22.6 C
Bengaluru
Saturday, July 27, 2024

ಪಿಂಚಣಿ ಪಡೆಯುವ ಎಲ್ಲರಿಗೂ ಆಧಾರ್ ಜೋಡಣೆ ಎನ್.ಪಿ.ಸಿ.ಐ(NPCI) ಲಿಂಕ್ ಗೆ ಅಕ್ಟೋಬರ್ 25 ಕೊನೆಯ ದಿನ

Aadhar NPCI Link With Pension Scheme;ಕೇಂದ್ರ ಸರ್ಕಾರದ ಪ್ರಮುಖವಾದ ಯೋಜನೆಯಲ್ಲಿ ಪಿಂಚಣಿ ಯೋಜನೆ ಕೂಡ ಒಂದು. ಜನರ ವೃದ್ದಾಪ್ಯ ಜೀವನಕ್ಕೆ ಆರ್ಥಿಕ ಸ್ಥಿರತೆ ನೀಡುವ ಉದ್ದೇಶದಿಂದ ಸರಕಾರ ವಿವಿಧ ಯೋಜನೆಯನ್ನು ರೂಪಿಸುತ್ತಿವೆ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳಾದ ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಮತ್ತು ಮೈತ್ರಿ ಯೋಜನೆಗಳನ್ನು ನೇರ ಹಣ ಸಂದಾಯ ಯೋಜನೆಯಡಿ ತರುವ ನಿಟ್ಟಿನಲ್ಲಿ, ಜಿಲ್ಲೆಯಲ್ಲಿ ಪಿಂಚಣಿ ಪಡೆಯುತ್ತಿರುವ ಅರ್ಹ ಫಲಾನುಭವಿಗಳ ಬ್ಯಾಂಕ್ ಮತ್ತು ಪೋಸ್ಟ್ ಖಾತೆಗಳಲ್ಲಿ ಎನ್.ಪಿ.ಸಿ.ಐ ಲಿಂಕ್ ಮತ್ತು ಆಧಾರ್ ಜೋಡಣೆಯಾಗದೆ ಇರುವುದರಿಂದ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಸಂಬಂಧಪಟ್ಟ ತಮ್ಮ ಬ್ಯಾಂಕ್ ಗಳಿಗೆ , ಅಂಚೆ ಕಛೇರಿ, ನಾಡ ಕಛೇರಿ ಹಾಗೂ ತಾಲ್ಲೂಕು ಕಛೇರಿಗಳಿಗೆ ಭೇಟಿ ನೀಡಿ ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಅಥವಾ ಅಂಚೆ ಖಾತೆಗಳನ್ನು ನೀಡಿ ಅಕ್ಟೋಬರ್ 25 ರೊಳಗೆ ಕಡ್ಡಾಯವಾಗಿ ಎನ್.ಪಿ.ಸಿ.ಐ ಮತ್ತು ಆಧಾರ್ ಸೀಡಿಂಗ್ ಮಾಡಿಸಬೇಕು ತಪ್ಪಿದಲ್ಲಿ ಸರ್ಕಾರವು ಕಾಲ ಕಾಲಕ್ಕೆ ತೆಗೆದುಕೊಳ್ಳುವ ನಿರ್ಧಾರಗಳಿಗೆ ಅರ್ಹ ಫಲಾನುಭವಿಗಳೆ ಜವಾಬ್ದಾರರಾಗಿರುತ್ತಾರೆ,ವಿವಿಧ ಫಲಾನುಭವಿಗಳು ಬ್ಯಾಂಕ್, ಅಂಚೆ ಕಚೇರಿಗೆ ತೆರಳಿ ತಮ್ಮ ಆಧಾರ್ ನಂಬರ್ ಅನ್ನು ಉಳಿತಾಯ ಖಾತೆಗೆ ಎನ್.ಪಿ.ಸಿ.ಐ ಜೋಡಣೆ ಮಾಡಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಮಾಸಿಕ ಪಿಂಚಣಿ ಮತ್ತು ಸಹಾಯಧನ ಪಡೆಯಲು ತೊಂದರೆಯಾಗುತ್ತದೆ.

Related News

spot_img

Revenue Alerts

spot_img

News

spot_img