ಬೆಂಗಳೂರು, ಏ. 12 : ಪ್ರಸ್ತುತ ವರ್ಷದ ಕೇಂದ್ರ ಬಜೆಟ್ ನಲ್ಲಿ ಮಧ್ಯಮ ವರ್ಗದ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಆದಾಯ ತೆರಿಗೆ ಪದ್ಧತಿಯನ್ನು ಘೋಷಿಸಿದರು. 2020-21ರಲ್ಲಿ ಪರಿಚಯಿಸಿದ್ದ ಆದಾಯ ತೆರಿಗೆ ಪದ್ಧತಿಗೆ ಈಗ ಬದಲಾವಣೆಗಳನ್ನು ತರಲಾಗಿದೆ. ಇದು ದೇಶದ ಜನತೆ ಸುಲಭವಾಗಿ ಅನುಸರಿಸಲು ಅನುಕೂಲವಾಗಿವ ಹಾಗೆ ಸರಳೀಕೃತಗೊಳಿಸಲಾಗಿದೆ. ಇದು ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಈ ಬದಲಾವಣೆ ಸಹಾಯ ಮಾಡುತ್ತದೆ.
ಆದಾಯ ತೆರಿಗೆಯಲ್ಲಿ ಈ ಬಾರಿ ಕೇಂದ್ರ ಸರ್ಕಾರ 7ಲಕ್ಷ ದವರೆಗೆ ವಿಸ್ತರಿಸಿದೆ. ಕಷ್ಟಪಟ್ಟು ದುಡಿಯುವ ಮಧ್ಯಮ ವರ್ಗದವರಿಗೆ ಪ್ರತಿಫಲ ಸಿಗಲೆಂದು ಈ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿದೆ. ಈ ಮೂಲಕ 7 ಲಕ್ಷದವರೆಗೆ ವೈಯಕ್ತಿಕ ಆದಾಯ ಮಿತಿಯವರೆಗೆ ಯಾವುದೇ ತೆರಿಗೆಯನ್ನು ಕಟ್ಟುವಂತಿಲ್ಲ. ಹಳೆಯ ಮತ್ತು ಹೊಸ ಪದ್ಧತಿಯಲ್ಲಿ ತೆರಿಗೆ ಪಾವತಿಸುವ ಆಯ್ಕೆಗಳನ್ನು ನೀಡಲಾಗಿದೆ. ತೆರಿಗೆ ವಿನಾಯಿತಿ ಮಿತಿಯನ್ನು ಹಳೆ ತೆರಿಗೆ ಪದ್ದತಿಯಲ್ಲಿ ₹ 2.5 ಲಕ್ಷದಿಂದ ₹ 3 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಅದರಂತೆಯೇ ಹೊಸ ತೆರಿಗೆ ಪದ್ದತಿಯಲ್ಲಿ ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಆದರೆ, ಕೆಲವರು ಹಳೆಯ ಆದಾಯ ಪದ್ಧತಿಯನ್ನೇ ಅನುಸರಿಸುತ್ತಾರೆ. ಇನ್ನು ಕೆಲವರು ಹೊಸ ಆದಾಯ ತೆರಿಗೆ ಪ್ರಾರಂಭಿಸಲು ಮುಂದಾಗಿದ್ದಾರೆ. ಆದರೆ, ಈ ಎರಡೂ ಆದಾಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳದ ಉದ್ಯೋಗಿಗೆ ಡೀಫಾಲ್ಟ್ ಸಿಸ್ಟಮ್ ಆದ ಹೊಸ ತೆರಿಗೆ ವ್ಯವಸ್ಥೆಯನ್ನೇ ಜಾರಿಗೊಳಿಸಲಾಗುತ್ತದೆ. ಈ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 192 ಪ್ರಕಾರ ಟಿಡಿಎಸ್ ಮುರಿದುಕೊಳ್ಳಬೇಕು ಎಂದು ಸಿಬಿಡಿಟಿ ಅಧಿಸೂಚನೆ ಹೊರಡಿಸಿದೆ.
ಹೊಸ ಆದಾಯ ತೆರಿಗೆ ವ್ಯವಸ್ಥೆ ಪ್ರಕಾರ ಪ್ರತಿ ಉದ್ಯೋಗಿಯ ಸಂಬಳದಲ್ಲಿ ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ. ಹೀಗಾಗಿ, ಈ ತಿಂಗಳೇ ಉದ್ಯೋಗಿ ತನಗೆ ಯಾವ ತೆರಿಗೆ ಪದ್ಧತಿ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ತಮ್ಮ ಕಂಪನಿಯ ಫೈನಾನ್ಸ್ ವಿಭಾಗಕ್ಕೆ ಮಾಹಿತಿ ತಿಳಿಸಬೇಕು. ಅದರಲ್ಲೂ ಹಳೆಯ ತೆರಿಗೆ ಪದ್ಧತಿ ಬೇಕು ಎನ್ನುವವರು ಮುಂಚಿತವಾಗಿಯೇ ತಿಳಿಸಬೇಕು. ಇಲ್ಲದೇ ಹೋದಲ್ಲಿ ಡೀಫಾಲ್ಟ್ ಆಗಿ ಹೊಸ ತೆರಿಗೆ ವ್ಯವಸ್ಥೆ ಅನ್ವಯ ಆಗುವುದು ಪಕ್ಕಾ.
ಹೊಸ ಆದಾಯ ತೆರಿಗೆ ಪದ್ಧತಿ ಹಾಗೂ ಹಳೆಯ ತೆರಿಗೆ ವ್ಯವಸ್ಥೆ ಎರಡರಲ್ಲೂ ಬೆಸಿಕ್ ಟ್ಯಾಕ್ಸ್ ರಿಲ್ಯಾಕ್ಸೇಷನ್ ಎಂದು ಮಿತಿ 3 ಲಕ್ಷ ಇದೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ 7 ಲಕ್ಷ ರೂ ತೆರಿಗೆ ಆದಾಯದವರೆಗೂ ರಿಬೇಟ್ ಮೊತ್ತವನ್ನು ಹೆಚ್ಚಿಗೆ ಮಾಡಲಾಗಿದೆ. 50,000 ರೂಪಾಯಿ ಸ್ಟ್ಯಾಂಡರ್ಡ್ ಡಿಡಕ್ಷನ್ ಅವಕಾಶವನ್ನು ಕೂಡ ಕೊಡಲಾಗಿದೆ. ಅದೇ ರೀತಿ ಹಳೆಯ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಸೆಕ್ಷನ್ 80ಸಿ ಪ್ರಯೋಜನವಿದೆ. ವಿವಿಧ ಉಳಿತಾಯ ಯೋಜನೆಗಳ ಮೇಲೆ ನೀವು ಹೂಡಿಕೆ ಮಾಡುತ್ತಿರುವವರಾದರೆ ಹಳೆಯ ಆದಾಯ ಪದ್ಧತಿಯೇ ಸರಿ.