21.1 C
Bengaluru
Monday, July 8, 2024

6G ವಿಷನ್ ಡಾಕ್ಯುಮೆಂಟ್ ಅನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ,

ನವದೆಹಲಿ;ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಹೊಸ ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್ (ITU) ಏರಿಯಾ ಕಚೇರಿ ಮತ್ತು ಇನ್ನೋವೇಶನ್ ಸೆಂಟರ್ ಅನ್ನು ಬುಧವಾರ ಉದ್ಘಾಟಿಸಿದರು.ಇದೇ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು, ಭಾರತ್‌ 6ಜಿ ವಿಷನ್‌ ಡಾಕ್ಯುಮೆಂಟ್‌ ಅನಾವರಣ ಮಾಡಿದರಲ್ಲದೆ, 6ಜಿ ಆರ್‌&ಡಿ ಟೆಸ್ಟ್‌ಬೆಡ್‌ ಅನ್ನು ಕೂಡ ಲೋಕಾರ್ಪಣೆಮಾಡಿದರು.ಹೊಸ ವರ್ಷದ ಮೊದಲ ದಿನ, ಭಾರತದಲ್ಲಿ ಟೆಲಿಕಾಂ, ಐಸಿಟಿ ಮತ್ತು ಸಂಬಂಧಿತ ಆವಿಷ್ಕಾರಗಳಿಗೆ ಸಂಬಂಧಿಸಿದ ಗಮನಾರ್ಹ ಆರಂಭ ನೆರವೇರುತ್ತಿದೆ ಎಂಬುದು ನನಗೆ ಸಂತೋಷ ಉಂಟು ಮಾಡುವ ವಿಷಯವಾಗಿದೆ. 6G ಟೆಸ್ಟ್‌ಬೆಡ್ ಅನ್ನು ಸಹ ಪ್ರಾರಂಭಿಸಲಾಗಿದೆ ಎಂದು ಉದ್ಘಾಟನಾ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದರು.

ಐಟಿಯು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳಿಗಾಗಿ ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿದೆ. ಜಿನೀವಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇದು ಕ್ಷೇತ್ರ ಕಚೇರಿಗಳು, ಪ್ರಾದೇಶಿಕ ಕಚೇರಿಗಳು ಮತ್ತು ಪ್ರದೇಶ ಕಚೇರಿಗಳ ಜಾಲವನ್ನ ಹೊಂದಿದೆ. ಪ್ರದೇಶ ಕಚೇರಿಯನ್ನ ಸ್ಥಾಪಿಸಲು ಭಾರತವು ಮಾರ್ಚ್ 2022ರಲ್ಲಿ ಐಟಿಯುನೊಂದಿಗೆ ಆತಿಥೇಯ ರಾಷ್ಟ್ರಗಳ ಒಪ್ಪಂದಕ್ಕೆ ಸಹಿ ಹಾಕಿತು. ಭಾರತದಲ್ಲಿನ ಪ್ರದೇಶ ಕಚೇರಿಯು ಅದರಲ್ಲಿ ಹುದುಗಿರುವ ಇನ್ನೋವೇಶನ್ ಸೆಂಟರ್ ಹೊಂದಲು ಉದ್ದೇಶಿಸಿದೆ, ಇದು ಐಟಿಯುನ ಇತರ ಪ್ರದೇಶ ಕಚೇರಿಗಳಲ್ಲಿ ವಿಶಿಷ್ಟವಾಗಿದೆ.ಭಾರತವು ವೇಗವಾಗಿ 5G ಸೇವೆ ಒದಗಿಸುವ ದೇಶವಾಗಿದೆ. 5ಜಿ ಆರಂಭವಾಗಿ 5 ತಿಂಗಳೊಳಗೆ 6ಜಿ ತಂತ್ರಜ್ಞಾನದ ಬಗ್ಗೆ ಇದೀಗ ನಾವು ಮಾತನಾಡುತ್ತಿದ್ದೇವೆ. ಇದು ನವ ಭಾರತದ ಆತ್ಮವಿಶ್ವಾಸವನ್ನು ತೋರಿಸುತ್ತದೆ. ಐಟಿಯುನ ವರ್ಲ್ಡ್ ಟೆಲಿ ಕಮ್ಯುನಿಕೆಶನ್ ಸ್ಟಾಂಡರ್ಡೈ ಸೇಶನ್ ಅಸೆಂಬ್ಲಿ ದೆಹಲಿಯಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಮುಂಬರುವ ವರ್ಷಗಳಲ್ಲಿ ಭಾರತವು 100 5G ಲ್ಯಾಬ್‌ಗಳನ್ನು ಸ್ಥಾಪಿಸಲಿದೆ ಎಂದು ಹೇಳಿದ್ದಾರೆ.

6ಜಿ ಟೆಸ್ಟ್‌ಬೆಡ್‌ ಎಂದರೆ..
ಶೈಕ್ಷಣಿಕ ಸಂಸ್ಥೆಗಳು, ಉದ್ಯಮ, ಸ್ಟಾರ್ಟ್-ಅಪ್‌ಗಳು, ಎಂಎಸ್‌ಎಂಇಗಳು ಮತ್ತು ಉದ್ಯಮಗಳಿಗೆ ವೇದಿಕೆಯನ್ನು 6ಜಿ ಟೆಸ್ಟ್ ಬೆಡ್ ಒದಗಿಸುತ್ತದೆ. ಇತರವುಗಳಲ್ಲಿ, ವಿಕಸನಗೊಳ್ಳುತ್ತಿರುವ ಐಸಿಟಿ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಮತ್ತು ಪರಿಶೀಲಿಸಲು ಇದು ನೆರವಾಗುತ್ತದೆ.ಹೊಸ ತಂತ್ರಜ್ಞಾನಗಳು ಮತ್ತು ಪರಿಕಲ್ಪನೆಗಳನ್ನು ಆರಂಭಿಸುವ ಮೊದಲು ಅಥವಾ ಹೆಚ್ಚಿನ ಪ್ರೇಕ್ಷಕರಿಗೆ ಪರಿಚಯಿಸುವ ಮೊದಲು ಪರೀಕ್ಷಿಸಲು ಮತ್ತು ಮೌಲ್ಯಮಾಪನ ಮಾಡಲು ಬಳಸುವ ವ್ಯವಸ್ಥೆಯನ್ನು ಟೆಸ್ಟ್‌ಬೆಡ್ ಎಂದು ಕರೆಯಲಾಗುತ್ತದೆ.

Related News

spot_img

Revenue Alerts

spot_img

News

spot_img