#percent 6.5 #Interest Rate #Continuation #RBI Meeting
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್(RBI) ಈ ವಾರಾಂತ್ಯದಲ್ಲಿ ಆರ್ಥಿಕ ನೀತಿ ಪರಾಮರ್ಶನ ಸಭೆ ನಡೆಸಲು ನಿರ್ಧರಿಸಿದೆ. ಪ್ರಸ್ತುತ ತ್ರೈ ಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆ ತೃಪ್ತಿಕರವಾಗಿರುವುದರ ಜೊತೆ ಹಣದುಬ್ಬರ ನಿಯಂತ್ರಣದಲ್ಲಿ ಇರುವುದರಿಂದ ಬ್ಯಾಂಕ್‌ಗಳ ಬೇಸ್ ಬಡ್ಡಿದರವನ್ನು 6.5%ನಲ್ಲೇ ಉಳಿಸಲು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ದೇಶದ ಆರ್ಥಿಕತೆ ಬೆಳವಣಿಗೆ ತೃಪ್ತಿಕರ ಹಾಗೂ ಹಣದುಬ್ಬರ(Inflation) ನಿಯಂತ್ರಣದಲ್ಲಿರುವುದರಿಂದ ಶೇಕಡ 6.5 ಬಡ್ಡಿ ದರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (3) ಮುಂದುವರಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ವಾರಾಂತ್ಯ ನಡೆಸಲಿರುವ ಆರ್ಥಿಕ ನೀತಿ ಪರಿಶೀಲನೆಯಲ್ಲಿ ಅಲ್ಪಾವಧಿ ಬಡ್ಡಿ ದರದ ಯಥಾಸ್ಥಿತಿಯನ್ನು ಆರ್ ಬಿಐ(RBI) ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಆರ್‌ಬಿಐ(RBI) ಹಿಂದಿನ ನಾಲ್ಕು ಪಾಕ್ಷಿಕ ಸಭೆಗಳಲ್ಲಿ ಮಹತ್ವದ ನೀತಿ ದರವನ್ನು (Repo) ಬದಲಾಯಿಸಿರಲಿಲ್ಲ. ಫೆಬ್ರವರಿಯಲ್ಲಿ ಕೊನೆಯ ಬಾರಿಗೆ ರೆಪೋ ದರವನ್ನು ಶೇ. 6.5ಕ್ಕೆ ಏರಿಸಲಾಗಿತ್ತು. ಉಕ್ರೇನ್-ರಷ್ಯಾ ಯುದ್ಧ ಆರಂಭ ಮತ್ತು ಜಾಗತಿಕ ಸರಬರಾಜು ಸರಪಣಿಯಲ್ಲಿ ವ್ಯತ್ಯಯವಾಗಿ ಹೆಚ್ಚಿನ ಹಣದುಬ್ಬರದ ಬೆನ್ನಲ್ಲಿ 2022 ಮೇ ತಿಂಗಳಲ್ಲಿ ಆರಂಭಗೊಂಡ ಬಡ್ಡಿ ದರ ಏರಿಕೆ ಪ್ರವೃತ್ತಿಯನ್ನು ಈ ಮೂಲಕ ಆರ್‌ಬಿಐ(RBI) ಕೊನೆಗೊಳಿಸಿತ್ತು.