22.9 C
Bengaluru
Friday, July 5, 2024

ಹೊಸ ವರ್ಷವನ್ನು ಮಹಿಳೆಯರು ಉಳಿತಾಯದ ರೆಸಲ್ಯೂಷನ್ ಮೂಲಕ ಸ್ವಾಗತಿಸಿ..

ಬೆಂಗಳೂರು, ಡಿ. 29 : ಹೊಸ ವರ್ಷಕ್ಕೆ ಇನ್ನು ಮೂರೇ ದಿನ ಬಾಕಿ ಇದೆ. ಹೀಗಿರುವಾಗ ಹೊಸ ವರ್ಷದಲ್ಲಿ ಸಾಕಷ್ಟು ನಿಯಮಗಳು ಬದಲಾಗುತ್ತಿವೆ. ತಿಂಗಳ ಮೊದಲ ವಾರದಲ್ಲಿ ಬದಲಾಗುತ್ತಿರುವ ನಿಯಮಗಳ ಬಗ್ಗೆ ತಿಳಿದು ನಿಮ್ಮ ಹೊಸ ವರ್ಷಾಚರಣೇಐಣಣೂ ಪ್ಲಾನ್‌ ಮಾಡಿಕೊಳ್ಳಿ. ನಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮ ಬೀರುವ ಕೆಲವು ವಿಷಯಗಳ ಬಗ್ಗೆಯೂ ನಾವು ಕಾಳಜಿ ವಹಿಸಬೇಕು. ಹೊಸ ಕ್ಯಾಲೆಂಡರ್ ವರ್ಷದ ಪ್ರಾರಂಭ ಬಹಳಷ್ಟು ಬದಲಾವಣೆಗಳನ್ನು ತರುತ್ತಿದೆ. ಈ ಬದಲಾವಣೆಗಳಲ್ಲಿ ಬ್ಯಾಂಕ್ ಲಾಕರ್‌ಗಳು, ಕ್ರೆಡಿಟ್ ಕಾರ್ಡ್‌ಗಳು, GST, CNG-PNG ಬೆಲೆಗಳು ಕೂಡ ಸೇರಿವೆ. ಈ ಎಲ್ಲಾ ಬದಲಾವಣೆಗಳು ಜನವರಿ 1, 2023 ರಿಂದ ಜಾರಿಗೆ ಬರುತ್ತವೆ. ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಜನವರಿ 2023ರಿಂದ ಯಾವೆಲ್ಲಾ ನಿಯಮಗಳು ಬದಲಾಗುತ್ತಿವೆ ಎಂದು ತಿಯಿಳಿರಿ.

ಭಾಗಶಃ ಪಿಂಚಣಿ ನಿಧಿ ಹಿಂಪಡೆಯಬಹುದು:
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ NPS ಹಿಂಪಡೆಯುವಿಕೆಗೆ ಸಂಬಂಧಿಸಿದಂತೆ ಹೊಸ ಆದೇಶವನ್ನು ಹೊರಡಿಸಿದೆ. ಅದರ ಪ್ರಕಾರ ಎಲ್ಲಾ ಸರ್ಕಾರಿ ವಲಯದ ಗ್ರಾಹಕರು (ಕೇಂದ್ರ, ರಾಜ್ಯ ಮತ್ತು ಕೇಂದ್ರ ಸ್ವಾಯತ್ತ ಸಂಸ್ಥೆ) ಈಗ ತಮ್ಮ ಅರ್ಜಿಯನ್ನು ಭಾಗಶಃ ಹಿಂಪಡೆಯಬಹದು. ಕೋವಿಡ್-‌19 ಕಾರಣ ಈ ನಿಯಮವನ್ನು ಜಾರಿಗೆ ತಂದಿದ್ದು, ಹಣವು ನೇರವಾಗಿ ಚಂದಾದಾರರ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗುತ್ತದೆ. ಅರ್ಜಿಯನ್ನು ನೋಡಲ್ ಅಧಿಕಾರಿಗೆ ಮಾತ್ರ ಸಲ್ಲಿಸಬೇಕು.

ಬ್ಯಾಂಕ್ ಲಾಕರ್ :
ಗ್ರಾಹಕರಿಗೆ ನವೀಕರಿಸಿದ ಲಾಕರ್ ಒಪ್ಪಂದಗಳನ್ನು ಒದಗಿಸುವುದನ್ನು ಒಳಗೊಂಡಿರುವ ಬ್ಯಾಂಕ್ ಲಾಕರ್ ನಿಯಮಗಳನ್ನು ಆರ್‌ಬಿಐ ತಿದ್ದುಪಡಿ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಪರಿಷ್ಕೃತ ಸೂಚನೆಗಳ ಅಧಿಸೂಚನೆಯ ಪ್ರಕಾರ, ಬ್ಯಾಂಕ್‌ಗಳು ತಮ್ಮ ಲಾಕರ್ ಒಪ್ಪಂದಗಳಲ್ಲಿ ಯಾವುದೇ ಅನ್ಯಾಯದ ನಿಯಮಗಳು ಅಥವಾ ಷರತ್ತುಗಳನ್ನು ಅಳವಡಿಸಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ, ಒಪ್ಪಂದದ ನಿಯಮಗಳು ಬ್ಯಾಂಕಿನ ಹಿತಾಸಕ್ತಿಗಳನ್ನು ಕಾಪಾಡಲು ಸಾಮಾನ್ಯ ವ್ಯವಹಾರದಲ್ಲಿ ಅಗತ್ಯಕ್ಕಿಂತ ಹೆಚ್ಚು ಭಾರವಾಗಿರಬಾರದು. ಅಸ್ತಿತ್ವದಲ್ಲಿರುವ ಲಾಕರ್ ಗ್ರಾಹಕರೊಂದಿಗೆ ಬ್ಯಾಂಕುಗಳು ತಮ್ಮ ಲಾಕರ್ ಒಪ್ಪಂದಗಳನ್ನು ನವೀಕರಿಸುತ್ತಿವೆ.

ಭದ್ರತೆಯ ನೋಂದಣಿ :
ಮೋಟಾರು ವಾಹನಗಳ ಕಾಯಿದೆ ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳ ಪ್ರಕಾರ, ಎಲ್ಲಾ ವಾಹನಗಳಿಗೆ HSRP ಮತ್ತು ಬಣ್ಣ-ಕೋಡೆಡ್ ಸ್ಟಿಕ್ಕರ್‌ಗಳು ಕಡ್ಡಾಯವಾಗಿದೆ. ಜನವರಿ 1 ರಿಂದ ಎಚ್‌ಎಸ್‌ಆರ್‌ಪಿ ಮತ್ತು ಬಣ್ಣ-ಕೋಡೆಡ್ ಸ್ಟಿಕ್ಕರ್‌ಗಳಿಲ್ಲದೆ ಸಿಕ್ಕಿಬಿದ್ದ ಯಾವುದೇ ವಾಹನಕ್ಕೆ 5,000 ರೂ.ನಿಂದ 10,000 ರೂ.ವರೆಗೆ ಭಾರಿ ದಂಡ ವಿಧಿಸಲಾಗುತ್ತದೆ. ದ್ವಿಚಕ್ರ ವಾಹನಕ್ಕೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಬೆಲೆ 365 ರೂ.ಗೆ ನಿಗದಿ ಮಾಡಲಾಗಿದೆ. ನಾಲ್ಕು ಚಕ್ರದ ವಾಹನಗಳಿಗೆ 600 ರಿಂದ 1100 ರೂ. ಹಲವಾರು ರಾಜ್ಯಗಳಲ್ಲಿ, ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲು ಗಡುವು ಡಿಸೆಂಬರ್ 31, 2022 ನೀಡಲಾಗಿದೆ.

ಕ್ರೆಡಿಟ್ ಕಾರ್ಡ್ :
ಹೊಸ ವರ್ಷ 2023 ರಿಂದ, ಹಲವಾರು ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಪಾವತಿಗಳಿಗಾಗಿ ತಮ್ಮ ರಿವಾರ್ಡ್ ಪಾಯಿಂಟ್ ಯೋಜನೆಯನ್ನು ಬದಲಾಯಿಸುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ, ನೀವು ಡಿಸೆಂಬರ್ 31 ರೊಳಗೆ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಬೇಕು.

ಜಿಎಸ್ ಟಿ ಇನ್ ವಾಯ್ಸ್ :
ಜಿಎಸ್ ಟಿ ಇ-ಇನ್ ವಾಯ್ಸ್ ಗೆ ಸಂಬಂಧಿಸಿದಂತೆ ಜನವರಿ 1ರಿಂದ ಕೆಲವು ಬದಲಾವಣೆಗಳು ಆಗುವ ಸಾಧ್ಯತೆಯಿದೆ. ಇ-ಇನ್ ವಾಯ್ಸ್ ಸೃಷ್ಟಿಸುವ ಮಿತಿಯನ್ನು ಇಳಿಕೆ ಮಾಡಲಾಗಿದೆ. 20 ಕೋಟಿ ರೂ.ನಿಂದ 5 ಕೋಟಿ ರೂ.ಗೆ ಇಳಿಕೆಯಾಗಿದೆ. ಹೀಗಾಗಿ ಐದಕ್ಕಿಂತ ಹೆಚ್ಚಿನ ಉದ್ಯಮ ಹೊಂದಿರುವ ವ್ಯಕ್ತಿ ಜಿಎಸ್ ಟಿ ಪೋರ್ಟಲ್ ನಿಂದ ಇ-ಬಿಲ್ ಗಳನ್ನು ಸೃಷ್ಟಿಸಬೇಕು ಎಂದು ಹೇಳಲಾಗಿದೆ.

Related News

spot_img

Revenue Alerts

spot_img

News

spot_img