27.5 C
Bengaluru
Wednesday, June 26, 2024

PM Kisan Manadhan;ಸಣ್ಣಮತ್ತು ಅತಿ ಸಣ್ಣ ರೈತರಿಗೆ 3,000ರೂ ಪಿಂಚಣಿ ಭಾಗ್ಯ

#PM Kisan Manadhan #Rs 3,000 pension # small # very small farmers

ಬೆಂಗಳೂರು;PM ಕಿಸಾನ್ ಮಾನಧನ್ ಯೋಜನೆಯಲ್ಲಿ ₹3,000 PM ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸೇರಿದಂತೆ ರೈತರಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ.ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪಿಎಂ ಕಿಸಾನ್ ಮಾನ್ ಧನ್ ಯೋಜನೆ ಎರಡೂ ಕೂಡ ಭಿನ್ನವಾಗಿದ್ದರೂ 2019 ರಲ್ಲೇ ಎರಡೂ ಆರಂಭವಾಗಿರುವುದು ಅದರಲ್ಲಿ PM ಕಿಸಾನ್ ಮಾನಧನ್ ಯೋಜನೆಯಡಿಯಲ್ಲಿಯೂ ಸಣ್ಣ ರೈತರಿಗೆ ಮಾಸಿಕವಾಗಿ ₹3,000 ಪಿಂಚಣಿ ನೀಡುವುದಾಗಿದೆ. ಈ ಯೋಜನೆಯಡಿಯಲ್ಲಿ ಎರಡು ಹೆಕ್ಟೇರ್ ಅಥವಾ ಐದು ಎಕರೆವರೆಗೆ ಜಮೀನು ಹೊಂದಿರುವ ಹಾಗೂ 18 ರಿಂದ 40 ವರ್ಷ ವಯೋಮಾನದೊಳಗಿನ ರೈತರು ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯಲ್ಲಿ ನೋಂದಾಯಿಸಬಹುದು. ಪ್ರತಿ ತಿಂಗಳಿಗೆ ₹55 ರಿಂದ ₹200 ರವರೆಗೆ ತುಂಬುತ್ತ ಹೋಗಬೇಕು. 60 ವರ್ಷದ ಬಳಿಕ ಮಾಸಿಕ ₹3,000 ಪಿಂಚಣಿ ಪಡೆಯಬಹುದು. ನೋಂದಣಿಗಾಗಿ ಸಮೀಪದ ರೈತ ಕೇಂದ್ರಕ್ಕೆ ಭೇಟಿ ನೀಡಿ.ಸದ್ಯ 19,47,588 ರೈತರು ಈ ಯೋಜನೆಗೆ ನೊಂದಾಯಿಸಿಕೊಂಡಿದ್ದಾರೆ.

ಪಿಎಂ ಕಿಸಾನ್ ಮಾನಧನ್ ನೊಂದಾಯಿಸುವ ವಿಧಾನ

* ರೈತರು ತಮ್ಮ ಸಮೀಪದ ರೈತ ಸಂಪರ್ಕ(Farmer Connection) ಕೇಂದ್ರಕ್ಕೆ ಹೋಗಬೇಕು.

* ಬ್ಯಾಂಕ್ ಖಾತೆಯ,ಆಧಾರ್ ಕಾರ್ಡ್ ವಿವರ ನೀಡಿ ನೊಂದಾಯಿಸಬೇಕು.

* ರೈತರ ವಯಸ್ಸಿಗೆ ಅನುಗುಣವಾಗಿ ಅವರು ಕನಿಷ್ಠ ಎಷ್ಟು ಹಣ ಕಟ್ಟಬೇಕು ಎಂಬುದನ್ನು ನಿರ್ದಿಷ್ಟಪಡಿಸಲಾಗುತ್ತದೆ.

* ಗ್ರಾಮ ಮಟ್ಟದ ಉದ್ದಿಮೆದಾರ ಈ ನೊಂದಾವಣಿಯಲ್ಲಿ ಸಹಾಯ ಮಾಡುತ್ತಾರೆ.

* ಅರ್ಹ ರೈತರು ಮೊದಲ ಕಂತನ್ನು ನಗದು ರೂಪದಲ್ಲಿ(In cash) ಆ ಉದ್ದಿಮೆದಾರನಿಗೆ ನೀಡಬೇಕು.

* ಬಳಿಕ ಆಟೊ ಡೆಬಿಟ್(Debit) ಅರ್ಜಿ ತುಂಬಿಸಿ ಸಲ್ಲಿಸಬೇಕು.

* ಆ ಬಳಿಕ ಪ್ರತೀ ತಿಂಗಳು ಕೂಡ ಎಸ್ ಬಿ(SB) ಖಾತೆಯಿಂದ ನಿರ್ದಿಷ್ಟ ಮೊತ್ತದ ಹಣವು ಪಿಂಚಣಿ ನಿಧಿಗೆ(Pension Fund) ಹೋಗುತ್ತಿರುತ್ತದೆ.

*ರೈತರಿಗೆ ವಿಶೇಷ ಕಿಸಾನ್ ಪೆನ್ಷನ್ ಅಕೌಂಟ್ ನಂಬರ್ (KPAN) ಸೃಷ್ಟಿಯಾಗುತ್ತದೆ. ಬಳಿಕ ಕಿಸಾನ್ ಕಾರ್ಡ್(Kissan card) ಕೊಡಲಾಗುತ್ತದೆ.

ಪಿಎಂ ಕಿಸಾನ್ ಮಾನಧನ್ ಯೋಜನೆಗೆ ಅಗತ್ಯವಿರುವ ದಾಖಲೆಗಳು

1. ಆಧಾರ್ ಕಾರ್ಡ್

2. ಗುರುತಿನ ಚೀಟಿ

3. ವಯಸ್ಸಿನ ಪ್ರಮಾಣಪತ್ರ

4. ಆದಾಯ ಪ್ರಮಾಣಪತ್ರ

5. ಬ್ಯಾಂಕ್ ಖಾತೆ ಪಾಸ್‌ಬುಕ್

6. ಮೊಬೈಲ್ ಸಂಖ್ಯೆ

7. ಪಾಸ್‌ಪೋರ್ಟ್ ಗಾತ್ರದ ಫೋಟೋ

Related News

spot_img

Revenue Alerts

spot_img

News

spot_img