21.1 C
Bengaluru
Monday, December 23, 2024

“2022 ನೇ ವರ್ಷದ ಅತ್ಯುತ್ತಮ ಪೊಲೀಸ್ ಠಾಣೆಯಾಗಿ ನಿಪ್ಪಾಣಿ ಗ್ರಾಮಾಂತರ ಪೊಲೀಸ್ ಠಾಣೆ ಆಯ್ಕೆ:

ಫೆ-14, ಬೆಂಗಳೂರು;ರಾಜ್ಯದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗ್ರಾಮಾಂತರ ಪೊಲೀಸ್ ಠಾಣೆಯು ಈ ವರ್ಷದ ದೇಶದ ಅತ್ಯುತ್ತಮ ಠಾಣೆಯೆಂಬ ಹೆಗ್ಗಳಿಗೆ ಪಾತ್ರವಾಗಿದೆ. ಪ್ರತಿ ವರ್ಷ Ministry of Home Affairs (ಗೃಹ ವ್ಯವಹಾರಗಳ ಸಚಿವಾಲಯ) ಆಯ್ಕೆ ಮಾಡುವ ಭಾರತದ 10 ಉತ್ತಮ ಪೊಲೀಸ್ ಠಾಣೆಗಳ ಪೈಕಿ ಈ ವರ್ಷ ನಿಪ್ಪಾಣಿ ಗ್ರಾಮಾಂತರ ಪೊಲೀಸ್ ಠಾಣೆಯು ಸ್ಥಾನ ಪಡೆದುಕೊಂಡಿದೆ.

ಈ ಬಗ್ಗೆ ಸಂತಸ ವ್ಯಕ್ತ ಪಡಿಸಿರುವ ನಿಪ್ಪಾಣಿ ಗ್ರಾಮಾಂತರ ಪೊಲೀಸ್ ಠಾಣೆಯ ದಕ್ಷ ಠಾಣಾಧಿಕಾರಿ ಪಿ.ಎಸ್.ಐ ಶ್ರೀ ಅನಿಲ್ ಕುಂಬಾರ್ ರವರು ತಮ್ಮ ಸಿಬ್ಬಂದಿಗಳು ಹಾಗೂ ತಮ್ಮ ಹಿರಿಯ ಅಧಿಕಾರಿಗಳಿಗೆ ಧನ್ಯವಾದಗಳನ್ನು ಹೇಳಿ ಶ್ಲಾಘಿಸಿದ್ದಾರೆ.ಕಳೆದ ವರ್ಷ ಕರ್ನಾಟಕದಿಂದ ರಾಯಾಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆಯು ಈ ಹೆಗ್ಗಳಿಗೆ ಪಾತ್ರವಾಗಿದ್ದು. ಪೊಲೀಸ್ ಠಾಣೆಗಳಲ್ಲಿ ಲಭ್ಯವಿರುವ ಸೇವೆಗಳು ಮತ್ತು ಸೌಲಭ್ಯಗಳ ವಿಷಯದಲ್ಲಿ ಪೊಲೀಸ್ ಠಾಣೆಗಳಿಗೆ ಶ್ರೇಯಾಂಕ ನೀಡಲು ಗೃಹ ವ್ಯವಹಾರಗಳ ಸಚಿವಾಲಯವು ವಾರ್ಷಿಕವಾಗಿ ಭಾರತದ ಟಾಪ್ 10 ಪೊಲೀಸ್ ಠಾಣೆಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಪೊಲೀಸ್ ಠಾಣೆಗಳ ಕಾರ್ಯಕ್ಷಮತೆ ಪರಿಶೀಲನೆಯನ್ನು ಬ್ಯೂರೋ ಆಫ್ ಪೊಲೀಸ್ ರಿಸಚ್ ಅಂಡ ಡೆವಲಪ್ ಮೆಂಟ್ (ಬಿ.ಪಿ.ಆರ್.ಡಿ) ನಡೆಸಿದೆ.

Related News

spot_img

Revenue Alerts

spot_img

News

spot_img