22 C
Bengaluru
Monday, December 23, 2024

ಅಂಚೆ ಕಚೇರಿ ಫ್ರಾಂಚೈಸ್ ಯೋಜನೆ?ಅಂಚೆ ಕಚೇರಿ ಫ್ರಾಂಚೈಸ್​ನಿಂದ ಎಷ್ಟು ಆದಾಯ ಗಳಿಸಬಹುದು?

ಬೆಂಗಳೂರು;ಜನರು ಬಯಸಿದಂತೆ ಸಣ್ಣ ಉಳಿತಾಯ ಯೋಜನೆಗಳು ಭಾರತದಲ್ಲಿ ಬಹಳ ಜನಪ್ರಿಯವಾಗಿವೆ. ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಕೋನದಿಂದ ಜನರು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ಯಾವುದೇ ಉದ್ಯಮ ಸ್ಥಾಪಿಸಲು ಮೊದಲು ಬಂಡವಾಳ ಬೇಕಾಗುತ್ತದೆ. ಬಂಡವಾಳ ಬೇಕಾದರೆ ಮೊದಲು ಹೂಡಿಕೆ ಮಾಡಬೇಕಾಗುತ್ತದೆ.ಕಡಿಮೆ ಹೂಡಿಕೆಯೊಂದಿಗೆ ಭರ್ಜರಿ ಆದಾಯ ಗಳಿಸಬಲ್ಲ ಕಿರು ಉದ್ಯಮ ಸ್ಥಾಪಿಸಲು ಭಾರತೀಯ ಅಂಚೆ ಇಲಾಖೆ ಒಂದು ಅವಕಾಶ ಒದಗಿಸಿದೆ..

ಅಂಚೆ ಇಲಾಖೆಯ ಫ್ರಾಂಚೈಸ್​ ಸ್ಕೀಮ್​ನ ಸಂಪೂರ್ಣ ವಿವರ ಇಲ್ಲಿದೆ.

ಅಂಚೆ ಇಲಾಖೆಯ (Indian Post) ಫ್ರಾಂಚೈಸ್​ ಸ್ಕೀಮ್​ ಮೂಲಕ ಕಡಿಮೆ ಹೂಡಿಕೆಯೊಂದಿಗೆ ಉತ್ತಮ ಆದಾಯ, ಲಾಭ ಗಳಿಸಬಹುದಾಗಿದೆ. ಈ ಯೋಜನೆಗೆ ಕನಿಷ್ಠ 5,000 ರೂ. ಹೂಡಿಕೆ ಮಾಡಬೇಕಾಗುತ್ತದೆ. ಭಾರತೀಯ ಅಂಚೆ ಇಲಾಖೆಯು ಕೇವಲ ಅಂಚೆ ಸೇವೆ ಮಾತ್ರವಲ್ಲದೆ ಅನೇಕ ಸೇವೆಗಳನ್ನು ಒದಗಿಸುತ್ತಿದೆ. ಸಣ್ಣ ಉಳಿತಾಯ ಖಾತೆಗಳು, ಆರ್​ಡಿ, ಆಧಾರ್ ಅಪ್​ಡೇಟ್ ಇತ್ಯಾದಿ ಸೇವೆಗಳು ಅಂಚೆ ಕಚೇರಿಗಳಲ್ಲಿ ದೊರೆಯುತ್ತವೆ. ಆದರೆ ಸದ್ಯ ದೇಶದಲ್ಲಿರುವ ಅಂಚೆ ಕಚೇರಿಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಸರ್ಕಾರ ಫ್ರಾಂಚೈಸ್​ಗಳ ಮೂಲಕ ಅಂಚೆ ಕಚೇರಿಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಸಾರ್ವಜನಿಕರೂ ಫ್ರಾಂಚೈಸ್ ತೆರೆಯಬಹುದಾಗಿದೆ. ಆ ಮೂಲಕ ಆದಾಯ ಗಳಿಸಬಹುದಾಗಿದೆ.

ಅಂಚೆ ಕಚೇರಿ ಫ್ರಾಂಚೈಸ್ ಯೋಜನೆ?

ಅಂಚೆ ಇಲಾಖೆ ಎರಡು ರೀತಿಯ ಪ್ರಾಂಚೈಸ್​ಗೆ​​ ಅವಕಾಶ ನೀಡುತ್ತದೆ. ಅವುಗಳೆಂದರೆ,
*ಫ್ರಾಂಚೈಸ್ಡ್ ಔಟ್​ಲೆಟ್
* ಫ್ರಾಂಚೈಸೀ ಆಫ್​ ಪೋಸ್ಟಲ್ ಏಜೆಂಟ್ಸ್.

ಫ್ರಾಂಚೈಸ್ಔಟ್​ಲೆಟ್ ಅಡಿಯಲ್ಲಿಅಂಚೆ ಕಚೇರಿ ಇಲ್ಲದ ಕಡೆಗಳಲ್ಲಿ ಕಚೇರಿ ತೆರೆಯಬಹುದು. ಪೋಸ್ಟಲ್​ ಏಜೆಂಟ್​ಗಳಾದರೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಸ್ಟೇಷನರಿ ಮತ್ತು ಅಂಚೆ ಸ್ಟಾಂಪ್​ಗಳ ವಿತರಣೆ ಮಾಡಬೇಕಾಗುತ್ತದೆ.

ಅಂಚೆ ಕಚೇರಿ ಫ್ರಾಂಚೈಸ್​ ತೆರೆಯಲು ಎಷ್ಟು ಖರ್ಚಾಗುತ್ತದೆ?

ಅಂಚೆ ಕಚೇರಿ ಫ್ರಾಂಚೈಸ್ ತೆರೆಯಲು 5,000 ರೂ. ಬಧ್ರತಾ ಠೇವಣಿ ಇಡಬೇಕಾಗುತ್ತದೆ. ಉಳಿದಂತೆ ಸ್ಟೇಷನರಿ ವಸ್ತುಗಳ ಖರೀದಿ ಇತ್ಯಾದಿಗಳಿಗೆ ತುಸು ಖರ್ಚಾಗಬಹುದು. ಫ್ರಾಂಚೈಸ್​ಗಾಗಿ ಕನಿಷ್ಠ 200 ಚದರ ಅಡಿಯ ಕಚೇರಿ ಸ್ಥಳ ಬೇಕಾಗುತ್ತದೆ.

ಅಂಚೆ ಕಚೇರಿ ಫ್ರಾಂಚೈಸ್​ನಿಂದ ಎಷ್ಟು ಆದಾಯ ಗಳಿಸಬಹುದು?

ಬುಕಿಂಗ್ ರಿಜಿಸ್ಟರ್ಡ್ ಆರ್ಟಿಕಲ್ಸ್ – 3 ರೂ.
ಬುಕಿಂಗ್ ಸ್ಪೀಡ್​ ಪೋಸ್ಟ್ ಆರ್ಟಿಕಲ್ಸ್ – 5 ರೂ.
ಮನಿ ಆರ್ಡರ್ ಬುಕಿಂಗ್ (100 – 200 ರೂ.ವರೆಗೆ) – 3.50 ರೂ.
ಮನಿ ಆರ್ಡರ್ ಬುಕಿಂಗ್ (200 ರೂ. ಮೇಲ್ಪಟ್ಟ) – 5 ರೂ.
ತಿಂಗಳಿಗೆ 1,000 ರೂ.ಗಿಂತ ಹೆಚ್ಚು ಮೊತ್ತದ ಸ್ಪೀಡ್ ಮತ್ತು ರಿಜಿಸ್ಟರ್ಡ್ ಪೋಸ್ಟ್ ಮಾಡಿದರೆ – ಶೇ 20ರಷ್ಟು ಹೆಚ್ಚುವರಿ ಕಮಿಷನ್
ಚಿಲ್ಲರೆ ಸೇವೆಗಳಿಗೆ – ಗಳಿಸಿದ ಆದಾಯಕ್ಕೆ ಶೇ 40ರ ಕಮಿಷನ್.

ಒಟ್ಟಿನಲ್ಲಿ ಅಂಚೆ ಕಚೇರಿ ಫ್ರಾಂಚೈಸ್​ನಿಂದ ನಿಗದಿತ ಆದಾಯ ಎಂಬುದು ಇಲ್ಲವಾದರೂ ತಾವು ನೀಡಿದ ಸೇವೆಗಳಿಗೆ ಅನುಗುಣವಾಗಿ ಕಮಿಷನ್ ದೊರೆಯುತ್ತದೆ. ಹೆಚ್ಚೆಚ್ಚು ಸೇವೆಗಳನ್ನು ನೀಡಿದಷ್ಟೂ ಕಮಿಷನ್ ಹೆಚ್ಚು ದೊರೆಯುತ್ತದೆ

Related News

spot_img

Revenue Alerts

spot_img

News

spot_img