ಭಾರತೀಯರಿಗೆ ಹಬ್ಬ ಎಂದರೆ ಶುಭ ತರುವ ಸಂದರ್ಭ. ಹೆಚ್ಚಿನ ಶುಭ ಕಾರ್ಯಗಳು, ಹೊಸ ವಸ್ತು ಖರೀದಿ ಎಲ್ಲವೂ ಈ ಸಂದರ್ಭದಲ್ಲಿ ಗರಿಗೆದರುತ್ತದೆ. ಅದೇ ರೀತಿ ಮಾರುಕಟ್ಟೆಯಲ್ಲಿ ಕೂಡ ಹಬ್ಬದ ಖುಷಿಯನ್ನು ಹೆಚ್ಚಿಸುವ ಕೊಡುಗೆಗಳು ಯಥೇಚ್ಚವಾಗಿ ಕಾಣಸಿಗುತ್ತವೆ. ಮನೆ, ವಾಹನ, ಗೃಹಬಳಕೆ ಸಾಮಗ್ರಿ, ಬಟ್ಟೆ ಹೀಗೆ ಯಾವೆಲ್ಲ ವಸ್ತುಗಳಿಗೆ ಸಾಧ್ಯವೋ ಅವೆಲ್ಲವಕ್ಕೂ ಮಾರಾಟದಾರರು ರಿಯಾಯಿತಿ ಘೋಷಿಸುತ್ತಾರೆ. ಆ ಸಾಲಿಗೆ ಬ್ಯಾಂಕ್‌ಗಳು ಕೂಡ ಹೊರತಾಗಿಲ್ಲ. ದೀಪಾವಳಿ ಸಂಭ್ರಮ ಹಿಗ್ಗಿಸುವ ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಕಿರುಚಿತ್ರವೊಂದನ್ನುನಿರ್ಮಿಸಿದ್ದು ಅದು ವೈರಲ್ ಆಗುತ್ತಿದೆ.
ಹಬ್ಬದ ಸಂದರ್ಭದ ಲಾಭವನ್ನು ಪಡೆದುಕೊಳ್ಳಲು ʻನಮ್ಮದೇ ಸ್ವಂತ ಮನೆ ಮಾಡುವ ದೀಪಾವಳಿʼ (ಅಪ್ನೇ ಘರ್ ವಾಲಿ ದಿವಾಲಿ) ಎಂಬ ಅಭಿಯಾನದ ಅಂಗವಾಗಿ ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಸಂಸ್ಥೆಯು ಗ್ರಾಹಕರನ್ನು ಸೆಳೆಯಲೆಂದು ಹಿಂದಿ ಭಾಷೆಯಲ್ಲಿ ಹೊಸದೊಂದು ಕಿರುಚಿತ್ರವನ್ನು ನಿರ್ಮಿಸಿ ಹರಿಬಿಟ್ಟಿದೆ.
ಪ್ರತಿ ವರ್ಷ ದೀಪಾವಳಿ ಹತ್ತಿರವಾಗುತ್ತಿದ್ದಂತೆ, ʻಈ ಬಾರಿ ಹಬ್ಬಕ್ಕೆ ನಾವು ಏನನ್ನು ಖರೀದಿಸಲಿದ್ದೇವೆ?ʼ ಎಂಬ ನಿರೀಕ್ಷೆ ಪ್ರತಿ ಮನೆಯಲ್ಲೂ ಕುಡಿಯೊಡೆಯುತ್ತದೆ. ಅದೇ ಮಾದರಿಯಲ್ಲಿ, ದೀಪಾವಳಿ ಸಮೀಪಿಸುತ್ತಿದ್ದಂತೆ ಕುಟುಂಬವೊಂದು ಈ ಪ್ರಶ್ನೆಯ ಕುರಿತು ಉತ್ಸಾಹದಿಂದ ಆಲೋಚಿಸುವುದರೊಂದಿಗೆ ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಸಂಸ್ಥೆಯ ಪ್ರಚಾರ ಅಭಿಯಾನದ 53 ಸೆಕೆಂಡುಗಳ ʻಅಪ್ನೇ ಘರ್ ವಾಲಿ ದಿವಾಲಿʼ ಕಿರುಚಿತ್ರವು ಪ್ರಾರಂಭವಾಗುತ್ತದೆ.
ಮಕ್ಕಳು, ತಂದೆ, ತಾಯಿ, ಎಲ್ಲರೂ ದೀಪಾವಳಿ ಸಂದರ್ಭದಲ್ಲಿ ಮನೆಗೆ ಏನೇನು ಖರೀದಿ ಮಾಡಬೇಕು ಎಂದು ತಮ್ಮದೇ ಆದ ಸಲಹೆಗಳನ್ನು ನೀಡುತ್ತಾರೆ. ಅವರೆಲ್ಲರೂ ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ತಮ್ಮ ಬೇಡಿಕೆಗಳನ್ನು ಮಂಡಿಸುತ್ತಿರುತ್ತಾರೆ. ತಮ್ಮ ಆದ್ಯತೆಯ ವಸ್ತುಗಳನ್ನು ಖರೀದಿಸಲೆಂದು ಪ್ರತಿಯೊಬ್ಬರೂ ಇನ್ನೊಬ್ಬರ ಬೇಡಿಕೆಯನ್ನು ತಿರಸ್ಕರಿಸುತ್ತಾರೆ. ಹೀಗೆ ಒಬ್ಬೊಬ್ಬರಿಗೂ ಒಂದೊಂದು ಆದ್ಯತೆ ಇರುವ ಸಂದರ್ಭದಲ್ಲಿ ದೀಪಾವಳಿ ಖರೀದಿಯು ಗೊಂದಲಮಯವಾಗುತ್ತದೆ.
ಸಂಭಾಷಣೆ ಹೀಗೇ ಮುಂದುವರಿಯುತ್ತಿರಬೇಕಾದರೆ, ಅಜ್ಜಿ ತನ್ನದೇ ಆದ ಸಲಹೆಯೊಂದನ್ನು ಮುಂದಿಡುತ್ತಾರೆ. ಆಗ ಎಲ್ಲರೂ ಮೌನವಾಗಿಬಿಡುತ್ತಾರೆ. ಮನೆಯ ಕುರಿತು ಎಲ್ಲರಿಗೂ ಇಷ್ಟೊಂದು ಕಾಳಜಿ ಇರಬೇಕಾದರೆ ಮನೆಗಾಗಿ ಚಿಕ್ಕಪುಟ್ಟ ವಸ್ತು ಖರೀದಿಸುವ ಬದಲಿಗೆ ಈ ದೀಪಾವಳಿಯ ಸಂಭ್ರಮ ಹೆಚ್ಚಿಸಲು ನಮ್ಮದೇ ಒಂದು ಸ್ವಂತ ಮನೆಯನ್ನು ಯಾಕೆ ಖರೀದಿಸಬಾರದು ಎಂದು ಅಜ್ಜಿ ಅಭಿಪ್ರಾಯ ಮಂಡಿಸುತ್ತಾರೆ.
ಅಜ್ಜಿಯ ಸಲಹೆಯಲ್ಲಿನ ಸರಳತೆಯಿಂದ ಇಡೀ ಕುಟುಂಬವು ತಕ್ಷಣವೇ ದಿಗ್ಭ್ರಮೆಗೊಳ್ಳುತ್ತದೆ, ಜೊತೆಗೆ ಇದು ಅವರೆಲ್ಲರಿಗೂ ಅಪಾರ ಸಂತೋಷವನ್ನು ತರುವ ಸಲಹೆಯೂ ಆಗಿರುತ್ತದೆ. ಇಡೀ ಕುಟುಂಬದ ಸದಸ್ಯರು ಹೊಸ ಬಟ್ಟೆಗಳನ್ನು ತೊಟ್ಟು, ಹೂಗಳಿಂದ ಅಲಂಕೃತವಾದ ತಮ್ಮ ಹೊಸ ಮನೆಯಲ್ಲಿ ದೀಪಾವಳಿಯನ್ನು ಸಂಭ್ರಮಿಸುವುದರೊಂದಿಗೆ ಕಿರುಚಿತ್ರ ಮುಕ್ತಾಯವಾಗುತ್ತದೆ.
ಕಿರುಚಿತ್ರವು ʻನಮ್ಮದೇ ಸ್ವಂತ ಮನೆ ಮಾಡುವ ದೀಪಾವಳಿʼ ಅಭಿಯಾನದ ಆಶಯವನ್ನು ಸಶಕ್ತವಾಗಿ ಗ್ರಾಹಕರಿಗೆ ದಾಟಿಸುತ್ತದೆ ಮತ್ತು ಪಿಎನ್‌ಬಿ ಹೌಸಿಂಗ್ ಫೈನಾನ್ಸ್ನ ಗೃಹ ಸಾಲವು ಗ್ರಾಹಕರಿಗೆ ದೀಪಾವಳಿ ಹಬ್ಬವನ್ನು ಹೇಗೆ ವಿಶೇಷವಾಗಿಸಬಲ್ಲುದು ಎಂಬುದನ್ನು ಹೇಳುತ್ತದೆ.