22.9 C
Bengaluru
Friday, July 5, 2024

ಮನೆ ನಿರ್ಮಾಣ ಮಾಡುವಾಗ ಪೂಜಾ ರೂಮ್ ಅನ್ನು ವಿಭಿನ್ನವಾಗಿ ನಿರ್ಮಿಸಲು ಸಲಹೆಗಳು

ಬೆಂಗಳೂರು, ಮೇ. 16 : ಮನೆಯ ದೇವರ ಕೋಣೆಯನ್ನು ನಿರ್ಮಾಣ ಮಾಡುವಾಗ ಸ್ವಲ್ಪ ಎಚ್ಚರವಹಿಸಿ, ವಿಭಿನ್ನವಾಗಿ ನಿರ್ಮಾಣ ಮಾಡಬಹುದು. ಮರದ ಹಲಗೆಗಳನ್ನು ಬಳಸಿ, ಆಕರ್ಷಕವಾಗಿ ನಿಮ್ಮ ದೇವರ ಕೋಣೆಯನ್ನು ವಿನ್ಯಾಸಗೊಳಿಸಲು ನಿಮಗೆ ಅವಕಾಶವಿರುತ್ತದೆ. ಮನೆಯ ಯಾವುದೇ ಮೂಲೆಯಲ್ಲಿ ಬೇಕಿದ್ದರೂ ಪೂಜಾ ಕೊಠಡಿಯನ್ನು ಇರಿಸಬಹುದು. ಮೂಲೆಯಲ್ಲಿ ದೇವರ ಕೋಣೆಯನ್ನು ಇರಿಸಿದರೆ, ಮನೆಯ ಹೆಚ್ಚಿನ ಜಾಗವೂ ಆಕ್ರಮಿಸಿಕೊಳ್ಳುವುದಿಲ್ಲ.

ದೇವರ ಮನೆಯ ಕಾನ್ಸೆಪ್ಟ್ ಆದಷ್ಟು ಯೂನಿಕ್ ಆಗಿ ಇರಲಿ. ದೇವರ ಮನೆಯನ್ನು ಸ್ವಲ್ಪ ಎತ್ತರಕ್ಕೆ ಮಾಡಬಹುದು. ಮನೆಯ ಫ್ಲೋರ್ ನಿಂದ ದೇವರ ಮನೆಯನ್ನು ಮೂರು ಅಡಿ ಎತ್ತರಿಸಿ ನಿರ್ಮಾಣ ಮಾಡಿ. ಇದಕ್ಕೆ ಎರಡು ಮೆಟ್ಟಿಲುಗಳನ್ನು ಇಡಿ.. ಮೆಟ್ಟಿಲುಗಳು ಅರ್ಧ ವೃತ್ತಾಕಾರದಲ್ಲಿ ಇರಲಿ. ಇದರಿಂದ ಮನೆಯ ಒಳಗೆ ಓಡಾಡುವಾಗ ಯಾರ ಕಾಲಿಗೂ ತಗಲುವುದಿಲ್ಲ. ಇನ್ನು ದೇವರ ಮನೆಯ ಬಾಗಿಲುಗಳಿಗೆ ಡೊಒದೆನ ಫ್ರೇಮ್ ಇದ್ದು, ಗ್ಲಾಸ್ ಅನ್ನು ಹಾಕಿ.

ಆದಷ್ಟು ದೇವರ ಮನೆಯನ್ನು ಕ್ಲೀನ್ ಮಾಡಿಕೊಳ್ಳುವುದಕ್ಕೆ ಸುಲಭವಾಗಿರುವುದಕ್ಕಾಗಿ ಡಿಸೈನ್ ಇಲ್ಲದೆಯೇ ಬಾಗಿಲು ಹಾಗೂ ಹೊಸ್ತಿಲನ್ನು ನಿರ್ಮಾಣ ಮಾಡುವುದು ಸೂಕ್ತ. ಇಲ್ಲ ಡಿಸೈನ್ ಬೇಕೆಂದರೆ, ಮಾಡಿಸಬಹುದು. ದೇವರ ಮನೆಯೊಳಗೆ ವೈಟ್ ಸೆರಾಮಿಕ್ ಟೈಲ್ಸ್ ನಿಂದ ಗೋಡೆಗಳು ಕೂಡಿರಲಿ. ಇದು ಕೋಣೆಯೊಳಗೆ ಶಾಂತತೆಯನ್ನು ಕಾಪಾಡುತ್ತದೆ. ಇನ್ನು ದೇವರನ್ನು ಇಡಲು ಪೀಠದಂತೆ ಶೆಲ್ಫ್ ಮಾಡಿಸಿ. ಅದರ ಕೆಳಗಿನ ಜಾಗವನ್ನು ಖಾಲಿ ಬಿಡುವ ಬದಲು ಡ್ಯಾಯರ್ ಅಥವಾ ಕಬೋರ್ಡ್ ಅನ್ನು ಮಾಡಿಸಿ.

ಮನೆಯ ಲಿವಿಂಗ್ ರೂಮ್ ನಲ್ಲೂ ದೇವರ ಕೋಣೆ ಇದ್ದರೆ ನೋಡಲು ಆಕರ್ಷಕವಾಗಿರುತ್ತದೆ. ನಿಮಗೆ ಬೇಕಾದ ಹಾಗೆ ಇದನ್ನು ವಿನ್ಯಾಸವನ್ನೂ ಮಾಡಬಹುದು. ಆದರೆ, ನಿಮ್ಮ ಮನೆಗೆ ದೇವರ ಕೋಣೆಯನ್ನು ಆಯ್ಕೆ ಮಾಡುವಾಗ ಕೊಂಚ ಯೋಚಿಸಿ ನಿರ್ಧರಿಸಿ. ಬಜೆಟ್, ವಾಸ್ತು ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳುವುದು ಸೂಕ್ತವಾಗಿರುತ್ತದೆ.

Related News

spot_img

Revenue Alerts

spot_img

News

spot_img