19.8 C
Bengaluru
Monday, December 23, 2024

ಫೋನ್ ಪೇ ಮುಖ್ಯ ಕಚೇರಿ ಭಾರತಕ್ಕೆ ವಾಪಸ್..!!

ಬೆಂಗಳೂರು, ಜ. 05 : ಮತ್ತೆ ಫೋನ್ ಪೇ (Phone Pay) ಕಂಪನಿಯ ಮುಖ್ಯ ಕಚೇರಿ ಬೆಂಗಳೂರಿಗೆ ವರ್ಗಾವಣೆಯಾಗುತ್ತಿದೆ. ಇದರಿಂದ ವಾಲ್ಮಾರ್ಟ್ ಫ್ಲಿಪ್ ಕಾರ್ಟ್ ಸೇರಿದಂತೆ ಇತರೆ ಫೋನ್ ಪೇ ಷೇರುದಾರರಿಗೆ ಒಂದು ಬಿಲಿಯನ್ ಡಾಲರ್ ತೆರಿಗೆಯ ಹೊರೆ ಬಿದ್ದಿದೆ. ಫೋನ್ ಪೇ ಭಾರತದ ಪ್ರಮುಖ ಪೇಮೆಂಟ್ ಪ್ಲಾಟ್ʼಫಾರ್ಮ್ ಆಗಿದೆ. ಇನ್ನು ಫೋನ್ ಪೇ ಹೊಸ ದರದಲ್ಲಿ ಷೇರುಗಳನ್ನು ಮಾರಾಟ ಮಾಡಿದೆ. ಇದರಿಂದ ಈ ಮೂಲಕ 12 ಬಿಲಿಯನ್ ಡಾಲರ್ ನಷ್ಟು ಹೂಡಿಕೆಯನ್ನು ಫೋನ್ ಪೇ ಸಂಗ್ರಹಿಸಿದೆ. ಜನರಲ್ ಅಟ್ಲಾಂಟಿಕ್, ಟೈಗರ್ ಗ್ಲೋಬಲ್, ಕತಾರ್ ಇನ್ವೆಸ್ಟ್ ಮೆಮಟ್ ಅಥಾರಿಟಿ ಸೇರಿದಂತೆ ಹಲವು ಕಂಪನಿಗಳು ಫೋನ್ ಪೇ ಷೇರುಗಳ ಮೇಲೆ ಹೂಡಿಕೆ ಮಾಡುತ್ತಿವೆ.

ಟೈಗರ್ ಗ್ಲೋಬಲ್ ಮ್ಯಾನೇಜ್ ಮೆಂಟ್ ಸಂಸ್ಥೆ ಹೊಸ ದರದಲ್ಲಿ ಫೋನ್ ಪೇ ಷೇರುಗಳನ್ನು ಖರೀದಿಸಿದ್ದು, ಪರಿಣಾಮ ಷೇರುದಾರರಿಗೆ ಸರಿಸುಮಾರು 80 ಶತಕೋಟಿ ರೂಪಾಯಿಗಳ ತೆರಿಗೆ ಬಿದ್ದಿದೆ. ಫೋನ್‌ ಪೇ ಷೇರು ಮಾರುಕಟ್ಟೆಗೆ ತೆರೆದುಕೊಳ್ಳುವ ಮುನ್ನ ಇದ್ದ ದರದ ಆಧಾರದ ಮೇಲೆ ಹೊಸ ದರವನ್ನು ನಿಗದಿ ಮಾಡಲಾಗಿದೆ. ಹೀಗಾಗಿ ಫೋನ್‌ ಪೇ ಷೇರುದಾರರಿಗೆ ತೆರಿಗೆ ಹೊರೆಯಾಗಬಹುದು ಎನ್ನಲಾಗಿದೆ. ಬರೋಬ್ಬರಿ ಅಂದಾಜು 8 ಸಾವಿರ ಕೋಟಿ ರೂ. ಷೇರುದಾರರಿಗೆ ತೆರಿಗೆ ಹೊರೆ ಬರಬಹುದು. ಫೋನ್ ಪೇ ಎಲ್ಲಾ ವ್ಯವಹಾರಗಳು ಮತ್ತಯ ಅಂಗಸಂಸ್ಥೆಗಳು ಸಿಂಗಾಪುರದಲ್ಲಿದೆ.

PhonePe ಅನ್ನು ಮಾಜಿ ಫ್ಲಿಪ್‌ಕಾರ್ಟ್ ಕಾರ್ಯನಿರ್ವಾಹಕರಾದ ಸಮೀರ್ ನಿಗಮ್ ಮತ್ತು ರಾಹುಲ್ ಚಾರಿ ಅವರು ಡಿಸೆಂಬರ್ 2015 ರಲ್ಲಿ ಸ್ಥಾಪಿಸಿದರು. ಇದು ಭಾರತದ ಸ್ಟಾರ್ಟ್‌ ಅಪ್‌ ಸಂಸ್ಥೆಯಾಗಿದೆ. ಫ್ಲಿಪ್‌ಕಾರ್ಟ್ ಇದನ್ನು ಏಪ್ರಿಲ್ 2016 ರಲ್ಲಿ ಸ್ವಾಧೀನಪಡಿಸಿಕೊಂಡಿತು. ಆಗ ಫೋನ್‌ ಪೇ ವಾಲ್ಮಾರ್ಟ್‌ ಅಧೀನಕ್ಕೆ ಸೇರಿತು. ಇದರ ಮೂಲ ಕಂಪನಿಯು ಸಿಂಗಾಪುರಕ್ಕೆ ಸ್ಥಳಾಂತರಗೊಂಡಿತು. ಸಿಂಗಾಪುರದಲ್ಲಿ ಸ್ಟಾರ್ಟಪ್‌ ಕಂಪನಿಗಳ ಬೆಳವಣಿಗ, ವ್ಯಾಪಾರ, ವಹಿವಾಟು ಸುಲಭ ಎಂಬ ಕಾರಣಕ್ಕೆ ಭಾರತದ ಸಾವಿರಾರು ಸ್ಟಾರ್ಟಪ್‌ ಕಂಪನಿಗಳು ಸಿಂಗಾಪುರದಲ್ಲಿ ಮೂಳ ಕಚೇರಿಯನ್ನು ಹೊಂದಿವೆ. ಇದೀಗ ಫೋನ್‌ಪೇ ಭಾರತಕ್ಕೆ ಬೇಸ್ ಅನ್ನು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.

ಸದ್ಯ ಫೋನ್‌ ಪೇ 43 ಕೋಟಿ ನೋಂದಾಯಿತ ಬಳಕೆದಾರರನ್ನು ಹೊಂದಿದೆ ಮತ್ತು 35 ಮಿಲಿಯನ್ ಆಫ್‌ಲೈನ್ ವ್ಯಾಪಾರಿಗಳನ್ನು ಡಿಜಿಟೈಸ್ ಮಾಡಿದೆ. ಇದೀಗ ಫೋನ್‌ ಪೇ ಬೆಂಗಳುರಿಗೆ ಶಿಫ್ಟ್‌ ಆಗುವ ಕಾರಣ 3000 ಉದ್ಯೋಗಿಗಳು ಕೂಡ ಟ್ರಾನ್ಸ್ಫರ್‌ ಆಗಲಿದ್ದಾರೆ. ಇನ್ನು ಫೋನ್‌ ಪೇ ಸಂಸ್ಥೆಯೂ ಷೇರು ಮಾರುಕಟ್ಟೆಗೆ ಲಗ್ಗೆ ಇಡುತ್ತಾ ಎಂಬ ಪ್ರಶ್ನೆಗಳು ಹಲವರನ್ನು ಕಾಡುತ್ತಿದೆ. ಹಾಗೊಂದು ವೇಳೆ ಫೋನ್‌ ಪೇ ಷೇರು ಪೇಟೆಗೆ ತೆರೆದುಕೊಂಡರೆ, ನಿರೀಕ್ಷಿತ ಬಂಡವಾಳ ಸಿಗುತ್ತಾ ಎಂಬ ಅನುಮಾನಗಳು ಎದ್ದಿವೆ.

ಕಳೆದ ವರ್ಷ ಪೆಟಿಎಂ ಷೇರು ಪೇಗೆ ತೆರೆದುಕೊಂಡಾಗ ಎಲ್ಲರೂ ನಷ್ಟ ಅನುಭವಿಸುವಂತಾಯ್ತು. ಆದರೆ ಫೋನ್‌ ಪೇ ನಷ್ಟದಲ್ಲಿ ಇಲ್ಲವಾದರೂ, ಮತ್ತೆ ಇದರ ಮೇಲೆ ಹೂಡಿಕೆ ಮಾಡಲು ಮುಂದೆ ಬರುತ್ತಾರಾ ಎಂಬ ಅನುಮಾನವಂತೂ ಇದೆ. ಆದರೆ, ಫೋನ್‌ ಪೇ ಭಾರತಕ್ಕೆ ವಾಪಸ್‌ ಬರುತ್ತಿರುವುದೇ ಷೇರು ಪೇಟೆಗೆ ತೆರೆದುಕೊಳ್ಳಲು ಎಂದು ಹೇಳಲಾಗುತ್ತಿದೆ.

Related News

spot_img

Revenue Alerts

spot_img

News

spot_img