23.2 C
Bengaluru
Thursday, January 23, 2025

PM ವಿಶ್ವಕರ್ಮ ಯೋಜನೆ:ಪಿಎಂ ವಿಶ್ವಕರ್ಮ ಯೋಜನೆಗೆ 13 ಸಾವಿರ ಕೋಟಿ ರೂ

#PM #Vishwakarma yojana #13 thousand crore #
ನವದೆಹಲಿ: ಪಾರಂಪರಿಕ ಕೌಶಲ್ಯಗಳನ್ನು ಉಳಿಸಿಕೊಳ್ಳುವ ಸಲುವಾಗಿ ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡುವ 13,000 ಕೋಟಿ ರೂ. ಮೊತ್ತದ ವಿಶ್ವಕರ್ಮ ಯೋಜನೆಗೆ ಸಂಪುಟ  ಅನುಮೋದನೆ ನೀಡಿದೆ.ಕೆಂಪುಕೋಟೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಪ್ರಸ್ತಾಪಿಸಿದ್ದ ಪಿಎಂ ವಿಶ್ವಕರ್ಮ ಯೋಜನೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ಈ ಯೋಜನೆಗೆ 13,000 ಕೋಟಿ ರೂ. ವೆಚ್ಚವಾಗಲಿದೆ. ಜೊತೆಗೆ ಈ ಯೋಜನೆಯಡಿಯಲ್ಲಿ 1 ಲಕ್ಷದವರೆಗಿನ ಶೇ.5ರಷ್ಟು ಬಡ್ಡಿ ಸೇರಿ ಕೆಲವೇ ಷರತ್ತು ವಿಧಿಸಿ ಸಾಲ ನೀಡಲಾಗುವುದು. ಈ ಯೋಜನೆಯು 30 ಲಕ್ಷ ಕುಟುಂಬಗಳಿಗೆ ನೆರವಾಗಲಿದೆ ಎಂದಿದ್ದಾರೆ.

ಬಡಗಿಗಳು, ದೋಣಿ ತಯಾರಕರು, ಕಮ್ಮಾರರು, ಬೀಗ ತಯಾರಿಸುವವರು, ಶಿಲ್ಪಿಗಳು, ಚಮ್ಮಾರರು, ದರ್ಜಿಗಳು, ಹೂ ಕಟ್ಟುವವರು, ದೋಬಿಗಳು, ಸಾಂಪ್ರದಾಯಿಕ ಗೊಂಬೆ ತಯಾರಕರು ಹಾಗೂ ಕಲ್ಲುಕುಟಿಗರು, ಕ್ಷೌರಿಕರು, ಮೀನು ಬಲೆ ತಯಾರಕರು, ಪೊರಕೆ ತಯಾರಿಸುವವರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಸಾಲದ ನೆರವಿನೊಂದಿಗೆ ಫಲಾನುಭವಿ ಗಳಿಗೆ ಇತ್ತೀಚಿನ ತಂತ್ರಜ್ಞಾನದ ಸವಲತ್ತು ದೊರಕಲಿದ್ದು, ಕರಕುಶಲ ವಸ್ತುಗಳಿಗೆ ಇದರಿಂದ ಜಾಗತಿಕ ಮಾರುಕಟ್ಟೆಗೆ ವ್ಯಾಪಕ ಪ್ರಮಾಣದಲ್ಲಿ ಪ್ರವೇಶ ಸಿಗಲಿದೆ. ಕೌಶಲ ತರಬೇತಿಗೆ ಪ್ರತಿದಿನ 500 ರೂ. ಸೈಪೆಂಡ್ ಪಡೆಯುವ ಅವಕಾಶವಿದೆ. ಹಾಗೆಯೇ ಆಧುನಿಕ ಸಾಧನಗಳ ಖರೀದಿಗೆ 15,000 ರೂ ನೀಡಲಾಗುತ್ತದೆ. ಈ ಯೋಜನೆಗೆ ಹಳ್ಳಿಗಳಲ್ಲಿನ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕೂಡ ನೋಂದಾಯಿಸಿಕೊಳ್ಳಬಹುದು.ಈ ಯೋಜನೆಯಡಿ, ಕುಶಲಕರ್ಮಿಗಳಿಗೆ ಶೇ.5ರಷ್ಟು ರಿಯಾಯಿತಿ ಬಡ್ಡಿ ದರದಲ್ಲಿ 2 ಲಕ್ಷ ರೂ. ಸಾಲ ನೀಡಲಾಗುತ್ತದೆ.

10 ಸಾವಿರ ವಿದ್ಯುಚ್ಚಾಲಿತ ಬಸ್‌ಗಳ ಉದ್ಯೋಗ ಸೃಷ್ಟಿಯಾಗಲಿದೆ’ ಎಂಬ ವಿಕಾಸ ಕೇಂದ್ರ ಸರಕಾರದ್ದಾಗಿದೆ. ಸರಕಾರ ಖಾಸಗಿ ಪಾಲುದಾರಿಕೆ(ಪಿಪಿಪಿ) ಮಾದರಿಯಲ್ಲಿ ಯೋಜನ ಜಾರಿಗೆ ಬರಲಿದ್ದು, ಕೇಂದ್ರ ಸರಕಾರ 20 ಸಾವಿರ ಕೋಟಿ ರು. ಯೋಚಿಸಲಿದೆ, ಬಸ್ ಖರೀದಿಯಾದ ನಂತರದ 10 ವರ್ಷಗಳ ಕಾಲ ಬಸ್ ಒದಗಿಸಿದ ಖಾಸಗಿ ಕಂಪನಿಯೇ ನಿರ್ವಹಣೆ ಹೊಣೆಯನ್ನು ಹೊರಲಿದೆ.57,613 ಕೋಟಿ ರೂ.ಗಳ ವೆಚ್ಚದ ಪಿಪಿಪಿ ಮಾದರಿ ಜಾರಿಗೆ ಬರಲಿದೆ.ಕೇಂದ್ರ ಸರಕಾರ 20ಸಾವಿರ ಕೋಟಿ ರು. ನೀಡಲಿದ್ದು, ಉಳಿದ ಹಣವನ್ನು ರಾಜ್ಯ ಸರಕಾರಗಳು ಭರಿಸಲಿದೆ. ಪಿಎಂಇ ಬಸ್‌ ಸೇವೆ ಯೋಜನೆಯಡಿ 169 ನಗರಗಳಲ್ಲಿ 10ಸಾವಿರ ವಿದ್ಯುಚ್ಛಾಲಿತ ಬಸ್‌ ಗಳನ್ನು ಓಡಿಸಲಾಗುವುದು. ಸಂಘಟಿತ ಬಸ್ ಸೇವೆಗಳನ್ನು ಹೊಂದಿರದ ನಗರಗಳಿಗೆ ಆದ್ಯತೆ ನೀಡಲಾಗುವುದು, ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕವೇ ಖರೀದಿ ನಡೆಯಲಿದೆ. ಯೋಜನೆ 2037ರವರೆಗೆ ಜಾರಿಯಲ್ಲಿರುತ್ತದೆ.

 

Related News

spot_img

Revenue Alerts

spot_img

News

spot_img