ಬೆಂಗಳೂರು;ಸಿಎಂ ಸಿದ್ದರಾಮಯ್ಯ ಅವರು ನಾಳೆ ಬೆಳಗ್ಗೆ 11 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಬಾಕಿ ಬಿಲ್ ಪಾವತಿ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೆಲ ಕಾಮಗಾರಿಗಳನ್ನು ಪರಿಶೀಲಿಸಿ 60% ಬಾಕಿ ಬಿಲ್ ಪಾವತಿಸಿದ್ದೇವೆ. ಇತರೆ ಕಾಮಗಾರಿಗಳ ಬಗ್ಗೆ ಪರಿಶೀಲಿಸುತ್ತಿದ್ದು, ಕೆಂಪಣ್ಣನವರು ಸರ್ಕಾರದೊಂದಿಗೆ ಮುಕ್ತವಾಗಿ ಮಾತನಾಡಬಹುದೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು.ಕೆಂಪಣ್ಣ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 5 ತಿಂಗಳಾದ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬಾಕಿ ಬಿಲ್ ಪಾವತಿ ಮಾಡುವಂತೆ ಸಿದ್ದರಾಮಯ್ಯ ಅವರನ್ನು 4 ಬಾರಿ ಭೇಟಿಯಾಗಿ ಮನವಿ ಮಾಡಿದ್ದೇವೆ. ಆದರೂ ರಾಜ್ಯ ಸರ್ಕಾರ ಬಿಲ್ ಪಾವತಿಸಿಲ್ಲ ಎಂದು ಹೇಳಿದರು. ಒಂದು ತಿಂಗಳಲ್ಲಿ ಸೀನಿಯಾರಿಟಿ ಆಧಾರದ ಮೇಲೆ ಶೇ.50ರಷ್ಟು ಬಾಕಿ ಬಿಲ್ ಪಾವತಿ ಮಾಡಬೇಕು ಎಂದು ಕೆಂಪಣ್ಣ ಆಗ್ರಹಿಸಿದರು. ಗುತ್ತಿಗೆದಾರರ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ಇಲಾಖೆಗಳಿಂದ ಒಟ್ಟು 20 ರಿಂದ 24 ಸಾವಿರ ಕೋಟಿ ರೂ.ಗಳ ಮೊತ್ತ ಬಾಕಿ ಇದ್ದು, ಗುತ್ತಿಗೆದಾರರು ತಾವು ಕೈಗೊಂಡಿರುವ ಕಾಮಗಾರಿಗಳು ಪೂರ್ಣವಾಗಿ ತ ನಾಲ್ಕರಿಂದ ಮೂರು ವರ್ಷಗಳು ಕಳೆದರೂ ಬಾಕಿ ಮೊತ್ತವನ್ನು ಇಂದಿನವರೆಗೂ ಪಡೆದಿಲ್ಲ ಆ ಎಂದು ಹೇಳಿದರು.