ಮನೆಯನ್ನು ನೋಡುವಾಗ ಬಹುತೇಕರು ಸೂರ್ಯನ ಬಾಗಿಲು ಅಥವಾ ನಂದಿ ಬಾಗಿಲು ಎಂದು ನೋಡುತ್ತಾರೆ. ಹೀಗೆ ನಂದಿ ಬಾಗಿಲು ಇರುವ ಮನೆಗಳೇ ಉತ್ತರ ದಿಕ್ಕಿನ ಮನೆಗಳು ಎಂದು ಕರೆಯಲಾಗುತ್ತದೆ. ಈ ದಿಕ್ಕಿನಲ್ಲಿ ಬರುವಂತಹ ಮನೆಗಳ ಲಕ್ಷಣಗಳು, ವಾಸ್ತು ದೋಷ, ಪರಿಹಾರಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.
ಮನೆಯ ಉತ್ತರ ದಿಕ್ಕಿಗೆ ಕುಬೇರ ಅಧಿಪತಿ ಆಗಿರುತ್ತಾನೆ. ಆಯುಧ, ಗದೆ ಹಾಗೂ ಪ್ರತಿನಿಧಿ ಗ್ರಹ ಬುಧ ಉತ್ತರ ದಿಕ್ಕಿನ ಮೂಲಕ ಕಾಲ ಪುರುಷನ ಹೃದಯ ಹಾಗೂ ವಕ್ಷ ಸ್ಥಳದ ಕುರಿತು ಮಾಡಲಾಗುತ್ತದೆ. ಉತ್ತರ ದಿಕ್ಕಿಗೆ ಅಭಿಮುಖವಾದ ಮನೆಯ ಉತ್ತರ ದಿಕ್ಕಿನಲ್ಲಿ ಪೂಜೆಯ ಕೋಣೆ ಅತಿಥಿ ಕೋಣೆ ಅಥವಾ ಕಾರ್ಯಾಲಯ ಇದ್ದರೆ ಅತ್ಯಂತ ಶುಭ ಇರುತ್ತದೆ ಎಂದು ವಾಸ್ತುವಿನಲ್ಲಿ ಹೇಳಲಾಗಿದೆ.
ಒಂದು ವೇಳೆ ಉತ್ತರ ದಿಕ್ಕಿನಲ್ಲಿ ಗೋಡೆಗಳು ಬಿರುಕುಬಿಟ್ಟ ಅಥವಾ ಬಿದ್ದಿರುವ ಗೋಡೆ ಇದ್ದರೆ ಮನೆಯ ಯಾವುದಾದರೂ ವ್ಯಕ್ತಿ ಯಾವುದೇ ಕಾರಣದಿಂದ ಚಿಂತಾಗ್ರಸ್ಥನಾಗುತ್ತಾನೆ. ಒಂದು ವೇಳೆ ಉತ್ತರ ದಿಕ್ಕಿನಲ್ಲಿ ಕೊಳೆ ಭಾವಿ ಅಥವಾ ನಲ್ಲಿ ಇದ್ದರೆ ಮನೆಯ ಹಣ ಎಂದರೆ ಲಕ್ಷ್ಮೀ ಮನೆ ತೊರೆದು ಮತ್ತೊಬ್ಬರ ಮನೆಬಾಗಿಲಿಗೆ ಹೋಗುತ್ತಾಳೆ ಎಂಬ ಮಾತಿದೆ. ಅಲ್ಲದೆ, ಉತ್ತರ ದಿಕ್ಕಿನಲ್ಲಿ ಹಳೆಯ ವಸ್ತುಗಳ ಸಂಗ್ರಹ ಇದ್ದರೆ, ಇಕ್ಕಟ್ಟಾದ ದಾರಿ ಇದ್ದರೆ ಅವರು ದುರ್ಬಾಗಿಗಳಾಗಿ ನಿಧಾನವಾಗಿ ಸಂಪತ್ತು ಕಡಿಮೆಯಾಗುತ್ತಾ ಹೋಗುತ್ತದೆ.
ಉತ್ತರ ದಿಕ್ಕಿನಲ್ಲಿ ಬಾವಿ ಅಥವಾ ನೀರಿನ ಸಂಗ್ರಹವಿದ್ದರೆ ಮನೆಯಲ್ಲಿ ಯಾವುದೇ ವ್ಯಕ್ತಿಯ ಆರನೇ ಇಂದ್ರಿರ ಜಾಗೃತವಾಗುತ್ತದೆ. ಆತನೆಗೆ ಮುಂದೆ ನಡೆಯುವ ಘಟನೆ ಕುರಿತು ಸೂಚನೆ ಸಿಗುತ್ತದೆ. ಇಂತಹ ವ್ಯಕ್ತಿ ಪ್ರಾಚೀನ ಸಾಹಿತ್ಯ ಓದುವ ಅಭಿರುಚಿ ಹೊಂದಿರುತ್ತಾನೆ.
ಉತ್ತರ ದಿಕ್ಕಿನಲ್ಲಿ ಬಾವಿ ಇದ್ದರೆ ಆ ಮನೆಯ ಮಹಿಳೆಯರು ಚಮತ್ಕಾರಿಕ ಪರಿಸ್ಥಿತಿ ಅಂದರೆ ಮೋಸ ಹೋಗುವ ಪರಿಸ್ಥಿತಿ ಇರುತ್ತದೆ. ಉತ್ತರ ದಿಕ್ಕಿನಲ್ಲಿ ಮನೆಯಲ್ಲಿ ದಿನ ಜಗಳ ಇರುತ್ತದೆ. ಅಡುಗೆ ಮನೆಯೊಂದಿಗೆ ಸ್ನಾನ ಮನೆ ಇದ್ದರೆ ಸಹೋದರರ ನಡುವೆ ಪ್ರೇಮ ಭಾವನೆ ಇರುತ್ತದೆ. ಆದರೆ, ಮನೆಯ ಸ್ತೀಯರು ಜಗಳ ಆಡುತ್ತಿರುತ್ತಾರೆ.
ಉತ್ತರ ದಿಕ್ಕಿನ ಸ್ಥಾನ ಎತ್ತರವಾಗಿದ್ದರೆ ಸಂಪತ್ತು ಕಡಿಮೆಯಾಗಿ ಹೆಂಗಸರು ರೋಗಗ್ರಸ್ತರಾಗುತ್ತಾರೆ. ಉತ್ತರ ಭಾಗದಲ್ಲಿ ಖಾಲಿ ಇದ್ದು ಕಾಂಪೌಂಡ್ ಗೋಡೆಗೆ ಹತ್ತಿಕೊಂಡಂತೆ ಮನೆ ಇದ್ದರೆ, ದಕ್ಷಿಣ ದಿಕ್ಕಿನಲ್ಲಿ ಖಾಲಿ ಸ್ಥಳ ಇದ್ದರೆ ಅಂತಹ ಮನೆ ಇನ್ನೊಬ್ಬರ ಸಂಪತ್ತು ಆಗುತ್ತದೆ.
ಉತ್ತರ ದಿಕ್ಕಿನಲ್ಲಿ ಕೆಲಸಕ್ಕೆ ಬಾರದ ವಸ್ತುಗಳು ಇದ್ದರೆ ಆರ್ಥಿಕ ಹಾನಿ ಉಂಟಾಗುತ್ತದೆ. ಉತ್ತರ ಭಾಗದ ಬಾಗಿಲು ವಾಯುವ್ಯ ಕೋನಕ್ಕೆ ಮುಖವಾಗಿದ್ದರೆ ಕಳ್ಳತನ ಹಾಗೂ ಅಗ್ನಿಭಯ ಇರುತ್ತದೆ. ಉತ್ತರ ಭಾಗ ಮಧ್ಯ ಭಾಗಕ್ಕಿಂತ ಎತ್ತರ ಇದ್ದರೆ ಅಧಿಕ ಖರ್ಚು, ಅಶಾಂತಿ, ಸಾಲವಾಗುತ್ತದೆ.
ಉತ್ತರ ದಿಕ್ಕಿನಲ್ಲಿ ದಿಣ್ಣೆ, ಗೊಬ್ಬರದ ರಾಶಿ, ಕೆಲಸಕ್ಕೆ ಬಾರದ ಸಾಮಾನುಗಳು ಇದ್ದರೆ ಆರ್ಥಿಕ ನಷ್ಟ ಉಂಟಾಗುತ್ತದೆ.
ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದು ಸಹ ಅಷ್ಟು ಸೂಕ್ತವಲ್ಲ.
ಉತ್ತರ ದಿಕ್ಕು ವಿಕೃತವಾಗಿದ್ದರೆ ತಾಯಿ ಹಾಗು ನೌಕರರ ವರ್ಗದವರಿಗೆ ಎಂದಿಗೂ ನೆಮ್ಮದಿ ಇರುವುದಿಲ್ಲ. ಉತ್ತರ ದಿಕ್ಕಿನಲ್ಲಿ ನಿರ್ಮಿಸಿದ ಮನೆಯ ಬಾಗಿಲು ಆಗ್ನೇಯ ಕೋನಕ್ಕೆ ಇದ್ದರೆ ಯಾವಾಗಲೂ ಅಗ್ನಿ ಭಯ ಇರುತ್ತದೆ.
ಉತ್ತರ ದಿಕ್ಕಿಗೆ ನಿರ್ಮಿಸಿದ ಮನೆಯಲ್ಲಿ ಇಕ್ಕಟ್ಟಾದ ದಾರಿಗಳು ಬೇರೆಬೇರೆಯಾಗಿದ್ದರೆ, ಹಾಗೂ ಈ ದಿಕ್ಕಿನಲ್ಲಿ ಹಳೆಯ ವಸ್ತುಗಳನ್ನು ಸಂಗ್ರಹಿಸಿದ್ದರೆ ಮನೆಯ ಯಾರಿಗೂ ಭಾಗ್ಯ ಇರುವುದಿಲ್ಲ, ಇದ್ದವರೆನ್ನೆಲ್ಲಾ ನಿಧಾನವಾಗಿ ಕಳೆದುಕೊಳ್ಳುವ ಪ್ರಮೇಯ ಬರಬಹುದು.
ಪರಿಹಾರ ಕ್ರಮಗಳು:
ಮನೆಯಲ್ಲಿ ಪ್ರವೇಶ ದ್ವಾರದಲ್ಲಿ ಸಾಧ್ಯವಾದರೆ ಗಿಳಿ ಸಾಕಬೇಕು ಅಥವಾ ಗಿಣಿಯಂತೆ ಕೂಗುವ ಕಾಲಿಂಗ್ ಬೆಲ್ ಹಾಕಬೇಕು. ಮನೆಯ ಗೋಡೆಗಳಿಗೆ ಹಸಿರು ಬಣ್ಣ ಬಳಿಯಬೇಕು. ಬುಧ ಯಂತ್ರವನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡಬೇಕು, ಬುಧವಾರ ವ್ರತ ಆಚರಣೆ ಮಾಡಬೇಕು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.