27.8 C
Bengaluru
Monday, July 1, 2024

ಮನೆಯಲ್ಲಿ ಪೀಸ್ ಲಿಲ್ಲಿ, ಫಿಲೋಡೆಂಡ್ರಾನ್, ಪೊಥೋಸ್ ಗಿಡಗಳನ್ನು ನೆಡಿ..

ಬೆಂಗಳೂರು, ಜು. 28 : ಮನೆಯೊಳಗೆ ಗಿಡಗಳು ಇರುವುದರಿಂದ ಆರೋಗ್ಯಕ್ಕೂ ಪ್ರಯೋಜನವಿದೆ. ಆದರೆ, ಮನೆಯೊಳಗೆ ಬೆಳೆಸಲು ಯಾವ ಗಿಡ ಸೂಕ್ತ ಎಂಬುದರ ಬಗ್ಗೆ ಮಾಹಿತಿ ಇರಬೇಕು. ಮನೆಗೆ ಅಂದವಾಗಿರುತ್ತವೆ ಎಂದು ಯಾವ ಗಿಡಗಳೆಂದರೆ ಅವನ್ನು ತರುವುದು ಸರಿಯಲ್ಲ. ಮನೆಯೊಳಗೆ ಬೆಳೆಯುವುದಕ್ಕೆ ಸೂಕ್ತವಾದ ಗಿಡಗಳನ್ನು ಆರಿಸಿ ತರಬೇಕು. ಮನೆಯೊಳಗೆ ಬೆಳಯುವ ಗಿಡಗಳು ಹೆಚ್ಚು ಕಾಲ ಪೋಷಣೆ ಇಲ್ಲದಿದ್ದರು ಹಸಿರಾಗಿರುವಂತಹ ಗಿಡಗಳನ್ನು ಗಮನವಿಟ್ಟು ಆರಿಸಿಕೊಳ್ಳಬೇಕು.

ಎಲ್ಲಾದರೂ ದೂರ ಪ್ರಯಾಣ ಮಾಡಿದಾಗ ಮನೆ ಬೀಗ ಹಾಕಿದರೆ, ಗಿಡಗಳಿಗೆ ನೀರಿಲ್ಲ ಎಂದರೆ, ಒಣಗಿ ಬಿಡುತ್ತವೆ. ಇದರಿಂದ ಹೆಚ್ಚು ಹಣ ಕೊಟ್ಟು, ಇಷ್ಟ ಪಟ್ಟು ತಂದ ಗಿಡ ಒಣಗಿ ಹೋದರೆ ನಿಮಗೆ ಬೇಸರವಾಗುತ್ತದೆ. ಹಾಗಾಗಿ ಎಚ್ಚರದಿಂದ ಗಿಡವನ್ನು ಆರಿಸುವುದು ಒಳ್ಳೆಯದು. ಮನೆಯೊಳಗೆ ಬೆಳಯಬಹುದಾದಂತಹ, ವಿಶೇಷ ಗಿಡಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಪೀಸ್ ಲಿಲ್ಲಿ, ಫಿಲೋಡೆಂಡ್ರಾನ್, ಪೊಥೋಸ್, ಕ್ಯಾಲಡಿಯಮ್, ಇಂಗ್ಲಿಷ್ ಐವಿ ಗಿಡಗಳು ನಿಮ್ಮ ಮನೆಗೆ ಚೆಂದವಾಗಿ ಕಾಣುವಂತೆ ಮಾಡುತ್ತದೆ.

ಪೀಸ್ ಲಿಲ್ಲಿಗಳು, ಇದು ನಿಜವಾದ ಲಿಲ್ಲಿ ಗಿಡಗಳಲ್ಲ. ಬದಲಿಗೆ ನಿತ್ಯ ಹರಿದ್ವರ್ಣ ಸಸ್ಯಗಳು. ಇದರ ಎಲೆ ಹಾಗೂ ಹೂವುಗಳು ಹೊಳಪಿನಿಂದ ಕೂಡಿರುತ್ತವೆ. ಇದನ್ನು ಮನೆಯಲ್ಲಿ ಸುಲಭವಾಗಿ ಬೆಳೆಯಬಹುದಾಗಿದೆ. ಇದು ವಾಯು ಶುದ್ಧೀಕರಣವನ್ನು ಮಾಡುತ್ತದೆ. ಫಿಲೋಡೆಂಡ್ರಾನ್ ಸಾಮಾನ್ಯವಾಗಿ ಹಲವರ ಮನೆಯಲ್ಲಿ ನೋಡಬಹುದು. ಇದು ಗಿಡ ಮತ್ತು ಬಳ್ಳಿ ಎರಡೂ ರೂಪದಲ್ಲಿ ದೊರೆಯುತ್ತದೆ. ಇದನ್ನು ಮನೆಯ ಒಳಗೆ ಇಡುವುದರಿಂದ ಮನೆಯ ಅಂದ ಹೆಚ್ಚಾಗುತ್ತದೆ. ನೇತಾಡುವ ಪಾಟ್ ಗಳಲ್ಲಿಯೂ ಇದನ್ನು ಬೆಳೆಸಬಹುದು. ಮನೆಯ ಬಾಲ್ಕನಿಗಳಲ್ಲಿ ನೇತು ಹಾಕಬಹುದು.

ಪೊಥೋಸ್ ಅನ್ನು ಡೆವಿಲ್ಸ್ ಐವಿ ಎಂದು ಕೂಡ ಕರೆಯಲಾಗುತ್ತದೆ. ಈ ಗಿಡವೈ ಗಾಳಿಯನ್ನು ಶುದ್ಧೀಕರಿಸುತ್ತದೆ. ಪೊಥೋಸ್ ಗಿಡವನ್ನು ನೋಡಿಕೊಳ್ಳುವುದು ಕೂಡ ತುಂಬಾನೇ ಸುಲಭ. ಕ್ಯಾಲಡಿಯಮ್ ಗಿಡಗಳು ಜನಪ್ರಿಯವಾದ ಸಸ್ಯವಾಗಿದೆ. ಇದನ್ನು ಆನೆಯ ಕಿವಿ ಎಂದೂ ಕೂಡ ಕರೆಯುತ್ತಾರೆ. ಕೆಲವರು ದೇವತೆಗಳ ರೆಕ್ಕೆಗಳು ಎನ್ನುತ್ತಾರೆ. ಕೆಂಪು, ಗುಲಾಬಿ ಮತ್ತು ಬಿಳಿ ಸೇರಿದಂತೆ ಹಲವು ಬಣ್ಣಗಳಲ್ಲಿ ಇವು ಲಭ್ಯವಿರುತ್ತವೆ. ಇದಕ್ಕೆ ಹೆಚ್ಚಿನ ಬೆಳಕು ಬೇಕಾಗುವುದಿಲ್ಲ. ಈ ಗಿಡಗಳು ಹೆಚ್ಚು ಆಕರ್ಷಕವಾಗಿವೆ.

ಇಂಗ್ಲಿಷ್ ಐವಿ ಗಿಡಗಳು ಮನೆಯಲ್ಲಿ ಬೆಳೆಯಲು ಸುಲಭವಾಗಿರುತ್ತದೆ. ಇದು ಗಾಳಿಯನ್ನಷ್ಟೇ ಅಲ್ಲದೇ, ಹಾನಿಕಾರಕ ಕಣಗಳನ್ನು ತೆಗೆದು ಹಾಕುತ್ತದೆ. ಈ ಸಸ್ಯಗಳು ಮನೆಯೊಳಗೆ ಇಟ್ಟರೆ ಸುಂದರವಾಗಿ ಕಾಣುತ್ತವೆ. ಇವುಗಳನ್ನು ಮನೆಗೆ ತಂದು ಬೆಳೆಸಿದರೆ, ಗಿಡಗಳಂತೆ ನಿಮ್ಮ ಮನಸ್ಸು ಕೂಡ ಶಾಂತವಾಗಿರುತ್ತದೆ.

Related News

spot_img

Revenue Alerts

spot_img

News

spot_img