25.4 C
Bengaluru
Saturday, July 27, 2024

ಡಾರ್ಕ್ ವೆಬ್‌ನಲ್ಲಿ 81.5 ಕೋಟಿ ಭಾರತೀಯ ಬಳಕೆದಾರರ ವೈಯಕ್ತಿಕ ಡೇಟಾ ಸೋರಿಕೆ

ನವದೆಹಲಿ;ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನಲ್ಲಿರುವ ಭಾರತೀಯರ ಆಧಾರ್ ವಿವರಗಳು ಸೈಬರ್ ಕಳ್ಳರ ಕೈಗೆ ಸಿಕ್ಕಿದೆ ಎಂದು ವರದಿಯಾಗಿದೆ. ಡಾರ್ಕ್ ವೆಬ್‌ನಲ್ಲಿ(Darkweb) ಸುಮಾರು 81.5 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ಇದರಲ್ಲಿ ಆಧಾರ್ ಮತ್ತು ಪಾಸ್‌ಪೋರ್ಟ್ ವಿವರಗಳು, ಹೆಸರುಗಳು, ಫೋನ್ ಸಂಖ್ಯೆಗಳು ಮತ್ತು ವಿಳಾಸಗಳಂತಹ ನಿರ್ಣಾಯಕ ಮಾಹಿತಿಗಳಿವೆ ಎಂದು ಯುಎಸ್(US) ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ ರೆಸೆಕ್ಯುರಿಟಿಯ ವರದಿ ಮಾಡಿದೆ. ಈ ಬಗ್ಗೆ CBI ತನಿಖೆ ನಡೆಸಲಿದೆ. ಕೋವಿಡ್-19ರ ಪರೀಕ್ಷೆಗಾಗಿ ದೇಶದ 81.50 ಕೋಟಿ ಜನರಿಂದ ಸಂಗ್ರಹಿಸಲಾಗಿದ್ದ ವೈಯುಕ್ತಿಕ ಮಾಹಿತಿ ಐಸಿಎಂಆರ್ ಸಂಗ್ರಹದಿಂದ ಸೋರಿಕೆಯಾಗಿದೆ ಐಸಿಎಂಆರ್ ಈ ದತ್ತಾಂಶವನ್ನು ಕಳವು ಮಾಡಿದ ಸೈಬರ್‌ ವಂಚಕರು ಡಾರ್ಕ್ ವೆಬ್‌ನಲ್ಲಿ ಸಂಬಂಧಿಸಿದ ಅಷ್ಟೂ ಮಾಹಿತಿಗಳನ್ನು ಮಾರಾಟಕ್ಕಿಟ್ಟಿದ್ದಾರೆ.

‘ಫೆಟ್ ಆಕ್ಟರ್ ಅಲಿಯಾಸ್ ಪಿಡಬ್ಲ್ಯುಎನ್ 0001 ‘ ಎಂಬ ಬಳಕೆದಾರ ಆಧಾರ್ (Adhar) ಮಾಹಿತಿ ಒಳಗೊಂಡಂತೆ ಹಲವು ಜನರ ಮಾಹಿತಿಯನ್ನು ಹಂಚಿಕೊಂಡಿದ್ದು, 81.5 ಕೋಟಿ ಜನರ ದತ್ತಾಂಶ ಮಾರಾಟಕ್ಕಿದೆ ಎಂದು ಹೇಳಿದ್ದಾರೆ. ಕೋವಿಡ್ ಸಮಯದಲ್ಲಿ ಚಿಕಿತ್ಸೆ, ಲಸಿಕೆ ಸೇರಿದಂತೆ ಹಲವು ಕಾರಣಗಳಿಗಾಗಿ ಜನರು ತಮ್ಮ ವೈಯಕ್ತಿಕ ದಾಖಲೆಗಳನ್ನು ಐಸಿಎಂಆರ್‌ನಲ್ಲಿ ದಾಖಲಿಸಿದ್ದರು.81.50 ಕೋಟಿ ಭಾರತೀಯ ವೈಯಕ್ತಿಕ ಮಾಹಿತಿಗಳು ಸೋರಿಕೆ ಆಗಿರುವುದಷ್ಟೇ ಅಲ್ಲ, ಅವನ್ನೆಲ್ಲಾ ಸೈಬರ್ ಅಪರಾಧ ತಾಣ ಡಾರ್ಕ್‌ ವೆಬ್ ಮೂಲಕ ಮಾರಾಟಕ್ಕೆ ಇಟ್ಟಿರುವುದನ್ನು ಅಮೆರಿಕದ ಸೈಬರ್ ಸೆಕ್ಯುರಿಟಿ ಮತ್ತು ಗುಪ್ತಚರ ಸಂಸ್ಥೆ ಗಮನಿಸಿ ಭಾರತ ಸರಕಾರಕ್ಕೆ ಮಾಹಿತಿ ರವಾನಿಸಿವೆ.

Related News

spot_img

Revenue Alerts

spot_img

News

spot_img