ಬೆಂಗಳೂರು, ಜೂ. 09 : ಅಂಚೆ ಕಚೇರಿ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯು ಮಧ್ಯಮ ಅವಧಿಯ ಉಳಿತಾಯ ಯೋಜನೆಯಾಗಿದೆ. ಹೂಡಿಕೆದಾರರು ಈ ಯೋಜನೆಯಲ್ಲಿ ತಮ್ಮ ಹೂಡಿಕೆಯನ್ನು ಕನಿಷ್ಠ 5 ವರ್ಷಗಳ ಇರಿಸಬೇಕಾಗುತ್ತದೆ. ಅಂದರೆ ಹೂಡಿಕೆ ಅವಧಿ ಕನಿಷ್ಠ 5 ವರ್ಷವಾಗಿದೆ. ಅಂಚೆ ಕಚೇರಿ ಆರ್ಡಿಯಲ್ಲಿ ಮಾಸಿಕವಾಗಿ ನಿರ್ದಿಷ್ಟ ಮೊತ್ತವನ್ನು 5 ವರ್ಷಗಳ ಕಾಲ ಹೂಡಿಕೆ ಮಾಡಬೇಕು.
ನೀವು ಮಾಸಿಕವಾಗಿ ಆರ್ಡಿಯನ್ನು ಜಮೆ ಮಾಡದಿದ್ದರೆ ಪ್ರತಿ 100 ರೂಪಾಯಿಯ ಶೇಕಡ 1ರಷ್ಟು ಮೊತ್ತವನ್ನು ದಂಡವಾಗಿ ಪಾವತಿ ಮಾಡಬೇಕಾಗುತ್ತದೆ. ಸಣ್ಣ ಮೊತ್ತದ ಹೂಡಿಕೆ ಮಾಡಲು ಬಯಸುವವರಿಗೂ ಕೂಡಾ ಅಂಚೆ ಕಚೇರಿ ಯೋಜನೆ ಸಹಾಯಕ. 100 ರೂಪಾಯಿ ಕೂಡಾ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಯ ಮಿತಿ ಇಲ್ಲ. ಅಪ್ರಾಪ್ತರ ಹೆಸರಲ್ಲಿ ಕೂಡಾ ಆರ್ಡಿಯನ್ನು ತೆರೆಯಬಹುದು. ಒಂದಕ್ಕಿಂತ ಅಧಿಕ ಆರ್ಡಿ ಖಾತೆಯನ್ನು ಕೂಡಾ ತೆರೆಯಬಹುದು.
ರಿಕ್ಯೂರಿಂಗ್ ಡೆಪಾಸಿಟ್ ಅನ್ನು ಆರ್ಡಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿರುವ ಬ್ಯಾಂಕ್ಗಳು ಹೊಂದಿರುವ ವಿಶಿಷ್ಠ ಟರ್ಮ್ ಡೆಪಾಸಿಟ್ ಇದಾಗಿದೆ. ಜನರು ಮಾಸಿಕವಾಗಿ ಹೂಡಿಕೆ ಮಾಡಿ ಉಳಿತಾಯ ಮಾಡಲು ಇದು ಸಹಾಯಕವಾಗಿದೆ. ಕನಿಷ್ಠ ಡೆಪಾಸಿಟ್ ಅವಧಿ ಆರು ತಿಂಗಳುಗಳು ಆಗಿದೆ. ಹಾಗೆಯೇ ಗರಿಷ್ಠ ಡೆಪಾಸಿಟ್ ಅವಧಿ 10 ವರ್ಷಗಳು ಆಗಿದೆ. ಫಿಕ್ಸಿಡ್ ಡೆಪಾಸಿಟ್ಗೆ ಎಷ್ಟು ಬಡ್ಡಿದರ ನೀಡಲಾಗುತ್ತದೆಯೋ ಅಷ್ಟೇ ಬಡ್ಡಿದರ ಆರ್ಡಿಗೂ ಇರುತ್ತದೆ.
ಬೇರೆ ಎಲ್ಲ ಉಳಿತಾಯ ಯೋಜನೆಗಿಂತ ಅಧಿಕ ಬಡ್ಡಿದರ ಇದಕ್ಕೆ ಇರುತ್ತದೆ. ಡೆಪಾಸಿಟ್ ಮೇಲೆ ಸಾಲವನ್ನು ಪಡೆಯುವ ಆಯ್ಕೆಯೂ ಕೂಡಾ ಇದೆ. ಅಂಚೆ ಕಚೇರಿ ಆರ್ಡಿ ಅವಧಿ 5 ವರ್ಷಗಳು ಆಗಿದೆ. ಆದರೆ ಬ್ಯಾಂಕ್ನಲ್ಲಿ ಒಂದು ವರ್ಷದಿಂದ 10 ವರ್ಷದವರೆಗೆ ಅವಧಿ ಇದೆ. ಇದರಿಂದ ನೀವು ರೂ. 333ಅನ್ನು ಪಾವತಿಸುತ್ತಾ ಬಂದರೆ, 10 ವರ್ಷದಲ್ಲಿ ಈ ಹಣ 16 ಲಕ್ಷ ರೂಪಾಯಿ ಆಗುತ್ತದೆ. ಆಗ ನೀವು ಲಕ್ಷಾಧೀಶರಾಗಬಹುದು. ಈ ಖಾತೆಯನ್ನು ಈಗಲೇ ತೆರೆದು ಹಣ ಉಳಿತಾಯ ಮಾಡಿ.