22.1 C
Bengaluru
Friday, July 5, 2024

ಮಕ್ಕಳಿಗಾಗಿ ಈ ಯೋಜನೆಯಡಿ ಉಳಿತಾಯ ಖಾತೆ ತೆರೆದ್ರೆ ತುಂಬಾ ಲಾಭ:

ಬೆಂಗಳೂರು, ಡಿ. 14: ಭಾರತ ಸರ್ಕಾರವು ಅನೇಕ ಕಲ್ಯಾಣ ಯೋಜನೆಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಉಳಿತಾಯ ಹಾಗೂ ಲಾಭದಾಯಕ ಹೂಡಿಕೆಯನ್ನು ಮಾಡಲು ಬಯಸುವವರು ಈ ಸೇವಿಂಗ್ಸ್‌ ಸ್ಕೀಮ್ಸ್‌ ಗಳ ಬಗ್ಗೆ ಹೆಚ್ಚು ವಿವರವಾಗಿ ತಿಳಿದುಕೊಳ್ಳಬೇಕು. ಭಾರತದಲ್ಲಿನ ಅಂಚೆ ಕಛೇರಿಗಳು ಹೆಚ್ಚಿನ-ಬಡ್ಡಿ ದರಗಳೊಂದಿಗೆ ವಿವಿಧ ರೀತಿಯ ಉಳಿತಾಯ ಯೋಜನೆಗಳನ್ನು ನೀಡುತ್ತವೆ. ಯೋಜನೆಯನ್ನು ಆಯ್ಕೆ ಮಾಡಲು ಇಚ್ಛಿಸುವವರು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದು. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಹಣವನ್ನು ಠೇವಣಿ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಪೋಸ್ಟ್‌ ಆಫೀಸ್‌ ಗಳಲ್ಲಿರುವವರು ಸ್ಕೀಮ್ಸ್‌ ಗಳ ಪ್ರಯೋಜನಗಳು ಮತ್ತು ಇತರ ವಿಷಯಗಳ ಕುರಿತು ಹೆಚ್ಚಿನ ವಿವರಗಳನ್ನು ನೀಡುತ್ತಾರೆ.

ಇನ್ನು ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕೂ ಇಲ್ಲಿ ಹಣ ಠೇವಣಿ ಮಾಡಿ ಲಾಭ ಪಡೆಯಬಹುದು. ಆಯ್ಕೆಗಳ ಆಧಾರದ ಮೇಲೆ ತಮ್ಮ ಮಕ್ಕಳಿಗೆ ಸರಿಯಾದ ಯೋಜನೆಗಳನ್ನು ಆಯ್ಕೆ ಮಾಡಬಹುದು. ಖಾತೆಯನ್ನು ತೆರೆಯುವಾಗ ಅರ್ಹತೆ ಮತ್ತು ಇತರ ಸೂಚನೆಗಳನ್ನು ಅನುಸರಿಸಬೇಕು. ಮಕ್ಕಳಿಗಾಗಿ ಹಾಗೂ ಭವಿಷ್ಯಕ್ಕಾಗಿ ಪೋಸ್ಟ್ ಆಫೀಸ್ ಯೋಜನೆಯು ವಿವಿಧ ಪ್ರಕಾರಗಳನ್ನು ಒಳಗೊಂಡಿವೆ. ಇದು ಪೋಷಕರಿಗೆ ಉಜ್ವಲ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಕಡಿಮೆ ಸಮಯದಲ್ಲಿ ಲಾಭ ಬಯಸುವವರಿಗೆ ಪೋಸ್ಟ್‌ ಆಫೀಸ್‌ ಯೋಜನೆಗಳು ಪ್ರಯೋಜನಕಾರಿಯಾಗಿರುವದಂತು ಖಚಿತ.

ಪೋಸ್ಟ್‌ ಆಫಿಸ್‌ ನ ಎಂಐಎಸ್‌ ಉಳಿತಾಯ ಯೋಜನೆ ದೊಡ್ಡವರಿಗಷ್ಟೇ ಅಲ್ಲದೇ, ಮಕ್ಕಳಿಗೂ ಸಹಾಯವಾಗುತ್ತದೆ. ಎಂಐಎಸ್‌ ಯೋಜನೆಯಲ್ಲಿ ಹಣ ಹೂಡಿದರೆ ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ಲಾಭ ಪಡೆಯಬಹುದು. ಇದು 10 ವರ್ಷ ಮೇಲಪಟ್ಟ ಮಕ್ಕಳ ಹೆಸರಲ್ಲೂ ಎಂಐಎಸ್ ಯೋಜನೆಯ ಖಾತೆಯನ್ನು ತೆರೆಯಬಹುದಾಗಿದೆ. ಇದು ಪೋಸ್ಟ್‌ ಆಫೀಸ್‌ ಮಾಸಿಕ ಆದಾಯ ಯೋಜನೆಯಾಗಿದೆ. ಈ ಖಾತೆಯನ್ನು ತೆರೆಯುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿ..

ಎಂಐಎಸ್ ಖಾತೆಯನ್ನು ತೆರೆಯುವುದು ಹೇಗೆ..?
ನಿಮ್ಮ ಮನೆಗೆ ಹತ್ತಿರವಿರುವ ಅಂಚೆ ಕಚೇರಿಗೆ ಹೋಗಿ ಎಂಐಎಸ್‌ ಯೋಜನೆಗೆ ಖಾತೆಯನ್ನು ತೆರೆಯಬಹುದು.
ಎಂಐಎಸ್‌ ಯೋಜನೆಗೆ ಖಾತೆಯಲ್ಲಿ ಕನಿಷ್ಠ 1000 ರೂ. ಮತ್ತು ಗರಿಷ್ಠ 4.5 ಲಕ್ಷ ರೂ. ಠೇವಣಿಯನ್ನು ಇಡಬಹುದಾಗಿದೆ.   ಜಾಯಿಂಟ್‌ ಅಕೌಂಟ್‌ ತೆರೆದರೆ 9 ಲಕ್ಷ ರೂ. ಠೇವಣಿ ಇಡಲು ಇದರಲ್ಲಿ ಅವಕಾಶವಿದೆ.
ಪ್ರಸ್ತುತ ಎಂಐಎಸ್‌ ಯೋಜನೆಯ ಅಡಿಯಲ್ಲಿ ಶೇ. 6.7ರಷ್ಟು ಬಡ್ಡಿ ದರವಿದೆ.

ನೀವು ನಿಮ್ಮ ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಲು ಇಚ್ಛಿಸಿದರೆ, ಸುಲಭವಾಗಿ ತೆರೆಯಬಹುದು. ಆದರೆ ಮಕ್ಕಳ ವಯಸ್ಸು 10 ವರ್ಷ ಇರಬೇಕು. ಇಲ್ಲವೇ ನಿಮ್ಮ ಹೆಸರಿನಲ್ಲಿ ಖಾತೆ ತೆರೆಯಬೇಕು. ಎಂಐಎಸ್‌ ಯೋಜನೆಯ ಮುಕ್ತಾಯದ ಸಮಯ 5 ವರ್ಷಗಳಾಗಿರುತ್ತದೆ.  ಇನ್ನು ನೀವೇನಾದರೂ 4 ಲಕ್ಷ ಹಣವನ್ನು ಠೇವಣಿ ಮಾಡಿದರೆ, ಪ್ರತಿ ತಿಂಗಳು ನಿಮಗೆ 2233 ರೂ. ಬಡ್ಡಿ ರೂಪದಲ್ಲಿ ಬರುತ್ತದೆ. ಐದು ವರ್ಷಗಳಲ್ಲಿ ಈ ಬಡ್ಡಿಯ ಹಣ ಒಟ್ಟು 133,980 ರೂಪಾಯಿ ಆಗುತ್ತದೆ.

ಐೋಜನೆ ಮೆಚ್ಯುರಿಟಿಯಾದ ಮೇಲೆ ನಿಮ್ಮ ಠೇವಣಿ ಹಣ 4 ಲಕ್ಷವನ್ನು ಕೂಡ ಸಂಪೂರ್ಣವಾಗಿ ಪಡೆಯಬಹುದು. ಬಡ್ಡಿಯನ್ನು ಪ್ರತಿ ತಿಂಗಳು ಪಡೆದರೆ, ನಿಮ್ಮ ಮಕ್ಕಳಿಗಾದರೆ ಶಾಲೆಯನ್ನು ಹೊರತು ಪಡಿಸಿದ ಆಕ್ಟಿವಿಟಿಗಳಾದ, ಸಂಗೀತ ಶಾಲೆ, ನೃತ್ಯ ಕಲಿಕೆ, ಸ್ವಿಮ್ಮಿಂಗ್‌, ಬೋಧನಾ ಶುಲ್ಕಗಳಿಗೆ ಬಳಸಬಹುದು. ಪೋಷಕರಿಗೆ ಇದು ಹೊರೆಯಾಗುವುದಿಲ್ಲ. ಅಕಸ್ಮಾತ್‌ ಮಧ್ಯದಲ್ಲಿ ಹಣವನ್ನು ಹಿಂಪಡೆಯಬೇಕೆಂದರೆ, ಅದಕ್ಕೆ ತಕ್ಕದಾದ ಕಾರಣವನ್ನು ನೀಡಿ ಪಡೆಯಬಹುದಾಗಿದೆ. ಠೇವಣಿ ಇಟ್ಟವರು ಮೃತಪಟ್ಟರೆ, ಜಾಯಿಂಟ್‌ ಅಕೌಂಟ್‌ ಹೊಂದಿದ್ದು, ಅದರಲ್ಲಿ ಒಬ್ಬರು ಸಾವನ್ನಪ್ಪಿದ್ದರೆ ಹಣವನ್ನು ಮೆಚ್ಯುರಿಟಿಗೂ ಮುನ್ನವೇ ಹಿಂಪಡೆಯಬಹುದಾಗಿದೆ.

Related News

spot_img

Revenue Alerts

spot_img

News

spot_img