22.9 C
Bengaluru
Friday, July 5, 2024

ಒಂದು ದೇಶ, ಒಂದು ಚುನಾವಣೆ’ 2029ರಲ್ಲಿ ಜಾರಿ

ನವದೆಹಲಿ: ಒಂದು ದೇಶ, ಒಂದು ಚುನಾವಣೆ ಕಾಯಿದೆಯನ್ನು 2029ರಲ್ಲಿ ಜಾರಿಗೊಳಿಸಬಹುದೆಂದು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್ ನೇತೃತ್ವ 8 ಸದಸ್ಯರನ್ನು ಒಳಗೊಂಡ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ.ಒಂದು ರಾಷ್ಟ್ರ ಒಂದು ಚುನಾವಣೆ ಕಾರ್ಯಸಾಧ್ಯತೆ ಕುರಿತು ರಚಿಸಲಾಗಿದ್ದ 22ನೇ ಕಾನೂನು ಆಯೋಗದ ಸಮಿತಿ ವರದಿಯನ್ನು ಅಂತಿಮಗೊಳಿಸಿದ್ದು, ಕೇಂದ್ರ ಸರ್ಕಾರಕ್ಕೆ ಅದನ್ನು ಸಲ್ಲಿಸಲು ಸಜ್ಜಾಗಿದೆ. 2029ರ ಚುನಾವಣೆ ಹೊತ್ತಿಗೆ ಒಂದೇ ಚುನಾವಣೆ ನಡೆಸಬಹುದು ಎಂದು ಶಿಫಾರಸು ಮಾಡಲಾಗಿದೆ ಎಂದು ಎಂದು ಉನ್ನತ ಮೂಲಗಳು ತಿಳಿಸಿವೆ.ಏಕಕಾಲಕ್ಕೆ 2024-2029ರ ನಡುವೆ ಚುನಾವಣೆ ನಡೆಸುವ ಕುರಿತು ವರದಿ ನೀಡಲು ಕಾನೂನು ಆಯೋಗ ಸಿದ್ಧತೆ ನಡೆಸಿದೆ. ಒಂದು ದೇಶ ಒಂದು ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ರಚಿಸಿರುವ ಸಮಿತಿಯು, ಈ ವಿಷಯದ ಬಗ್ಗೆ ಕಾನೂನು ಆಯೋಗ & ರಾಜಕೀಯ ಪಕ್ಷಗಳಿಂದ ಸಲಹೆಗಳನ್ನು ಕೇಳಿದೆ. ಈ ಹಿಂದೆ 2018ರಲ್ಲಿ ಕೂಡ ನ್ಯಾಯಮೂರ್ತಿ ಬಿ.ಎಸ್.ಚೌಹಾಣ್ ನೇತೃತ್ವದ 21 ನೇ ಕಾನೂನು ಆಯೋಗವು ಒಂದು ರಾಷ್ಟ್ರ ಒಂದು ಚುನಾವಣೆಗೆ ಶಿಫಾರಸು ಮಾಡಿತ್ತು.ಎಲ್ಲ ರಾಜಕೀಯ ಪಕ್ಷಗಳಲ್ಲಿ ಈ ಕುರಿತು ಸಹಮತ ಮೂಡಿಬಂದಿಲ್ಲ. ಎಂದಿರುವ ಅಧಿಕಾರಿಗಳು, ಈ ವರದಿಯನ್ನು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಉನ್ನತ ಸಮಿತಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ. ಇತ್ತೀಚೆಗಷ್ಟೆ ಕೋವಿಂದ್ ನೇತೃತ್ವದ ಸಮಿತಿ ರಚಿಸಲಾಗಿದ್ದು, ಮೊದಲ ಸಭೆ ಕಳೆದ ಶನಿವಾರ ನಡೆಯಿತು,ಈ ಹಿಂದಿನ ಚೌಹಾಣ್ ಸಮಿತಿ 2019ರ ಚುನಾವಣೆಗೆ ಶಿಫಾರಸುಗಳನ್ನು ಮಾಡಿತ್ತು. ಒಂದು ವರ್ಷದಲ್ಲಿ ನಡೆಯಬೇಕಿರುವ ಚುನಾವಣೆಗಳನ್ನು ಒಂದೇ ಬಾರಿ ಮಾಡುವಂತೆ ಚೌಹಾಣ್ ವರದಿ ಶಿಫಾರಸು ಮಾಡಿತ್ತು. ಇದಕ್ಕಾಗಿ ಕನಿಷ್ಠ 5 ಸಂವಿಧಾನ ತಿದ್ದುಪಡಿಗಳ ಅಗತ್ಯ ಇದೆ ಎಂದು ವರದಿ ಹೇಳಿತ್ತು.

Related News

spot_img

Revenue Alerts

spot_img

News

spot_img