ನವದೆಹಲಿ, ಸೆ 26;ತಮಿಳುನಾಡಿಗೆ ಕಾವೇರಿ ನೀರು ಬಿಡುವುದಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿರುವಂತೆಯೇ ಕಾವೇರಿ ನೀರಾವರಿ ನಿಯಂತ್ರಣ ಮಂಡಳಿ (CWRC) ಕರ್ನಾಟಕಕ್ಕೆ ಮತ್ತೊಂದು ಶಾಕ್ ಕೊಟ್ಟಿದೆ. ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಅದು ಸೂಚಿಸಿದ್ದು,ನೆರೆಯ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುವುದನ್ನು ವಿರೋಧಿಸಿ ರೈತರು, ಕನ್ನಡ ಪರ ಸಂಘಟನೆಗಳು ಮತ್ತು ವಿರೋಧ ಪಕ್ಷದ ಸದಸ್ಯರು ಬೆಂಗಳೂರು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.ಸುಪ್ರೀಂ ಕೋರ್ಟ್(Supremecourt)ನಲ್ಲಿ ಕರ್ನಾಟಕ ವಿರುದ್ದ ಆದೇಶ ಹೊರಬೀಳುತ್ತಿದ್ದಂತೆ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗಿತ್ತು ಈ ಹೊತ್ತಿನಲ್ಲೇ ಮುಂದಿನ 18 ದಿನಗಳವರೆಗೆ (ಅ. 15ರವರೆಗೆ) ನಿತ್ಯವೂ 3,000 ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿದೆ. ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಇಂದು ಬೆಂಗಳೂರು ಬಂದ್ ನಡೆಸುತ್ತಿವೆ.ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶದಿಂದ ಕಾವೇರಿ ಬರಿದಾಗಲಿದೆ. ಇವತ್ತಿನ ಆದೇಶದಿಂದ ಕೇವಲ 2.5 ಟಿಎಂಸಿ ನೀರು ಮಾತ್ರ ಜಲಾಶಯದಲ್ಲಿ ಉಳಿಯಲಿದೆ. ಇದರಲ್ಲಿ 2 ಟಿಎಂಸಿ(TMC) ನೀರು ಬಳಕೆಗೆ ಯೋಗ್ಯವಾಗಿರುವುದಿಲ್ಲ. ಹೀಗಾಗಿ ಅಕ್ಟೋಬರ್ ಆರಂಭದಿಂದಲೇ ಬೆಂಗಳೂರು, ಮಂಡ್ಯ, ಸೇರಿದಂತೆ ಹಲವು ಭಾಗದಲ್ಲಿ ನೀರಿನ ಕೊರತೆ(Water problem) ಕಾಡಲಿದೆ. ಕುಡಿಯುವ ನೀರಿಗೂ ತೊಂದರೆ ಪ್ರಾರಂಭವಾಗುತ್ತದೆ. ಮತ್ತೆ 18 ದಿನ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿರುವುದಕ್ಕೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.