22.4 C
Bengaluru
Saturday, July 6, 2024

ಅಮೆಜಾನ್,ಫ್ಲಿಪ್ ಕಾರ್ಟ್ನಲ್ಲಿ ಸರ್ಕಾರದ ಅಕ್ಕಿ- 1 ಕೆ.ಜಿಗೆ 29 ರೂ. ಮಾತ್ರ

#People# Central govt# Rice# Amazon# Flipkart# NAFED#NCCF# Sanjeev chopra

ಹೊಸದಿಲ್ಲಿ: ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಏನು ಸಿಗುತ್ತೆ.. ಏನು ಸಿಗಲ್ಲ ಅಂತ ಹೇಳೋದು ಕಷ್ಟ.. ಇನ್ನು ಮುಂದೆ ಸರ್ಕಾರದ ಅಕ್ಕಿ ಕೂಡ ಇಲ್ಲಿ ಸಿಗುತ್ತೆ. ಅದು ಕೂಡಾ ಅತ್ಯಂತ ಕಡಿಮೆ ಬೆಲೆಗೆ ಕೇವಲ 29 ರೂಪಾಯಿಗಳಿಗೆ 1 ಕೆ.ಜಿ ಅಕ್ಕಿ ದೊರೆಯಲಿದೆ. ಕೇಂದ್ರ ಸರ್ಕಾರ ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಕೆಲ ಇ-ಕಾಮರ್ಸ್ ತಾಣಗಳಲ್ಲಿ ಅಕ್ಕಿ ಮಾರಾಟಕ್ಕೆ ಮುಂದಾಗುತ್ತಿದೆ. ಹೀಗಿರುವಾಗ್ಲೇ ಈ ನಿರ್ಧಾರವನ್ನೂ ಪ್ರಕಟಿಸಿದೆ. ಅದರಂತೆ ಭಾರತ್ ಅಕ್ಕಿ 10 ಮತ್ತು 5 ಕೆಜಿ ಬ್ಯಾಗ್ ಗಳಲ್ಲಿ ಮಾರಾಟ ಆಗಲಿದೆ. ಈ ವಿಚಾರವನ್ನ ಕೇಂದ್ರ ಆಹಾರ ಸಚಿವಾಲಯದ ಕಾರ್ಯದರ್ಶಿ ಸಂಜೀವ್ ಚೋಪ್ರಾ ಹೇಳಿದ್ದಾರೆ.

ಇದರೊಂದಿಗೆ NAFED,NCCF ಕೇಂದ್ರಿಯ ಭಂಡಾರಗಳಲ್ಲೂ ಅಕ್ಕಿ ದೊರೆಯಲಿದೆ ಎಂದು ಸಂಜೀವ್ ಚೋಪ್ರಾ ಮಾಹಿತಿ ನೀಡಿದ್ದಾರೆ. ಅಲ್ಲದೇ ಅಕ್ಕಿ ದರ ನಿಯಂತ್ರಣಕ್ಕೆ ಬರುವ ತನಕ ಅಕ್ಕಿ ರಫ್ತಿಗೆ ಹೇರಲಾಗಿರೋ ನಿರ್ಬಂಧವನ್ನ ಸಡಿಲಿಕೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಇದಕ್ಕಾಗಿ ಆಹಾರ ಸಚಿವಾಲಯ 5 ಲಕ್ಷ ಟನ್ ಅಕ್ಕಿಯನ್ನು ಮೊದ ಹಂತಜ ಭಾರತ್ ಅಕ್ಕಿ ಯೋಜನೆಗೆ ನೀಡಿದೆ.

ಇನ್ನು ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜನರ ಮೇಲೆ ಹೊರೆ ಆಗದಂತೆ ನೋಡಿಕೊಳ್ಳಲು ಮುಂದಾಗಿದೆ. ಇದರಿಂದ ಅಕ್ಕಿ, ಸಕ್ಕರೆ, ಗೋಧಿ, ಈರುಳ್ಳಿ ಮುಂತಾದ ದಿನಬಳಕೆ ವಸ್ತುಗಗಳ ಬೆಲೆ ನಿಯಂತ್ರಣದ ಮೇಲೆ ಗಮನ ಹರಿಸಿದೆ. ಆದರೆ ಅಕ್ಕಿ ದರ ಮಾತ್ರ ಯಾವುದೇ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿ ನೋಡಿದರೆ ಶೇಕಡ 14.5 ಪ್ರತಿಶತದಷ್ಟು ಹೆಚ್ಚಾಗಿಯೇ ಇದೆ. ಇದರಿಂದ ಜನಸಾಮಾನ್ಯರ ಮೇಲಾಗುವ ಪರಿಣಾಮವನ್ನ ತಪ್ಪಿಸಲು ಸರ್ಕಾರ ಈ ದಿಟ್ಟ ಕ್ರಮ ಕೈಗೊಂಡಿದೆ.

Related News

spot_img

Revenue Alerts

spot_img

News

spot_img