22.9 C
Bengaluru
Friday, July 5, 2024

ಸಿಬಿಐ ತನಿಖೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ:ಡಿಕೆಶಿಗೆ ಹೈಕೋರ್ಟ್ ಬಿಗ್ ಶಾಕ್

ಬೆಂಗಳೂರು;ಆದಾಯ ಮೀರಿ ಆಸ್ತಿ ಪ್ರಕರಣದಲ್ಲಿ ಸಿಬಿಐ ದಾಖಲಿಸಿದ್ದ ಕೇಸ್‌ನ್ನು ವಜಾಗೊಳಿಸುವಂತೆ ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್‌ ವಜಾಗೊಳಿಸಿದೆ. ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐನ ಅಕ್ರಮ ಆಸ್ತಿ ಪ್ರಕರಣವನ್ನು ರದ್ದುಗೊಳಿಸುವಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಡಿಸಿಎಂ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಇಂದು ತೀರ್ಪು ಪ್ರಕಟಿಸಬೇಕಿತ್ತು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರು ಅರ್ಜಿಯನ್ನು ತಿರಸ್ಕರಿಸಿದರು. ಸಿಬಿಐ ತನಿಖೆಗೆ ಇದ್ದ ಮಧ್ಯಂತರ ತಡೆಯನ್ನು ಹೈಕೋರ್ಟ್ ತೆರವು ಮಾಡಿದ್ದು, ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವಂತೆ ಸಂಸ್ಥೆಗೆ ಸೂಚಿಸಿದೆ.ಆದಾಯ ತೆರಿಗೆ ಇಲಾಖೆಯು 2017ರ ಆಗಸ್ಟ್‌ನಲ್ಲಿ ಹೊಸದಿಲ್ಲಿ ಮತ್ತು ಇತರೆಡೆ ಶಿವಕುಮಾರ್‌ ಅವರ ವಿವಿಧೆಡೆ ದಾಳಿ ನಡೆಸಿ ರೂ.8,59,69,100 ಸಂಗ್ರಹಿಸಿತ್ತು. ಇವರ ನಿವೇಶನದಿಂದ ರೂ.41.00 ಲಕ್ಷಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.ತರುವಾಯ, ಆದಾಯ ತೆರಿಗೆ ಕಾಯಿದೆ, 1961 ರ ನಿಬಂಧನೆಗಳ ಅಡಿಯಲ್ಲಿ ಶಿವಕುಮಾರ್ ವಿರುದ್ಧ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಯಿತು. ಆದಾಯ ತೆರಿಗೆ ಪ್ರಕರಣವನ್ನು ದಾಖಲಿಸಿದ ನಂತರ, ಜಾರಿ ನಿರ್ದೇಶನಾಲಯವು ಸಹ ಪ್ರಕರಣವನ್ನು ದಾಖಲಿಸಿತು ಮತ್ತು ತರುವಾಯ, ಸೆಪ್ಟೆಂಬರ್‌ನಲ್ಲಿ ಶಿವಕುಮಾರ್ ಅವರನ್ನು ಬಂಧಿಸಲಾಯಿತು.

Related News

spot_img

Revenue Alerts

spot_img

News

spot_img