21.1 C
Bengaluru
Monday, December 23, 2024

ಡಿಸ್ಕೌಂಟ್ ಕೊಟ್ರೂ ಪಾವತಿಸದ ಜನರು: ಆಫರ್ ಮುಗಿಯಲು ಇನ್ನೆರಡೇ ದಿನ ಬಾಕಿ

ಬೆಂಗಳೂರು, ಮಾ. 17: ರಾಜ್ಯದ ವಾಹನ ಸವಾರರಿಗೆ ದಂಡ ಪಾವತಿಸಲು ಕಳೆದ ತಿಂಗಳು ಶೇ.50 ರಷ್ಟು ಡಿಸ್ಕೌಂಟ್ ನೀಡಿ ಕಾಲಾವಕಾಶವನ್ನು ನೀಡಲಾಗಿತ್ತು. ಟ್ರಾಫಿಕ್ ರೂಲ್ಸ್ ಗಳನ್ನು ಬ್ರೇಕ್ ಮಾಡಿ ಫೈನ್ ಹಾಕಿಸಿಕೊಂಡಿದ್ದವರಲ್ಲಿ ಅತಿಹೆಚ್ಚು ಮಂದಿ ದಂಡವನ್ನು ಪಾವತಿ ಮಾಡಿರಲಿಲ್ಲ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ ಪ್ರಸ್ತವನೆಯನ್ನು ಅಂಗೀಕರಿಸಿದ ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ ಪ್ರಕರಣಗಳ ದಂಡ ಪಾವತಿ ಮೇಲೆ 50% ರಿಯಾಯಿತಿ ನೀಡಿತ್ತು. ಫೆಬ್ರವರಿ 02 ರಂದು ಈ ಆದೇಶವನ್ನು ಹೊರಡಿಸಿತ್ತು.

ಈ ಹಿನ್ನೆಲೆಯಲ್ಲಿ ಫೆಬ್ರವರಿ 03 ರಿಂದ ದಂಡ ಪಾವತಿ ಪ್ರಕ್ರಿಯೆ ಆರಂಭವಾಗಿ ಫೆಬ್ರವರಿ 11ರವರೆಗೆ ಸಮಯ ನೀಡಲಾಗಿತ್ತು. ಈ ಮೂಲಕ ಬಾಕಿ ಉಳಿದಿದ್ದ ಲಕ್ಷಾಂತರ ಪ್ರಕರಣಇತ್ಯರ್ಥವಾಗಿದ್ದು ರಿಯಾಯಿತಿ ಪ್ಲಾನ್ ಯಶಸ್ವಿಯಾಗಿತ್ತು. ಹೀಗಾಗಿ ಹಲವರು ಮತ್ತೆ ಈ ರಿಯಾಯಿತಿಯ ಸಮಯವನ್ನು ವಿಸ್ತರಣೆ ಮಾಡುವಂತೆ ಕೇಳಲಾಗಿತ್ತು. ಹಲವು ವರ್ಷಗಳಿಂದ ಬಾಕಿ ಇದ್ದ ದಂಡದ ಮೊತ್ತ ಬರೋಬ್ಬರಿ 152 ಕೋಟಿ ರೂಪಾಯಿಯನ್ನು ಕೇವಲ 9 ದಿನಗಳಲ್ಲಿ ಸಂಗ್ರಹಿಸಲಾಗಿತ್ತು. ಈ ಡಿಸ್ಕೌಂಟ್ ಅನ್ನು ಇನ್ನಷ್ಟು ದಿನಗಳಿಗೆ ವಿಸ್ತರಿಸುವಂತೆ ಕೇಳಲಾಗಿತ್ತು. ಅದಕ್ಕಾಗಿ ಇದೇ ತಿಂಗಳು ಮಾರ್ಚ್ 4 ರಿಂದ ಪುನಃ 15 ದಿನಗಳ ಕಾಲ ವಿಸ್ತರಿಸಲಾಗಿತ್ತು. ಆದರೆ, ಸಮಯ ವಿಸ್ತಿರಿಸಿದರೂ ಈಗ ಸಾರ್ವಜನಿಕರು ದಂಡವನ್ನು ಪಾವತಿಸಲು ಹೆಚ್ಚು ಆಸಕ್ತಿಯನ್ನು ತೋರಿಸುತ್ತಿಲ್ಲ. ಕಳೆದ ತಿಂಗಳು ಇದ್ದ 9 ದಿನದ ಅವಕಾಶದಲ್ಲಿ ವಾಹನ ಸವಾರರು ಮುಗಿಬಿದ್ದು, ರಿಯಾಯಿತಿ ದರದಲ್ಲಿ ತನ್ನ ದಂಡವನ್ನು ಕಟ್ಟಿ ಕ್ಲಿಯರ್ ಮಾಡಿಕೊಂಡಿದ್ದರು. ಇದರಿಂದ 43 ಲಕ್ಷ ಪ್ರಕರಣಗಳು ಕ್ಲಿಯರ್ ಆಗಿದ್ದವು. ಈ ಮತ್ತೆ ರಿಯತಾಯಿತಿ ದರದಲ್ಲಿ ದಂಡವನ್ನು ಕಟ್ಟಲು ಅವಕಾಶ ಮಾಡಿಕೊಟ್ಟರೂ ಕೂಡ ಯಾರೊಬ್ಬರು ದಂಡ ಕಟ್ಟಲು ಮುಂದಾಗಿಲ್ಲ. ಡಿಸ್ಕೌಂಟ್ ಬೆಲೆಯಲ್ಲಿ ದಂಡವನ್ನು ಕಟ್ಟಲು ಕೇವಲ ಇನ್ನೇರಡೇ ದಿನ ಬಾಕಿ ಇದೆ.

ಎರಡನೇ ಬಾರಿಗೆ ಸಮಯ ವಿಸ್ತರಿಸಿದಾಗ ಕಳೆದ 13 ದಿನಗಳಲ್ಲಿ ಕೇವಲ 9.30 ಕೋಟಿಯನ್ನು ಸಂಗ್ರಹ ಮಾಡಲಾಗಿದೆ. ಈ ಬಾರಿ ಹೆಚ್ಚು ಮಂದಿ ಆಸಕ್ತಿ ತೋರದೆಯೇ ಯಾರೂ ಹೆಚ್ಚಾಗಿ ದಂಡವನ್ನು ಪಾವತಿಸುತ್ತಿಲ್ಲ. ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯ ಸಂಚಾರ ಪೊಲೀಸ್ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಾರ್ವಜನಿಕರು ದಂಡ ಪಾವತಿಸಬಹುದು. ಆನ್ ಲೈನ್ ಮೂಲಕ ಪೆಟಿಎಂ ಬಳಸಿಯೂ ದಂಡವನ್ನು ಪಾವತಿಸಬಹುದಾಗಿದೆ.

Related News

spot_img

Revenue Alerts

spot_img

News

spot_img