20.8 C
Bengaluru
Thursday, December 19, 2024

ಪೂರ್ವ ಗುತ್ತಿಗೆ ಹೊಂದಿರುವ ಆಸ್ತಿ ಮೇಲಿನ ಹೂಡಿಕೆ ಇಂದಿನ ಟ್ರೆಂಡ್‌

ಬಂಡವಾಳ ಹೂಡಿಕೆಯ ಅತ್ಯಂತ ಜನಪ್ರಿಯ ಹಾಗೂ ಸುರಕ್ಷಿತ ಮಾರ್ಗವಾಗಿ ಪರಿಗಣಿಸಲ್ಪಟ್ಟಿರುವ ರಿಯಲ್‌ ಎಸ್ಟೇಟ್‌ ಹೂಡಿಕೆಯು ಅನೇಕರಿಗೆ ಸ್ಥಿರ, ಜಾಣತನದ ಹಾಗೂ ಲಾಭದಾಯಕವಾದ ಆಯ್ಕೆಯಾಗುತ್ತಿದೆ. ಈ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಆಯ್ಕೆ ವೈವಿಧ್ಯತೆ ಇರುವುದು ಈ ಕ್ಷೇತ್ರದತ್ತ ಜನರು ಮನಸ್ಸು ವಾಲುತ್ತಿರುವುದಕ್ಕೆ ಮುಖ್ಯ ಕಾರಣ ಎನ್ನಬಹುದು. ಅದರಲ್ಲೂ ವಾಣಿಜ್ಯ ಉದ್ದೇಶದ ರಿಯಲ್‌ ಎಸ್ಟೇಟ್‌ ವಿಭಾಗದಲ್ಲಿ ಚಿಲ್ಲರೆ ವ್ಯಾಪಾರ ಸ್ಥಳ ಹಾಗೂ ಕಚೇರಿ ಸ್ಥಳ ಸೇರಿದಂತೆ ವಿವಿಧ ಆಯ್ಕೆಗಳಿವೆ. ಆದಾಯದ ಇನ್ನೊಂದು ಮೂಲವಾದ ಈ ಹೂಡಿಕೆಗೆ ಹೆಚ್ಚಿನ ಬೇಡಿಕೆಯಿದೆ.

ವಾಣಿಜ್ಯ ಉದ್ದೇಶದ ರಿಯಲ್‌ ಎಸ್ಟೇಟ್‌ನಲ್ಲಿ ಹೆಚ್ಚಿನ ಲಾಭ ಇರುವುದನ್ನು ಗಮನಿಸಿದ ಅನೇಕರು ಇಲ್ಲಿ ತಮ್ಮ ಬಂಡವಾಳವನ್ನು ಹೂಡುತ್ತಿದ್ದಾರೆ. ಈ ರೀತಿಯ ಭಾರೀ ಹೂಡಿಕೆಯ ಕಾರಣದಿಂದಾಗಿ ವಾಣಿಜ್ಯ ಉದ್ದೇಶದ ರಿಯಲ್‌ ಎಸ್ಟೇಟ್‌ ಅನ್ನು ಅದರಲ್ಲೂ ಮುಖ್ಯವಾಗಿ ಕಾರ್ಪೊರೇಟ್‌ ಹಾಗೂ UHNI (ಅಲ್ಟ್ರಾ ಹೈ ನೆಟ್‌ ವರ್ತ್‌ ಇಂಡಿವಿಜುವಲ್ಸ್‌) ಹಾಗೂ HNI (ಹೈ ನೆಟ್‌ ವರ್ತ್‌ ಇಂಡಿವಿಜುವಲ್ಸ್‌) ಹೋಲಿಸಿದರೆ ಈ ಕ್ಷೇತ್ರವನ್ನು ದುಬಾರಿ ವ್ಯವಹಾರವೆಂದು ಪರಿಗಣಿಸಬಹುದು.

ಅಂದಹಾಗೆ ವರ್ಷದಿಂದ ವರ್ಷಕ್ಕೆ ಆಸ್ತಿಯ ಮೇಲಿನ ಹೂಡಿಕೆ ಪ್ರಾಮುಖ್ಯತೆಯನ್ನು ಪಡೆಯುತ್ತಲೇ ಇದೆ. ಆಸ್ತಿ ಹೂಡಿಕೆಯ ಬಗ್ಗೆ ವೃತ್ತಿಪರರ ಗಮನ ಹೆಚ್ಚಿದ್ದು ಹೂಡಿಕೆಯು ಅವರ ಆರ್ಥಿಕ ಮಟ್ಟದ ವ್ಯಾಪ್ತಿಯೊಳಗೇ ಇದೆ. ವಸತಿ ಸಮುಚ್ಚಯಗಳಿಗೆ ಹೋಲಿಸಿದರೆ, ಹೂಡಿಕೆಯ ಅತ್ಯಂತ ಸಾಂಪ್ರದಾಯಿಕ ರೂಪ, ಬಾಡಿಗೆ ಮತ್ತು ಭೋಗ್ಯದ ಎರಡೂ ಅವಕಾಶಗಳು ವಾಣಿಜ್ಯ ಸ್ಥಳಗಳಿಗೆ ಹೆಚ್ಚು ಮತ್ತು ದೀರ್ಘಕಾಲಿಕವಾದದ್ದು. ಇಲ್ಲಿ ಆರಂಭಿಕ ಹೂಡಿಕೆ ಹಾಗೂ ಆದಾಯ ಎರಡೂ ಹೆಚ್ಚೇ ಇರುತ್ತದೆ. ಸ್ಥಿರವಾದ ಆದಾಯ, ತೆರಿಗೆಯಿಂದ ಸಿಗುವ ಪ್ರಯೋಜನಗಳು, ಆಸ್ತಿಯ ಮಾಲೀಕತ್ವದಂತಹ ಧನಾತ್ಮಕ ಅಂಶಗಳಿಂದಾಗಿ ಪ್ರಮುಖ ಸ್ಥಳದಲ್ಲಿ ಇರುವ ವಾಣಿಜ್ಯ ಸ್ಥಳಗಳ ಜನಪ್ರಿಯತೆಯನ್ನು ಹೆಚ್ಚಿಸುತ್ತವೆ.

ಹೂಡಿಕೆ ಮಾಡಿದ ಮೇಲೆ ಹೆಚ್ಚು ಲಾಭ ಸಿಗುವಂಥ, ವಿಶ್ವಾಸಾರ್ಹ ಬಾಡಿಗೆದಾರನನ್ನು ಹುಡುಕುವುದು ಸಾಧ್ಯವೇ ಎಂಬ ಗೊಂದಲ ಎಲ್ಲ ಹೂಡಿಕೆದಾರರನ್ನು ಕಾಡುತ್ತದೆ. ಯಾಕೆಂದರೆ ಸಾಲ ಮರುಪಾವತಿ ಸೇರಿದಂತೆ ಇನ್ನಿತರೆ ಆರ್ಥಿಕ ನಿರ್ಧಾರಗಳ ಮೇಲೆ ಯಾವುದೇ ಸಮಸ್ಯೆ ಆಗದಂತೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ಎಲ್ಲ ಗೊಂದಲಗಳ ಕಾರಣದಿಂದಲೇ ಪೂರ್ವ ಗುತ್ತಿಗೆ ಹೊಂದಿರುವ ವಾಣಿಜ್ಯ ಸ್ಥಳಗಳ ಮೇಲೆ ಹೂಡಿಕೆ ಮಾಡುವ ಯೋಚನೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈ ಒಪ್ಪಂದದಲ್ಲಿ ಆಸ್ತಿಯನ್ನು ಖರೀದಿಸುವ ಸಮಯದಲ್ಲಿಯೇ ಹೂಡಿಕೆದಾರರಿಗೆ ಮೊದಲನೇ ದಿನದಿಂದಲೇ ಸ್ವಾಧೀನಪಡಿಸಿಕೊಂಡ ದಾಖಲಾತಿಗಳೊಂದಿಗೆ ಸ್ಥಿರವಾದ ಆದಾಯದ ಭರವಸೆಯನ್ನೂ ನೀಡಲಾಗುತ್ತದೆ.

ಆದರೆ ಮುಂಚಿತವಾಗಿ ಬಾಡಿಗೆಗೆ ಪಡೆದ ಆಸ್ತಿಯ ಮೇಲಿನ ಹೂಡಿಕೆದಾರರಿಗೆ ಹೆಚ್ಚಿನ ಸ್ಥಿರತೆ ಇರಲಿದ್ದು ಅಪಾಯದ ಮಟ್ಟ ಮಧ್ಯಮದಿಂದ ಕಡಿಮೆ ಮಟ್ಟದಷ್ಟು ಮಾತ್ರ ಇರಲಿದೆ.

ಆದರೆ ಶೀಘ್ರವಾಗಿ ಮಾರಾಟ ಮಾಡಬಹುದಾದ ಅವಕಾಶಗಳು ಲಭ್ಯವಿರುವುದರಿಂದ A ಗ್ರೇಡ್‌ ಆಸ್ತಿಗಳಿಗೆ ಯಾವಾಗಲೂ ಬೇಡಿಕೆ ಅಧಿಕಾವಾಗಿದೆ. ಪೂರ್ವ ಗುತ್ತಿಗೆ (pre-leased) ಪಡೆದ ಆಸ್ತಿಗಳು ಸರಾಸರಿ 12-18 ಪ್ರತಿಶತದಷ್ಟು ಲಾಭವನ್ನು ನೀಡುತ್ತವೆ. ಅಧಿಕ ಬಂಡವಾಳ ಹಾಗೂ ಹೆಚ್ಚಿನ ಬಾಡಿಗೆ ಸಿಗುವಂತೆ ಮಾಡುತ್ತವೆ. ಅಲ್ಲದೆ ಇನ್ನೊಂದು ವರ್ಷದಲ್ಲಿ ಪೂರ್ವ ಗುತ್ತಿಗೆ ಪಡೆದ ವಾಣಿಜ್ಯ ಆಸ್ತಿಗಗಳಿಗೆ ಇನ್ನಷ್ಟು ಹೆಚ್ಚಿನ ಬೇಡಿಕೆ ಸಿಗುವ ನಿರೀಕ್ಷೆಯಿದೆ. ಇಲ್ಲಿ ಆಸ್ತಿಯನ್ನು ನಿರ್ವಹಿಸುವ ಜವಾಬ್ದಾರಿಯು ಬಾಡಿಗೆದಾರನದ್ದಾಗಿರುತ್ತದೆ. ಹಾಗೂ ಸುಪ್ರಸಿದ್ಧ ಕಂಪೆನಿಗಳಿಗಾದರೆ ಕನಿಷ್ಠ ೩ ವರ್ಷಗಳ ಲಾಕ್‌ ಇನ್‌ ಅವಧಿಯನ್ನು ನೀಡಿ ಬಾಡಿಗೆಯನ್ನು ಭದ್ರಪಡಿಸಿಕೊಳ್ಳುವ ಆಯ್ಕೆಯನ್ನು ನೀಡುತ್ತದೆ. ಕೋವಿಡ್‌ನಂತ ಸಾಂಕ್ರಾಮಿಕ ಸಂಕೋಲೆಯಿಂದ ಚೇತರಿಸಿಕೊಂಡು ಆರ್ಥಿಕ ಬೆಳವಣಿಗೆಯನ್ನು ಪ್ರದರ್ಶಿಸುತ್ತಿರುವ ನಮ್ಮ ದೇಶದಲ್ಲಿ ವಾಣಿಜ್ಯ ಸ್ಥಳದ ಬೇಡಿಕೆ ಹೆಚ್ಚುವುದರೊಂದಿಗೆ ಹೂಡಿಕೆದಾರರಿಗೆ ಹೂಡಿಕೆಯ ಮೇಲಿನ ಲಾಭ ಹೆಚ್ಚಲಿದೆ.

ವಾಣಿಜ್ಯ ಆಸ್ತಿಗಳ ಮೇಲೆ ಹೂಡಿಕೆ ಮಾಡುವುದು ಸುರಕ್ಷಿತ ಹಾಗೂ ಲಾಭದಾಯಕ ಮಾರ್ಗವಾಗಿದ್ದು, ಹೂಡಿಕೆಯ ಮೌಲ್ಯ ವೃದ್ಧಿ, ನಿಯಮಿತವಾದ ಆದಾಯ, ಸುರಕ್ಷಿತ ಆಸ್ತಿಯಂಥ ಅನೇಕ ಲಾಭಗಳು ಸಿಗಲಿವೆ. ಆದರೆ ವಾಣಿಜ್ಯ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವಾಗ ವಿಶ್ವಾಸಾರ್ಹ ಸಲಹೆಗಾರರ ಅಭಿಪ್ರಾಯ ಪಡೆಯುವುದು ಬಹುಮುಖ್ಯ. ಒಂದೇ ಆಸ್ತಿಯಿರಲಿ ಅಥವಾ ಅನೇಕ ಸ್ವತ್ತುಗಳ ಖರೀದಿ ನಿರ್ಧಾರವೇ ಇರಲಿ, ಆ ಸಂದರ್ಭದಲ್ಲಿ ಆಸ್ತಿಗಳ ದಾಖಲಾತಿಗಳಲ್ಲಿನ ಕಾನೂನು ಬದ್ಧತೆ, ವರ್ಗಾವಣೆ ಪ್ರಕ್ರಿಯೆ ಸೇರಿದಂತೆ ಪ್ರತಿ ವ್ಯವಹಾರಗಳ ಎಲ್ಲ ಹಂತಗಳನ್ನು ಸೂಕ್ಷ್ಮವಾಗಿ ಗಮನಿಸಿ ನಿರ್ಧಾರ ಕೈಗೊಳ್ಳಬೇಕು.

ರಿಯಲಿಸ್ಟಿಕ್‌ ರಿಯಾಲ್ಟರ್ಸ್‌ ಸಂಸ್ಥೆಯು ಭಾರತದ ಪ್ರಮುಖ ಹಾಗೂ ಜನಪ್ರಿಯ ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆಯಾಗಿದೆ. 425ಕ್ಕೂ ಹೆಚ್ಚು ನಗರಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನು ಸಾಬೀತುಪಡಿಸಿದೆ. ರಿಯಲ್‌ ಎಸ್ಟೇಟ್‌ ಹಾಗೂ ಮಾರುಕಟ್ಟೆ ನಿಖರ ಮಾಹಿತಿ ಒದಗಿಸುವಲ್ಲಿ ಎರಡು ದಶಕಗಳ ಅನುಭವ ಹೊಂದಿದೆ ಈ ಸಂಸ್ಥೆ. ತನ್ನ ಗ್ರಾಹಕರಿಗೆ ವೈಯಕ್ತಿಕ ಸಲಹೆಯಿಂದ ಹಿಡಿದು ಹೂಡಿಕೆಗೆ ಸಂಬಂಧಿಸಿದ ಸಂಪೂರ್ಣ ಸಲಹೆಯನ್ನು ನೀಡುತ್ತದೆ.

Related News

spot_img

Revenue Alerts

spot_img

News

spot_img