23.2 C
Bengaluru
Thursday, January 23, 2025

ಅಂಚೆ ಕಚೇರಿಯ ಈ ಎಲ್ಲಾ ಯೋಜನೆಗಳಿಂದ ನಿಮಗೆ ತೆರಿಗೆ ವಿನಾಯ್ತಿ ಪಡೆಯಬಹುದು

ಬೆಂಗಳೂರು, ಏ. 28 : ಅಂಚೆ ಕಚೇರಿಯಲ್ಲಿ ಲಕ್ಷಾಂತರ ಜನರು ಉಳಿತಾಯ ಖಾತೆಗಳನ್ನು ಹೊಂದಿದ್ದಾರೆ. ಅಂಛೇರಿಯಲ್ಲಿ ವಿವಿಧ ಯೋಜನೆಗಳ ಪ್ರಯೋಜನವನ್ನು ಗ್ರಾಹಕರು ಪಡೆಯುತ್ತಿದ್ದಾರೆ. ಎಲ್ಲರೂ ಅಂಚೆ ಕಚೇರಿಯಲ್ಲಿ ಉಳಿತಾಯ ಮಾಡುವುದು ಸುರಕ್ಷಿತವೂ ಹೌದು ಜೊತೆಗೆ ಆದಾಯ ತೆರಿಗೆಯಿಂದ ವಿನಾಯಿತಿಯನ್ನು ಪಡೆಯಬಹುದು. ಸೆಕ್ಷನ್ 80 CCD (1) ಮತ್ತು ಸೆಕ್ಷನ್ 80C ಅಡಿಯಲ್ಲಿ ಅನುಮತಿಸಲಾದ ಗರಿಷ್ಠ ಕಡಿತಗಳನ್ನು ಪ್ರತಿ ಆರ್ಥಿಕ ವರ್ಷದಲ್ಲಿ 1.5 ಲಕ್ಷ ರೂ.ಗಳಿಗೆ ನಿರ್ಬಂಧಿಸಲಾಗಿದೆ. ಇದರ ಅಡಿಯಲ್ಲಿ ಅಂಚೆ ಕಚೇರಿಯ ಯಾವೆಲ್ಲಾ ಯೋಜನೆಗಳಿಗೆ ತೆರಿಗೆ ವಿನಾಯ್ತಿ ಸಿಗುತ್ತದೆ ಎಂದು ತಿಳಿಯೋಣ ಬನ್ನಿ..

ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆಯನ್ನು ಹೆನ್ನೂ ಮಕ್ಕಳ ಭವಿಷ್ಯಕ್ಕಾಗಿ ರೂಪಿಸಲಾಗಿದೆ. ಇದು 21 ವರ್ಷಗಳಲ್ಲಿ ಮೆಚ್ಯುರ್ ಆಗುತ್ತದೆ. ಹುಡುಗಿಯ ವಯಸ್ಸು 18 ವರ್ಷಗಳ ನಂತರ, ಅಧ್ಯಯನಕ್ಕಾಗಿ ಈ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಪೂರ್ಣ ಮೊತ್ತವು 21 ವರ್ಷಗಳ ನಂತರ ಮಾತ್ರ ಲಭ್ಯವಿದೆ.

ಟರ್ಮ್ ಡೆಪಾಸಿಟ್
ಟರ್ಮ್ ಡೆಪಾಸಿಟ್ ಒಂದು, ಎರಡು, ಮೂರು ಹಾಗೂ ಐದು ವರ್ಷ ಅವಧಿಗೆ ಡೆಪಾಸಿಟ್ ಮಾಡಬಹುದು. ಇದರಲ್ಲಿ ಡೆಪಾಸಿಟ್ ಮಾಡಿದ ಹಣವೂ ಅವಧಿ ಪೂರ್ಣಗೊಂಡ ಬಳಿಕ ಬಡ್ಡಿ ಸಮೇತವಾಗಿ ಹಿಂಪಡೆಯಬಹುದು. ಈ ಯೋಜನೆ ಕೂಡ ತೆರಿಗೆ ವಿನಾಯ್ತಿ ಅಡಿಯಲ್ಲಿ ಇದೆ.

ರಾಷ್ಟ್ರೀಯ ಉಳಿತಾಯ ಯೋಜನೆ
ರಾಷ್ಟ್ರೀಯ ಉಳಿತಾಯ ಯೋಜನೆಯೂ ಕೂಡ ತೆರಿಗೆ ವಿನಾಯ್ತಿ ಅಡಿಯಲ್ಲಿ ಬರಲಿದೆ. ಅತ್ಯಂತ ಸುರಕ್ಷಿತ ಹೂಡಿಕೆ ಆಯ್ಕೆ ಇದು. ಇದರಲ್ಲಿ ಹೂಡಿಕೆ ಮಾಡಿ ತೆರಿಗೆ ಕಟ್ಟುವುದರಿಂದ ಉಳಿತಾಯ ಮಾಡುವುದು ಬಹಳ ಸುಲಭವಾಗುತ್ತದೆ

ಪಬ್ಲಿಕ್ ಪ್ರಾವಿಡೆಂಟ್ ಫಂಡ್
ಇದರ ರಿಟರ್ನ್ಸ್ ತೆರಿಗೆ ಮುಕ್ತ ಆಗಿದೆ. ನೀವು ಕನಿಷ್ಟ 1000 ರಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದು. 7.1 ರಷ್ಟು ಬಡ್ಡಿದರವನ್ನು ಸರ್ಕಾರವು ಸಹ ನೀಡುತ್ತದೆ. ಆದ್ದರಿಂದ ನೀವು ಇದರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನೀವು ದೊಡ್ಡ ಲಾಭವನ್ನು ಪಡೆಯಬಹುದು.

ರಾಷ್ಟ್ರೀಯ ಪಿಂಚಣಿ ಯೋಜನೆ
ಕೆಲಸವನ್ನು ಪ್ರಾರಂಭಿಸಿದ ಸಮಯದಿಂದ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 80 CCD (1) ಅಡಿಯಲ್ಲಿ 1.5 ಲಕ್ಷ ಮತ್ತು CCD (1B) ಅಡಿಯಲ್ಲಿ 50,000 ರೂಪಾಯಿ ಸಿಗುತ್ತೆ.

Related News

spot_img

Revenue Alerts

spot_img

News

spot_img