ಬೆಂಗಳೂರು, ಜು. 26 : ಆದಾಯ ತೆರಿಗೆಯನ್ನು ಪಾವತಿ ಮಾಡುವುದು ಸುಲಭದ ಕೆಲಸವಲ್ಲ. ಆನ್ ಲೈನ್ ನಲ್ಲಿ ಗಂಟೆ ಗಟ್ಟಲೆ ಕೂತು ಪಾವತಿ ಮಾಡಬೇಕು. ಆದರೆ, ಈಗ ಆದಾಯ ತೆರಿಗೆ ಪಾವತಿ ಮಾಡುವುದು ಬಹಳ ಸುಲಭವಾಗಿದೆ. ಇದಕ್ಕಾಗಿ ಫಿನ್ ಟೆಕ್ ಸಂಸ್ಥೆ ಫೋನ್ ಪೇ ಆದಾಯ ತೆರಿಗೆ ಪಾವತಿ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ಇರಿಂದ ಪೋನ್ ಪೇ ಅಪ್ಲಿಕೇಶನ್ ನಲ್ಲಿ ಸುಲಭವಾಗಿ ತೆರಿಗೆಯನ್ನು ಪಾವತಿ ಮಾಡಬಹುದಾಗಿದೆ. ಫೋನ್ ಪೇ ಮೂಲಕ ತೆರಿಗೆಯನ್ನು ಪಾವತಿಸುವುದು ಹೇಗೆ ಎಂಬುದನ್ನು ತಿಳಿಯಿರಿ..
ಫೋನ್ ಪೇ ಆದಾಯ ತೆರಿಗೆ ಪಾವತಿ ಅಪ್ಲಿಕೇಷನ್ ನಲ್ಲಿ ತೆರಿಗೆ ಪಾವತಿಸಲು ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಬಳಸಬಹುದು. ಕ್ರೆಡಿಟ್ ಕಾರ್ಡ್ ಮೂಲಕ ತೆರಿಗೆ ಪಾವತಿ ಮಾಡಿದ್ದಲಿ ಬಳಕೆದಾರರಿಗೆ 45 ದಿನಗಳ ಬಡ್ಡಿ ರಹಿತ ಅವಧಿ ಅನ್ನು ನೀಡಲಾಗುತ್ತದೆ. ಜೊತೆಗೆ ರಿವಾರ್ಡ್ ಪಾಯಿಂಟ್ಸ್ ಕೂಡ ಸಿಗಲಿದೆ. ಇದರಿಂದ ನರಿಗೆ ಸಮಯದ ಉಳಿತಾಯವೂ ಆಗುತ್ತದೆ. ಆದಾಯ ತೆರಿಗೆಯನ್ನು ಪಾವತಿಸುವುದು ಬಹಳ ಸುಲಭವಾಗಿದೆ.
ಆದಾಯ ತೆರಿಗೆಯನ್ನು ಪಾವತಿ ಮಾಡಲು ಮೊದಲು ನೀವು ಫೋನ್ ಪೇ ಅಪ್ಲಿಕೇಷನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ. ಬಳಿಕ ಅದನ್ನು ಸ್ಥಾಪಿಸಿ, ಹೋಮ್ ಪೇಜ್ ಗೆ ತೆರಳಿ. ಇಲ್ಲಿ Income Taxನ ಐಕಾನ್ ಮೇಲೆ ಕ್ಲಿಕ್ ಮಾಡಿ. ಬಳಿಕ ಮೌಲ್ಯಮಾಪನ ವರ್ಷಕ್ಕೆ ಪಾವತಿಸುವ ತೆರಿಗೆಯ ವಿಧಾನವನ್ನು ಆಯ್ಕೆ ಮಾಡಿ. ಇಲ್ಲಿ ಪ್ಯಾನ್ ಕಾರ್ಡ್ ಮಾಹಿತಿಗಳನ್ನು ನಮೂದಿಸಿ. ಬಳಿ ಆಯ್ಕೆಯ ಪೇಮೆಂಟ್ ಮೋಡ್ ಬಳಸಿ ಒಟ್ಟು ತೆರಿಗೆ ಮೊತ್ತ ನಮೂದಿಸಿದ ನಂತರ ಪಾವತಿ ಮಾಡಿ. ತೆರಿಗೆ ಪಾವತಿ ಯಶಸ್ವಿಯಾದ ನಂತರ, ಎರಡು ಕಾರ್ಯ ನಿರತ ದಿನದಲ್ಲಿ ಟ್ಯಾಕ್ಸ್ ಪೋರ್ಟಲ್ ಗೆ ಹಣ ಕ್ರೆಡಿಟ್ ಆಗುತ್ತದೆ.