21.2 C
Bengaluru
Saturday, March 1, 2025

ಎಫ್ ಡಿಯಲ್ಲಿ ಹೂಡಿಕೆ ಮಾಡಲು ಅಂಚೆ ಇಲಾಖೆ ಹಾಗೂ ಎಸ್‌ ಬಿಐ ಇವರೆಡರಲ್ಲಿ ಯಾವುದು ಬೆಸ್ಟ್..

ಬೆಂಗಳೂರು, ಏ. 25 : ಕೈಯಲ್ಲಿ ಹಣ ಇದ್ದರೆ, ಉಳಿತಾಯ ಮಾಡಲು ಸಾಧ್ಯವಿಲ್ಲ ಎಂದು ಹಲವರು ಬ್ಯಾಂಕ್‌ ಗಳಲ್ಲಿ ಠೇವಣಿ ಮಾಡಲು ಇಚ್ಛಿಸುತ್ತಾರೆ. ಬ ಯಾಂಕ್‌ ಗಳಲ್ಲಿ ಹಣವನ್ನು ಸಾಕಷ್ಟು ರೀತಿಯಲ್ಲಿ ಠೇವಣಿ ಮಾಡಬಹುದಾಗಿದೆ. ಬ್ಯಾಂಕ್‌ ಗಳಲ್ಲಿ ಹಲವು ರೀತಿಯ ಯೋಜನೆಗಳಿದ್ದು, ಗ್ರಾಹಕರಿಗೆ ಸೂಕ್ತ ಎನಿಸುವ ಯೋಜನೆಗಳಲ್ಲಿ ಹೂಡಿಕೆ ಮಾಡಿ ಬಡ್ಡಿಯನ್ನು ಪಡೆಯಬಹುದು. ಬ್ಯಾಂಕ್‌ ಗಳಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚಿಗೆ ಬಡ್ಡಿದರವನ್ನು ಕೂಡ ನೀಡಲಾಗುತ್ತದೆ. ಹಣ ಠೇವಣಿ ಮಾಡಲು ಸುರಕ್ಷತೆಯ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ.

ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಯಾರೂ ಯೋಚಿಸುವುದೇ ಇಲ್ಲ. ಇದು ಸರ್ಕಾರದ ಅಡಿಯಲ್ಲಿರುವುದರಿಂದ ಯಾರೂ ಯೋಚನೆಯೇ ಮಾಡದೇ ಅಂಚೆ ಇಲಾಖೆಯಲ್ಲಿ ಹೂಡಿಕೆ ಮಾಡುತ್ತಾರೆ. ಈಗ ಆರ್ ಬಿಐ ರೆಪೋ ದರದಲ್ಲಿ ಭಾರೀ ಏರಿಕೆ ಕಂಡ ಹಿನ್ನೆಲೆ ಬ್ಯಾಂಕ್ ಗಳ ಟರ್ಮ್ ಡೆಫಾಸಿಟ್ ಗಳ ಮೇಲಿನ ಬಡ್ಡಿದರ ಹೂಡ ಹೆಚ್ಚಳವಾಗಿದೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಥಿರ ಠೇವಣಿ ಮೇಲೆ ಶೇ.3ರಿಂದ ಶೇ.7.5ರ ತನಕ ಬಡ್ಡಿ ನೀಡುತ್ತಿದೆ. ಹಣ ಹೂಡಿಕೆ ಮಾಡುವ ಯೋಚನೆಯಲ್ಲಿರುವವರಿಗೆ ಎಸ್‌ ಬಿಐ ಅಥವಾ ಅಂಚೆ ಇಲಾಖೆ ಇದರಡರಲ್ಲಿ ಯಾವುದು ಬೆಸ್ಟ್‌ ಎಂದು ತಿಳಿಯೋಣ ಬನ್ನಿ.

ಹಣವನ್ನು ಹೂಡಿಕೆ ಮಾಡುವ ಮುನ್ನ ಐಾವುದರಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌ ಎಂದು ತಿಳಿಯಿರಿ. ಯಾವುದರಲ್ಲಿ ಬಡ್ಡಿದರ ಹೆಚ್ಚಿದೆ. ಸ್ಥಿರ ಠೇವಣಿಯ ರಿಟರ್ನ್ಸ್‌ ಬಗ್ಗೆ ತಿಳಿಯಿರಿ. ಕಿರು ಅವಧಿಗೆ ಡೆಪಾಸಿಟ್‌ ಮಾಡುವ ಆಲೋಚನೆ ಇದ್ದರೆ, ಎಸ್‌ ಬಿಐ ನಲ್ಲಿ ಠೇವಣಿ ಮಾಡಬಹುದು. ಎಸ್‌ ಬಿಐ ನಲ್ಲಿ 7ದಿನದಿಂದ ಹಿಡಿದು 10ವರ್ಷದವರೆಗೂ ಠೇವಣಿ ಮಾಡಲು ಅವಕಾಶವಿದೆ. ಅದೇ ಅಂಚೆ ಕಚೇರಿಯಲ್ಲಿ 1,2,3 ಹಾಗೂ 5 ವರ್ಷಗಳ ಅವಧಿಗೆ ಠೇವಣಿ ಮಾಡಬಹುದಾಗಿದೆ. ಇನ್ನು ರಿಟನರ್ಸ್‌ ಬರುವಾಗ ಬಡ್ಡಿ ಯಾವುದರಲ್ಲಿ ಹೆಚ್ಚು ಬರುತ್ತದೆ ಎಂಬುದನ್ನೂ ಆಲೋಚಿಸಿ ಠೇವಣಿ ಮಾಡಿ.

ಇನ್ನು ಎಸ್‌ ಬಿಐನಲ್ಲಿ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿ ಮೇಲೆ ಶೇ.3ರಿಂದ ಶೇ.7ರಷ್ಟು ಬಡ್ಡಿಯನ್ನು ನೀಡುತ್ತದೆ. ಅದೇ ಹಿರಿಯ ನಾಗರಿಕರಿಗೆ ಶೇ.0.5ರಷ್ಟು ಹೆಚ್ಚುವರಿ ಬಡ್ಡಿ ವಿಧಿಸಲಾಗಿದೆ. ಇತ್ತೀಚೆಗೆ ಎಸ್ ಬಿಐ ಅಮೃತ್ ಕಲಶ್ ಎಂಬ ವಿಶೇಷ ಯೋಜನೆಯನ್ನು ಕೂಡ ಪರಿಚಯಿಸಿದೆ. ಇದರಲ್ಲಿ 400 ದಿನಗಳ ಅವಧಿಯ ಎಫ್ ಡಿ ಠೇವಣಿ ಮಾಡಿದರೆ, ಸಾಮಾನ್ಯರಿಗೆ 7.10 ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇ.7.6 ಬಡ್ಡಿದರವನ್ನು ವಿಧಿಸಲಾಗಿದೆ. ಅಂಚೆ ಕಚೇರಿ ಟರ್ಮ್ ಡೆಫಾಸಿಟ್ ನಲ್ಲಿ ಶೇ.6.8 ಹಾಗೂ ಶೇ.7.5ರ ನಡುವೆ ಬಡ್ಡಿ ನಿಗಧಿಪಡಿಸಲಾಗಿದೆ.

ಇನ್ನು ಎಸ್ ಬಿಐ ಹಾಗೂ ಅಂಚೆ ಕಚೇರಿ ಎಫ್ ಡಿ ಎರಡರಲ್ಲೂ ಕೂಡ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ನೀಡಲಾಗುತ್ತದೆ. ಅಂಚೆ ಕಚೇರಿಯ ಯಾವುದೇ ಎಫ್ ಡಿಯನ್ನು ಪ್ರಾರಂಭದ ದಿನದಿಂದ ಹಿಡಿದು ಆರು ತಿಂಗಳಿಗೂ ಮುನ್ನ ವಿತ್ ಡ್ರಾ ಮಾಡಲು ಅವಕಾಶವಿಲ್ಲ. ಒಂದು ವೇಳೆ ಅವಧಿಪೂರ್ಣ ಹಣ ಪಡೆಯಬೇಕೆಂದರೆ, ಉಳಿತಾಯ ಖಾತೆಯ ಬಡ್ಡಿಯನ್ನು ಮಾತ್ರವೇ ಎಫ್‌ ಡಿಗೆ ನೀಡಲಾಗುತ್ತದೆ. ಎಸ್ ಬಿಐ ಅವಧಿಪೂರ್ಣ ವಿತ್‌ ಡ್ರಾ ಮಾಡಲು ದಂಡ ವಿಧಿಸಲಾಗುತ್ತದೆ.

Related News

spot_img

Revenue Alerts

spot_img

News

spot_img