22.4 C
Bengaluru
Friday, November 22, 2024

ಕರ್ನಾಟಕ ವಿಧಾನಸಭಾ ಚುನಾವಣೆಗ ಕಣ್ಮಣ ಸೆಳೆಯುವಂತೆ ಸಿಂಗಾರಗೊಳ್ಳುತ್ತಿವೆ ಮತಗಟ್ಟೆಗಳು

ಮೈಸೂರುಮೇ 5: ವಿಧಾನಸಭಾ ಚುನಾವಣೆಗೆ ಕೆಲವೇದಿನಗಳು ಉಳಿದಿದ್ದು ಪ್ರಚಾರದ ಭರಾಟೆ ಒಂದೆಡೆಯಾದರೆ, ಮತಗಟ್ಟೆಗಳನ್ನು ಸುಂದರವಾಗಿಸಲು ಜಿಲ್ಲಾಡಳಿತ ಹಲವು ಯೋಜನೆ ಕೈಗೊಳ್ಳಲಾಗಿದೆ.ಯುವ, ಸಖಿ, ವಿಶೇಷಚೇತನ, ಮಾದರಿ ಹಾಗೂ ಸಾಂಪ್ರದಾಯಿಕ ಮತಗಟ್ಟೆಗಳು ಈ ಬಾರಿ ನಾನಾ ರೀತಿಯಲ್ಲಿ ಮತದಾರರ ಕೈ ಬಿಸಿ ಕರೆಯಲಿವೆ.ಪ್ರಜಾಪ್ರಭುತ್ವದಲ್ಲಿ ಮತದಾರರರೇ ಪ್ರಭುಗಳು, ಈ ಮತದಾರರ ಪ್ರಭುಗಳು ಚುನಾವಣೆಯಲ್ಲಿ ತಮ್ಮ, ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಲು ಅವರಿಗೆ ಅಗತ್ಯ ಅರಿವು ಮತ್ತು ಮತದಾನದ ಮಹತ್ವ ಕುರಿತು ತಿಳಿಸಲು , ಅದರಂತೆ ತಾಲೂಕಿನಲ್ಲಿ ಮತಗಟ್ಟೆಗಳು ಕಣ್ಮಣ ಸೆಳೆಯುವಂತೆ ಸಿಂಗಾರಗೊಳ್ಳುತ್ತಿದ್ದು, ಮತದಾರರನ್ನು ಮತದಾನ ಕೇಂದ್ರಗಳತ್ತ ಆಕರ್ಷಿಸುತ್ತಿವೆ

ಜಿಲ್ಲಾ ಸ್ವೀಪ್‌ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ 8 ಕ್ಷೇತ್ರಗಳಲ್ಲಿ ಬರುವ 2114 ಮತಗಟ್ಟೆಗಳ ಪೈಕಿ 68 ಮತಗಟ್ಟೆಗಳು ಈ ಬಾರಿ ನಾನಾ ರೀತಿಯಲ್ಲಿ ಕಂಗೊಳಿಸಲಿವೆ. 38 ಸಖಿ ಬೂತ್‌ , 7 ವಿಶೇಷೇಚೇತನರ ಮತಗಟ್ಟೆ , 7 ಮಾದರಿ ಮತಗಟ್ಟೆ, 7 ಯುವಕರ ಮತಗಟ್ಟೆ ಮತ್ತು 9 ಸಾಂಪ್ರದಾಯಿಕ ಮತಗಟ್ಟೆಗಳನ್ನು ರೂಪಿಸಲಾಗಿದೆ. ಒಂದೊಂದು ಮತಗಟ್ಟೆಗಳು ನಾನಾ ವಿಧಗಳಲ್ಲಿ ಜನಾಕರ್ಷಿಸಲಿವೆ.ಚುನಾವಣೆಯಲ್ಲಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು , ಪ್ರತಿಯೊಂದು ಮತವೂ ನಿರ್ಣಾಯಕವಾಗಿದ್ದು, ಎಲ್ಲಾ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವಿನೂತನ ಕಾರ್ಯಕ್ರಮಗಳ ಮೂಲಕ ಅರಿವು ಮತ್ತು ಜಾಗೃತಿ ಮೂಡಿಸಲಾಗುತ್ತಿದೆ. ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಆಕರ್ಷಕ ಚಿತ್ರಗಳನ್ನು ಬಿಡಿಸುವ ಉದ್ದೇಶವಿದ್ದು, ಈ ಮೂಲಕ, ಮತದಾರರ ಗಮನವನ್ನು ಮತಗಟ್ಟೆಯ ಕಡೆಗೆ ಸೆಳೆಯುವ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವಂತೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ

ವಿಶ್ವಾಸ ತುಂಬುವ ವಿಶೇಷಚೇತನರ ಮತಗಟ್ಟೆ ವಿಶೇಷಚೇತನರು ಸಹ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ ಹಾಗೂ ಅವರಲ್ಲೂ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ 8 ಕ್ಷೇತ್ರದಲ್ಲಿ 7 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ವಿವಿಧ ಬಣ್ಣಗಳಿಂದ ಅವರಿಗೆ ತಿಳಿಯುವಂತೆ ವೀಲ್ಚೇರ್, ಸನ್ನೆಯ ಚಿತ್ತಾರ ಹಾಗೂ ಮತದಾನ ಮಾಡುವ ಚಿತ್ರಗಳನ್ನು ಬರೆದು ಮತಗಟ್ಟೆಯನ್ನು ಅಲಂಕರಿಸಲಾಗಿದೆ.

ಹುಣಸೂರಿನ ಧರ್ಮಪುರದ ಸರ್ಕಾರಿ ಪ್ರೌಢಶಾಲೆ, ತಿ.ನರಸೀಪುರ ವ್ಯಾಪ್ತಿಯ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಮತಗಟ್ಟೆ, ಪಿರಿಯಾಪಟ್ಟಣ ಬೈಲುಕುಪ್ಪೆಯ ಜಿಎಚ್‌ಪಿಎಸ್‌ ಶಾಲೆ, ನಂಜನಗೂಡಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಮೈಸೂರಿನ ತಾಲ್ಲೂಕಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿರುವ ಶೆಟ್ಟನಾಯಕನ ಹಳ್ಳಿಯ ಸರ್ಕಾರಿ ಪ್ರೌಢಶಾಲೆ, ಕೆ.ಆರ್.ನಗರ ತಾಲ್ಲೂಕಿನ ಹೆಬ್ಬಾಳು ಗ್ರಾ.ಪಂ ಕಚೇರಿ, ಎಚ್‌.ಡಿ.ಕೋಟೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವಿಶೇಷಚೇತನರಿಗಾಗಿ ವಿಶೇಷ ಮತಗಟ್ಟೆ ತೆರೆಯಲಾಗಿದೆ. ಮತಗಟ್ಟೆಗಳ ಗೋಡೆಗಳಿಗೆ ನಿಮ್ಮ ಮತವೇ ನಿಮ್ಮ ಭವಿಷ್ಯ ಎಂಬ ಚಿತ್ರ ಸಹಿತ ಘೋಷವಾಕ್ಯವೂ ಸೇರಿ ನಾನಾ ರೀತಿಯ ಚಿತ್ರಬರಹಗಳನ್ನು ಮತಗಟ್ಟೆಗಳಲ್ಲಿ ಕಾಣಬಹುದಾಗಿದೆ.ಮೊದಲ ಮತದ ಹಬ್ಬ ಪ್ರಜಾಪ್ರಭುತ್ವದ ಹಬ್ಬ ಎನಿಸಿದ ಚುನಾವಣಾ ಮತದಾನದ ಪ್ರಕ್ರಿಯೆಯಲ್ಲಿ ಮೊಟ್ಟ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸುವ ಯುವ ಮತದಾರರ ಸೆಳೆಯಲು ಯುವ ಮತಗಟ್ಟೆಗಳನ್ನು ತೆರೆಯಲಾಗಿದೆ.

 

ಮಹಿಳೆಯರನ್ನು ಮತದಾನದ ಕಡೆಗೆ ಸೆಳೆಯುವ ಉದ್ದೇಶದೊಂದಿಗೆ ಹಾಗೂ ಮಹಿಳೆಯರು ನಿಸ್ಸಂಕೋಚವಾಗಿ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಲು ಅನುಕೂಲವಾಗುವಂತೆ 38 ಭಾಗದಲ್ಲಿ ಸಖಿ‌ ಮತಗಟ್ಟೆಗಳನ್ನು ಸಿದ್ಧಗೊಳಿಸಲಾಗಿದೆ.ಮತದಾನ ದಿನದಂದು ಸಖಿ ಮತಗಟ್ಟೆಯಲ್ಲಿ ಮಹಿಳಾ ಚುನಾವಣಾಧಿಕಾರಗಳನ್ನೇ ಕಾರ್ಯನಿರ್ವಹಿಸುವುದು ಸಖಿ ಮತಗಟ್ಟೆ ವಿಶೇಷ. ಸಖಿ ಮತಗಟ್ಟೆಗಳಲ್ಲಿ ಗುಲಾಬಿ ಬಣ್ಣದಲ್ಲಿ ಪ್ರಕೃತಿಯೊಂದಿಗೆ ಮಹಿಳೆಯ ಚಿತ್ರ ಬಿಡಿಸುವ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಲಾಗುವುದು.

Related News

spot_img

Revenue Alerts

spot_img

News

spot_img