾಷ್ಟ್ರಪತಿಯವರ ಒಪ್ಪಿಗೆ ಪಡೆದರೂ ಅದನ್ನು ಜಾರಿಗೆ ತರಲು ದೀರ್ಘಾವಧಿ ತೆಗೆದುಕೊಳ್ಳುವ ಬಗ್ಗೆ ಕಾಂಗ್ರೆಸ್ ಪ್ರಶ್ನಿಸಿತು.ವಿಧೇಯಕ ಇನ್ನು ಅಧಿಕೃತ ಸಂವಿಧಾನ ಕಾಯಿದೆ (106ನೇ ತಿದ್ದುಪಡಿ) ಯಾಗಲಿದ್ದು, ಕೇಂದ್ರ ಸರಕಾರ ಅಧಿಕೃತ ಗಜೆಟ್‌ನಲ್ಲಿ ಅಧಿಸೂಚನೆ ಮೂಲಕ ಪ್ರಕಟಿಸು, ದಿನಾಂಕದಿಂದ ಮೀಸಲು ಜಾರಿಯಾಗಲಿದೆ.

Related News

spot_img

Revenue Alerts

spot_img

News

spot_img