21.1 C
Bengaluru
Monday, December 23, 2024

ತರಬೇತಿಯಲ್ಲಿರುವ ಭಾರತೀಯ ಕಂದಾಯ ಸೇವೆಯ ಅಧಿಕಾರಿಗಳು ಮತ್ತು CPWDನ ಇಂಜಿನಿಯರ್ಗಳ ಜತೆ ರಾಷ್ಟ್ರಪತಿ ಮಾತುಕತೆ.

ಭಾರತೀಯ ಕಂದಾಯ ಸೇವೆಯ 76 ನೇ ಬ್ಯಾಚ್ ನ ತರಬೇತಿಯಲ್ಲಿರುವ ಅಧಿಕಾರಿಗಳು ಮತ್ತು CPWD (2020 ಮತ್ತು 2021 ಬ್ಯಾಚ್ ಗಳು) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳು ಇಂದು (ಮಾರ್ಚ್ 14, 2023) ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಭಾರತೀಯ ಕಂದಾಯ ಸೇವೆಯ ಅಧಿಕಾರಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಸರ್ಕಾರಕ್ಕೆ ನೇರ ತೆರಿಗೆಯನ್ನು ಸಂಗ್ರಹಿಸುವುದು ಅತ್ಯಂತ ಮಹತ್ವದ ಮತ್ತು ಜವಾಬ್ದಾರಿಯುತ ಕೆಲಸವಾಗಿದೆ. ಇದಕ್ಕೆ ಅತ್ಯಂತ ಪರಿಣಾಮಕಾರಿತ್ವ ಮತ್ತು ಪಾರದರ್ಶಕತೆ ಅಗತ್ಯವಾಗಿದೆ. ಸರ್ಕಾರವು ಈ ತೆರಿಗೆಗಳನ್ನು ಅಭಿವೃದ್ಧಿ ಯೋಜನೆಗಳಿಗೆ ಅನುದಾನ ರೂಪದಲ್ಲಿ ನೀಡಲು ಮತ್ತು ನಾಗರಿಕರ ಕಲ್ಯಾಣಗಳಿಗೆ ಬಳಸಿಕೊಳ್ಳುತ್ತದೆ ಎಂದು ಹೇಳಿದರು.

IRS ಅಧಿಕಾರಿಗಳು ಸರ್ಕಾರಕ್ಕೆ ಸಂಪನ್ಮೂಲಗಳನ್ನು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಮತ್ತು ಆ ಮೂಲಕ ಆಡಳಿತದ ಇತರ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗುತ್ತದೆ. ತೆರಿಗೆದಾರರು ಕೇವಲ ಆದಾಯದ ಮೂಲಗಳಲ್ಲ, ಆದರೆ ಅವರು ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಪಾಲುದಾರರು ಎಂಬುದನ್ನು ನೆನಪಿನಲ್ಲಿಡಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಲಹೆ ನೀಡಿದರು.
ತೆರಿಗೆ ಸಂಗ್ರಹಕ್ಕೆ ಅನುಕೂಲಕರವಾದ ಮತ್ತು ತೆರಿಗೆ ಪಾವತಿದಾರರಿಗೆ ಸ್ನೇಹಪರ ವಾತಾವರಣವನ್ನು ನಿರ್ಮಿಸಬೇಕು ರಾಷ್ಟ್ರಪತಿಗಳು ಕರೆ ನೀಡಿದರು.

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಆಡಳಿತ ಮತ್ತು ಆಡಳಿತವನ್ನು ನಡೆಸುವ ಜನರ ಪರಿಣಾಮಕಾರಿ ಕಾರ್ಯಕ್ಷಮತೆಗೆ ಮೂಲಭೂತವಾದ ಸಾರ್ವಜನಿಕ ಕಟ್ಟಡಗಳು, ಸರ್ಕಾರಿ ಕಚೇರಿಗಳು ಮತ್ತು ವಸತಿ ಮತ್ತು ಇತರ ಯೋಜನೆಗಳನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು CPWD ಹೊಂದಿದೆ ಎಂದು ಗಮನ ಸೆಳೆದರು.

ಭಾರತದ ಕ್ಷಿಪ್ರ ಬೆಳವಣಿಗೆಯು ರಸ್ತೆಗಳು, ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಸಾರ್ವಜನಿಕ ಸ್ಥಳಗಳಾದ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳಂತಹ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳ ಬೇಡಿಕೆ ಹೆಚ್ಚಳವಾಗಿದೆ. ಸಿಪಿಡಬ್ಲ್ಯೂಡಿ ಅಧಿಕಾರಿಗಳು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಗಳು ವರ್ತಮಾನದ ಅಗತ್ಯಗಳನ್ನು ಪೂರೈಸುವ ಸೌಲಭ್ಯಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿರಬೇಕು. ಆದರೆ ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯವನ್ನು ಖಚಿತಪಡಿಸಬೇಕು ಎಂದು ದ್ರೌಪದಿ ಮುರ್ಮು ಹೇಳಿದರು.
ಯೋಜನೆಗಳನ್ನು ಹೆಚ್ಚು ಶಕ್ತಿ-ಸಮರ್ಥ, ಸಮರ್ಥನೀಯ ಮತ್ತು ಪರಿಸರ ಸ್ನೇಹಿಯನ್ನಾಗಿ ಮಾಡಲು ವಿನೂತನ ಮಾರ್ಗಗಳನ್ನು ಅನ್ವೇಷಿಸಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಲಹೆ ನೀಡಿದರು.

Related News

spot_img

Revenue Alerts

spot_img

News

spot_img