21.2 C
Bengaluru
Monday, July 8, 2024

“ಹಳೆ ಪಿಂಚಣಿ ಯೋಜನೆ ಅನುಷ್ಠಾನದ ಬಗ್ಗೆ ಇಲ್ಲ ಯಾವುದೇ ಸುಳಿವು: ಐದು ಗ್ಯಾರಂಟಿಗಳಿಗೆ ತಾತ್ಕಲಿಕ ಒಪ್ಪಿಗೆ:

ಬೆಂಗಳೂರು: ಮೇ 21:ರಾಜ್ಯ ಸರ್ಕಾರಿ ನೌಕರರರ ಬಹುದಿನದ ಬೇಡಿಕೆಯಾದ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಅನುಷ್ಠಾನದ ನೂತನ ವಾಗಿ ರಚನೆಯಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಯಾವುದೇ ಸುಳಿವು ನೀಡಿಲ್ಲ, ಉಳಿದಂತೆ ಐದು ಗ್ಯಾರಂಟಿಗಳಿಗೆ ತಾತ್ಕಲಿಕ ಅನುಮೋದನೆ ನೀಡಿದೆ.
ಆದರೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಯಾಗುವ ಬಗ್ಗೆ ಕನಸು ಕಾಣುತ್ತಿರುವ ಸರ್ಕಾರಿ  ನೌಕರರಿಗೆ ನಿರಾಸೆಯಾದಂತಾಗಿದೆ. ಅಲ್ಲದೇ ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಕಾಂಗ್ರೇಸ್ ಸರ್ಕಾರವು ಚುನಾವಣೆಗು ಮುನ್ನ ತನ್ನ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದಾಗಿ ಬರವಸೆ ನೀಡಿ ಅಧಿಕಾರಕ್ಕೆ ಬಂದು 02 ವರ್ಷ ಕಳೆದರು ಅದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲವಿರುವುದರಿಂದ ಕರ್ನಾಟಕದಲ್ಲಿ ನೂತನ ವಾಗಿ ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರದ ಮೇಲು ವಿಶ್ವಾಸ ಕಡಿಮೆಯಾಗಿದೆ..
  ಕಾಂಗ್ರೇಸ್ ಪಕ್ಷ ಚುನಾವಣೆಗೆ ಮುನ್ನ ನೀಡಿದ 05 ಪ್ರಮುಖ ಗ್ಯಾರಂಟಿಗಳಾದ ಗೃಹ ಲಕ್ಷ್ಮಿ ಯೋಜನೆ, ಯುವ ನಿಧಿ ಯೋಜನೆ, ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ ಹಾಗೂ ಅನ್ನ ಭಾಗ್ಯ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ  ತಾತ್ವಿಕ ಅನುಮೋದನೆ ದೊರಕಿದೆ. ಈ ಯೋಜನೆಗಳ ಬಗ್ಗೆ ವಿವರವಾದ ರೂಪುರೇಷೆ ಹಾಗೂ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Related News

spot_img

Revenue Alerts

spot_img

News

spot_img