#Parliament Security #Breach #8 staff members #suspended
ಹೊಸದಿಲ್ಲಿ :ಸಂಸತ್ ಭದ್ರತಾ ಲೋಪ ಪ್ರಕರಣದಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಭದ್ರತೆಗಾಗಿ ನಿಯೋಜಿಸಲಾಗಿದ್ದ 8 ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೆ 6 ಆರೋಪಿಗಳನ್ನು ಬಂಧಿಸಿದ ಬಳಿಕ ಈ ನಿರ್ಧಾರವನ್ನು ಮಾಡಲಾಗಿದೆ. ಎಲ್ಲಾ ಸಿಬ್ಬಂದಿಗಳನ್ನು ವಿಶೇಷ ಸಮಿತಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯೂ ಇದೆ. ನಿನ್ನೆಯ ಘಟನೆಯ ಬಳಿಕ ಸಂಸತ್ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.ಇಬ್ಬರು ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಕಲಾಪದೆಡೆಗೆ ನುಗ್ಗಿ ಗ್ಯಾಸ್ ಕ್ಯಾನಿಸ್ಟರ್ ಗಳನ್ನು ಸಿಡಿಸಿ ಅವ್ಯವಸ್ಥೆ ಸೃಷ್ಟಿಸಿದ್ದರು.ಭದ್ರತಾ ಲೋಪದ ನಂತರ ಪೊಲೀಸರು ಒಟ್ಟು ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರನೇ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ .ಘಟನೆ ಕುರಿತು ಗೃಹ ಸಚಿವಾಲಯವು ತನಿಖೆ ಪ್ರಾರಂಭಿಸಿದ್ದು , ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಮುಖ್ಯಸ್ಥರನ್ನು ತನಿಖೆಯ ನೇತೃತ್ವ ವಹಿಸಲು ನೇಮಿಸಲಾಗಿದೆ. ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ಮನೋರಂಜನ್ ಹಾಗೂ ಸಾಗರ ಶರ್ಮಾ ವೀಕ್ಷಕರ ಗ್ಯಾಲರಿಯಿಂದ ಸುಮಾರು 10ರಿಂದ 12 ಅಡಿ ಎತ್ತರದಿಂದ ಸಂಸದರು ಕುಳಿತಿದ್ದ ಟೇಬಲ್ ಮೇಲೆ ಜಿಗಿದಿದ್ದಾರೆ.ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಘಟನೆ ನಡೆಯುತ್ತಿದ್ದಂತೆ ಸಂಸತ್ ಕಲಾಪ ವೀಕ್ಷಣೆಗೆ ನೀಡಿದ್ದ ಎಲ್ಲ ಪಾಸ್‌ಗಳನ್ನು ರದ್ದುಗೊಳಿಸಿದ್ದಾರೆ.ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (NSG) ,ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP), ಇಂಟೆಲಿಜೆನ್ಸ್ ಬ್ಯೂರೋ (IB),ದೆಹಲಿ ಪೊಲೀಸ್, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಮತ್ತು ವಿಶೇಷ ರಕ್ಷಣಾ ಗುಂಪು (SPG) ನಂತಹ ವಿವಿಧ ಭದ್ರತಾ ಸಂಸ್ಥೆಗಳಿವೆ .ಆಧುನಿಕ ಶಸ್ತ್ರಾಸ್ತ್ರಗಳನ್ನು ಭದ್ರತಾ ಸಿಬ್ಬಂದಿ ಹೊಂದಿರುತ್ತಾರೆ .