18 C
Bengaluru
Thursday, January 23, 2025

PM Kisan eKYC:ಪಿಎಂ ಕಿಸಾನ್ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ, ಇಲ್ಲದಿದ್ದರೆ 14ನೇ ಕಂತು ಕೈತಪ್ಪಲಿದೆ

ಬೆಂಗಳೂರು ಜೂನ್ 20:ರೈತರು ತಮ್ಮೆಲ್ಲಾ ಜಮೀನಿನ ಹಾಗೂ ಸ್ವಂತದ ದಾಖಲೆಗಳನ್ನು ನೀಡಿ ಪಿ.ಎಂ. ಕಿಸಾನ್ ಹಣ ಪಡೆಯಲು ತಾವು ಅರ್ಹರು ಎಂಬುದನ್ನು ತಿಳಿಸಲು ಈ ಇ-ಕೆವೈಸಿ ಕಡ್ಡಾಯವಾಗಿದೆ.

ಇ-ಕೆವೈಸಿ ಎಂದರೇನು?
ಇ-ಕೆವೈಸಿ(E-KYC)ಯ ವಿಸ್ತರಣಾ ರೂಪ: Electronic Know Your Computer or Electronic Know your Client

ಕೆವೈಸಿ:
ಈ ದಾಖಲೆಗಳನ್ನು ಕಛೇರಿಗೆ ಸ್ವತಃ ತಾವೇ ಕೊಟ್ಟು ನೋಂದಣಿ ಮಾಡಿಸುವ ಕ್ರಿಯೆಗೆ ಕೆವೈಸಿ ಎಂದು ಕರೆಯುತ್ತಾರೆ.

ಇ-ಕೆವೈಸಿ(E-KYC):
ದಾಖಲೆಗಳನ್ನು ಆನ್ಲೈನ್ ಮೂಲಕ ನೋಂದಣಿ ಮಾಡಿಸುವ ಕ್ರಿಯೆಗೆ ಇ-ಕೆವೈಸಿ ಎಂದು ಕರೆಯುತ್ತಾರೆ.

 

ಇ-ಕೆವೈಸಿ(E-KYC) ಮಾಡಿಸುವ ವಿಧಗಳು:-

1.ಮೊಬೈಲ್ ಆಧಾರಿತ ಇ-ಕೆವೈಸಿ

2.ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ

1.ಮೊಬೈಲ್ ಆಧಾರಿತ ಇ-ಕೆವೈಸಿ ಮಾಡಿಸುವ ವಿಧಾನ:-

(i) PM-KISAN ಪೋರ್ಟಲ್ ಗೆ ಹೋಗಿ Farmer Corner ನಲ್ಲಿ e-kyc ಮೇಲೆ ಕ್ಲಿಕ್ ಮಾಡಬೇಕು.

(ii)ಆಧಾರ್ ನಂಬರ್ ಮತ್ತು ಆಧಾರ್ ನೊಂದಿಗೆ ಜೋಡಣೆಯಾಗಿರುವ ಮೊಬೈಲ್ ನಂಬರ್ ಅನ್ನು ಹಾಕುಬೇಕು.

(iii)ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಬೇಕು.

(iv) E-kyc Successful ಎಂದು ಬರುತ್ತದೆ.

2.ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಮಾಡಿಸುವ ವಿಧಾನ:-

(i)ಮೊಬೈಲ್ ಆಧಾರಿತ ಇ-ಕೆವೈಸಿ ಮಾಡಿಸಲು ಆಗದ ರೈತರು ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಮಾಡಿಸಬಹುದು.

(ii) ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಸೆಂಟರ್ ಗಳಲ್ಲಿ ಮಾಡಿಸಬಹುದು.

ಇ-ಕೆವೈಸಿ ಮಾಡಿಸುವುದರಿಂದಾಗುವ ಅನುಕೂಲಗಳು?ಏಕೆ ಮಾಡಿಸಬೇಕು?

(i)ಪಿ.ಎಂ. ಕಿಸಾನ್ ಯೋಜನೆಯ ಪ್ರತಿಯೊಬ್ಬ ಫಲಾನುಭವಿಯು ಸಹ ಹಣ ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯ.

(ii)ಈಗಾಗಲೇ ಹಣ ಪಡೆಯುತ್ತಿರುವ ರೈತರು ಮುಂದಿನ ಕಂತಿನ ಹಣ ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯ.

(iii)14ನೇ ಕಂತಿನ ಆರ್ಥಿಕ ನೆರವನ್ನು ಪಡೆಯಲು PM-KISAN ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ.

Related News

spot_img

Revenue Alerts

spot_img

News

spot_img