22.9 C
Bengaluru
Friday, July 5, 2024

ಬಿಡಿಎ ನಿರ್ಮಿಸುತ್ತಿರುವ ಎಂಎಆರ್ ರಸ್ತೆಯಲ್ಲಿ ಒಂದು ವೃತ್ತ ಕೈಬಿಟ್ಟಿದ್ದಕ್ಕೆ ಎನ್‌ಪಿಕೆಎಲ್ ಮುಕ್ತ ವೇದಿಕೆ ಆಕ್ಷೇಪ!

ಬೆಂಗಳೂರು ಡೆವಲಪ್ ಮೆಂಟ್ ಅಥೋರಿಟಿ (BDA)ಬಿಡಿಎ ನಿರ್ಮಿಸುತ್ತಿರುವ ಮುಖ್ಯ ಆರ್ಟಿರಿಯಲ್ ರಸ್ತೆಯಲ್ಲಿ (ಎಂಎಆರ್) ಒಂದು ವೃತ್ತವನ್ನು ಕೈಬಿಟ್ಟಿರುವುದಕ್ಕೆ ಸೈಟ್ ಹಂಚಿಕೆದಾರ ಸಂಘಟನೆಯಾದ ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆಯು ಸಿಎಂಗೆ ಪತ್ರ ಬರೆದು ಆಕ್ಷೇಪವನ್ನು ದಾಖಲಿಸಿದೆ.

ಬಡಾವಣೆಯ ಮಧ್ಯದಲ್ಲಿ 107 ಕಮೀ. ಉದ್ದದ ಎಂಎಆರ್ ರಸ್ತೆ ಹಾದುಹೋಗಲಿದೆ. ಈ ರಸ್ತೆಯು 100 ಮೀಟರ್‌ ಅಗಲವಿದ್ದು,ಮೈಸೂರು ರಸ್ತೆ ಹಾಗೂ “ಮಾಗಡಿ ರಸ್ತೆಯನ್ನು ಸಂಪರ್ಕಿಸಲಿದೆ. “ಬಡಾವಣೆ ರಚನೆ. ಪೂರ್ಣಗೊಂಡ ಬಳಿಕ ಒಂದು ಕಡೆಯಿಂದ ಇನ್ನೊಂದು ಭಾಗಕ್ಕೆ ಜನರು ಸುಲಭವಾಗಿ ಸಂಚರಿಸುವುದಕ್ಕೆ ಎಂಎಆರ್ ಮಾರ್ಗದಲ್ಲಿ ಐದು ವೃತ್ತಗಳನ್ನು (ರೋಟರಿ) ನಿರ್ಮಿಸಲು ಟೆಂಡರ್ ಆಹ್ವಾನಿಸಲಾಗಿತ್ತು.

ಆದರೀಗ, ಒಂದನ್ನು ಮಾತ್ರ ನಿರ್ಮಿಸಲಾಗಿದೆ. ಉಳಿದವುಗಳನ್ನು ಭೂಸ್ವಾಧೀನ ನೆಪ ಮಾಡಿ ರಚಿಸಿಲ್ಲ ಅದರಲ್ಲೂ ಮಾಗಡಿ ರಸ್ತೆಯಿಂದ 9.4 ಕಿ.ಮೀ.ನಲ್ಲಿ ರಸ್ತೆ ನಿರ್ಮಿಸಿದ್ದರೂ, ರೋಟರಿ ರಚಿಸದೆ ಕೈಬಿಡಲಾಗಿದೆ. ಇದರಿಂದಾಗಿ ಮೈಸೂರು ರಸ್ತೆಯಿಂದ ಅರ್ಚಕರಹಳ್ಳಿ ಬಳಿ 3 ಕಿ.ಮೀ.ವರೆಗೂ ತಿರುವು ಪಡೆಯಲು ಸಾಧ್ಯವಾಗದು. ಜತೆಗೆ ಮುಂದಿನ ವೃತ್ತದವರೆಗೂ ಸಾಗಿ ವಾಪಸ್‌ ಬ್ಲಾಕ್‌ 5 ಹಾಗೂ 6ನೇ ಬ್ಲಾಕ್‌ಗೆ ಬರಲು ಐದಾರು ಕಿ.ಮೀ. ಸುತ್ತಿಬಳಸಿ ಬರುವಂತಾಗುತ್ತದೆ.

ಯಾರದೋ ಒತ್ತಡಕ್ಕೆ ಒಳಗಾಗಿ ಇಲ್ಲಿ ರೋಟರಿ ಬದಲು ಮೇಲ್ದ್ಜೇತುವೆ ನಿರ್ಮಿಸಲಾಗುತ್ತಿದೆ ಇದರಿಂದ ಯೋಜನೆ ನಿರ್ಮಾಣ ವೆಚ್ಚವೂ ಏರುವ ಸಾಧ್ಯತೆ ಇದೆ. ಎಂಬ ಆಕ್ಷೇಪ ಕೇಳಿಬಂದಿದೆ.ಸಮಸ್ಯೆ ಕುರಿತು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ,ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ವಿಧಾನಸಭೆ ಅರ್ಜಿ ಸಮಿತಿಯ ಅಧ್ಯಕ್ಷ, ಬಿಡಿಎ ಅಧ್ಯಕ್ಷ ಹಾಗೂ ಆಯುಕ್ತರಿಗೆ ವಸ್ತುಸ್ಥಿತಿ ವಿವರಿಸಿರುವ ಪತ್ರವನ್ನು ವೇದಿಕೆಯ ಅಧ್ಯಕ್ಷ ಎನ್‌. ಶ್ರೀಧರ್‌ ರವಾನಿಸಿದ್ದಾರೆ.

Related News

spot_img

Revenue Alerts

spot_img

News

spot_img