22.7 C
Bengaluru
Monday, December 23, 2024

NIA Raid:6 ರಾಜ್ಯಗಳು ಸೇರಿದಂತೆ 100 ಸ್ಥಳಗಳಲ್ಲಿ ಎನ್’ಐಎ ದಾಳಿ

ನವದೆಹಲಿ ಮೇ17: 6 ರಾಜ್ಯಗಳ 100 ಸ್ಥಳಗಳಲ್ಲಿ ಎನ್‌ಐಎ ಏಕಕಾಲದಲ್ಲಿ ದಾಳಿ ನಡೆಸಿದೆ.ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ರಾಜ್ಯದ ಹಲವು ಪ್ರದೇಶದಲ್ಲಿ ಈ ದಾಳಿ ನಡೆದಿದ್ದು,ಭಯೋತ್ಪಾದಕರು ಮತ್ತು ದರೋಡೆಕೋರರ ನಂಟಿನ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿದೆ.ಬುಧವಾರ ಬೆಳಗ್ಗೆಯಿಂದ ಶೋಧ ಕಾರ್ಯ ನಡೆಸುತ್ತಿದೆ.

 

NIA ತಂಡಗಳು ಇಂದು ಬೆಳಗ್ಗೆಯಿಂದ ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶದ ಕೆಲವು ಶಂಕಿತ ಮನೆಗಳ ಮೇಲೆ ದಾಳಿ ನಡೆಸಿವೆ. ಸುಮಾರು ಹನ್ನೆರಡು ಅಧಿಕಾರಿಗಳನ್ನು ಒಳಗೊಂಡ ಎನ್‌ಐಎ ಅಧಿಕಾರಿಗಳ ತಂಡವು ಈ ಎಲ್ಲಾ ಸ್ಥಳಗಳಿಗೆ ನಸುಕಿನ ಜಾವ 4 ಗಂಟೆ ಸುಮಾರಿಗೆ ತೆರಳಿದೆ.ಭಯೋತ್ಪಾದಕ ನಿಧಿಯ ಮೂಲಕ ಭಯೋತ್ಪಾದನೆಯನ್ನು ಹರಡಲು ಪ್ರಯತ್ನಿಸುತ್ತಿರುವ ಉಗ್ರರ ಅಡಗುತಾಣಗಳ ಮೇಲೆ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಗ್ಯಾಂಗ್ ಸ್ಟರ್’ಗಳು, ಮಾದಕ ವಸ್ತು ಸಾಗಣೆಯಲ್ಲಿ ತೊಡಗಿರುವವರು, ಉಗ್ರ ಚಟುವಟಿಕೆಗಳಲ್ಲಿ ತೊಡಿಸಿಕೊಂಡವರು ಹಾಗೂ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವರ ಮೇಲೆ ದಾಳಿ ಮಾಡಲಾಗಿದೆ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ.ಕಚೇರಿ, ನಿವಾಸಗಳ ಮೇಲೆ ದಾಳಿ ಮಾಡಲಾಗಿದ್ದು ಕೆಲವರನ್ನು ಬಂಧಿಸಲಾಗಿದೆ. ದಾಳಿ ಸಂದರ್ಭದಲ್ಲಿ ಸಿಕ್ಕ ದಾಖಲೆ ಪತ್ರಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಕೆಲವರ ಬಳಿ ಇದ್ದ ಸುಧಾರಿತ ಸ್ಪೋಟಕಗಳು, ಗನ್ ಗಳು ಸೇರಿದಂತೆ ಆರ್ ಡಿಎಕ್ಸ್ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.

 

Related News

spot_img

Revenue Alerts

spot_img

News

spot_img