25.8 C
Bengaluru
Friday, November 22, 2024

ಬೆಂಗಳೂರಿನಲ್ಲಿ NIA ರೇಡ್ : ದಾಳಿ ವೇಳೆ ಸ್ಫೋಟಕ ತಯಾರಿಗೆ ಬಳಸುವ ಸೋಡಿಯಂ‌ ನೈಟ್ರೇಟ್ ಪತ್ತೆ

#NIA Raid # Bengaluru #Sodium Nitrate # making explosives # found during # attack

ಬೆಂಗಳೂರು : ದೇಶಾದ್ಯಂತ 41 ಕಡೆ ಎನ್‌ಐಎ(NIA) ಅಧಿಕಾರಿಗಳು ದಾಳಿ ನಡೆಸಿದ್ದಾರೆ, ಉಗ್ರ ಚಟುವಟಿಕೆಯ ಬಗ್ಗೆ ಮಹತ್ವದ ಸುಳಿವು ಲಭಿಸಿದ ಕಾರಣ ಈ ದಾಳಿ ನಡೆದಿದ್ದು ಬೆಂಗಳೂರಿನಲ್ಲಿ 7 ಕೆಜಿ ಸೋಡಿಯಂ ನೈಟ್ರೇಟ್ ಪತ್ತೆಯಾಗಿದೆ. ಇದನ್ನು ಸ್ಫೋಟಕಗಳಲ್ಲಿ ಬಳಕೆ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಎಲ್‌ಎಲ್‌ಬಿ(LLB) ವ್ಯಾಸಂಗ ಮಾಡುತ್ತಿದ್ದ ಬಳ್ಳಾರಿ ಮೂಲದ ಶಮೀವುಲ್ಲಾ ಅವರ ಬಾಡಿಗೆ ಮನೆಯಲ್ಲಿ ಇದು ಪತ್ತೆಯಾಗಿದ್ದು ಅಫ್ಘಾನಿಸ್ತಾನಕ್ಕೆ ತೆರಳಿ ಕುಕೃತ್ಯ ನಡೆಸಲು ಸ್ಕೆಚ್‌ ಹಾಕಲಾಗಿತ್ತು ಎಂದು ವರದಿಯಾಗಿದೆ.ಬ್ಯಾಡರಹಳ್ಳಿಯ ಪ್ರಕೃತಿ ನಗರದ ಶಮಿಉಲ್ಲ ಮನೆಯಲ್ಲಿ ಪತ್ತೆಯಾಗಿದೆ ಸಂಪತ್ ಎಂಬುವವರ ಮನೆ ಬಾಡಿಗೆ ಪಡೆದು ಶ್ರಮಿವುಲ್ಲಾ ವಾಸವಾಗಿದ್ದ ಎಂದು ತಿಳಿದುಬಂದಿದೆ,ದಾಳಿ ವೇಳೆ ಶಮಿವುಲ್ಲಾ, ಸೂಫಿಯಾನ್ ಆಗಿ ಮತಾಂತರಗೊಂಡಿದ್ದ ನಿಖಿಲ್, ನಿಷೇಧಿತ ಪಿಎಫ್​ಐ ಬಳ್ಳಾರಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸುಲೇಮಾನ್, ಅಜಾಜ್ ಅಹ್ಮದ್, ತಬ್ರೇಜ್, ಮುಜಾಮಿಲ್ ಎಂಬುವರನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಅಫ್ಘಾನಿಸ್ತಾನಕ್ಕೆ ಹೋಗಿ ಕಾನೂನುಬಾಹಿರ ಚಟುವಟಿಕೆ ನಡೆಸಲು ಯತ್ನಿಸಿದ್ದಾರೆ ಎಂಬ ಅನುಮಾನದ ಮೇರೆಗೆ ಪಿಎಫ್‌ಐ ಮಾಜಿ ಪ್ರಧಾನ ಕಾರ್ಯದರ್ಶಿ ಸುಲೇಮಾನ್ ಮನೆಯಲ್ಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ.ಕರ್ನಾಟಕದ 11 ಸ್ಥಳಗಳು, ಜಾರ್ಖಂಡ್‌ನ 4, ಮಹಾರಾಷ್ಟ್ರದ 3 ಮತ್ತು ದೆಹಲಿಯ 1 ಸ್ಥಳಗಳಲ್ಲಿ ಅಧಿಕಾರಿಗಳ ತಂಡ ದಾಳಿ (NIA Raid) ನಡೆಸಿದೆ. ಕರ್ನಾಟಕದಲ್ಲಿ ಬೆಂಗಳೂರಿನ ಆರ್‌.ಸಿ ನಗರ, ಹೆಬ್ಬಾಳ, ಪುಲಿಕೇಶಿ ನಗರ, ಶಿವಾಜಿ ನಗರ, ಜೆ.ಸಿ. ನಗರದ ಚಿನ್ನಪ್ಪ ಗಾರ್ಡನ್ ಸೇರಿದಂತೆ ಹಲವು ಕಡೆ ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲಿಯೂ ಒಟ್ಟು 9 ತಂಡಗಳು ಕಾರ್ಯಾಚರಣೆ ನಡೆಸಿವೆ.

Related News

spot_img

Revenue Alerts

spot_img

News

spot_img