ಬೆಂಗಳೂರು, ಫೆ. 22 : ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಮಧ್ಯಮ ವರ್ಗದ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಆದಾಯ ತೆರಿಗೆ ಪದ್ಧತಿಯನ್ನು ಘೋಷಿಸಿದರು. 2020-21ರಲ್ಲಿ ಪರಿಚಯಿಸಿದ್ದ ಆದಾಯ ತೆರಿಗೆ ಪದ್ಧತಿಗೆ ಈಗ ಬದಲಾವಣೆಗಳನ್ನು ತರಲಾಗಿದೆ. ಇದು ದೇಶದ ಜನತೆ ಸುಲಭವಾಗಿ ಅನುಸರಿಸಲು ಅನುಕೂಲವಾಗಿವ ಹಾಗೆ ಸರಳೀಕೃತಗೊಳಿಸಲಾಗಿದೆ. ಇದು ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಈ ಬದಲಾವಣೆ ಸಹಾಯ ಮಾಡುತ್ತದೆ. ಆದಾಯ ತೆರಿಗೆಯಲ್ಲಿ ಈ ಬಾರಿ ಕೇಂದ್ರ ಸರ್ಕಾರ 7ಲಕ್ಷ ದವರೆಗೆ ವಿಸ್ತರಿಸಿದೆ. ಕಷ್ಟಪಟ್ಟು ದುಡಿಯುವ ಮಧ್ಯಮ ವರ್ಗದವರಿಗೆ ಪ್ರತಿಫಲ ಸಿಗಲೆಂದು ಈ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿದೆ.
ಈ ಮೂಲಕ 7 ಲಕ್ಷದವರೆಗೆ ವೈಯಕ್ತಿಕ ಆದಾಯ ಮಿತಿಯವರೆಗೆ ಯಾವುದೇ ತೆರಿಗೆಯನ್ನು ಕಟ್ಟುವಂತಿಲ್ಲ. ಹಳೆಯ ಮತ್ತು ಹೊಸ ಪದ್ಧತಿಯಲ್ಲಿ ತೆರಿಗೆ ಪಾವತಿಸುವ ಆಯ್ಕೆಗಳನ್ನು ನೀಡಲಾಗಿದೆ. ತೆರಿಗೆ ವಿನಾಯಿತಿ ಮಿತಿಯನ್ನು ಹಳೆ ತೆರಿಗೆ ಪದ್ದತಿಯಲ್ಲಿ ₹ 2.5 ಲಕ್ಷದಿಂದ ₹ 3 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಅದರಂತೆಯೇ ಹೊಸ ತೆರಿಗೆ ಪದ್ದತಿಯಲ್ಲಿ ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಆದರೆ, ಕೆಲವರು ಹಳೆಯ ಆದಾಯ ಪದ್ಧತಿಯನ್ನೇ ಅನುಸರಿಸುತ್ತಾರೆ. ಇನ್ನು ಹೊಸ ಆದಾಯ ತೆರಿಗೆ ಪ್ರಾರಂಭಿಸುವವರಿಗೆ ತೆರಿಗೆ ಲೆಕ್ಕ ಮಾಡುವುದು ಕಷ್ಟವಾಗಬಾರದು ಎಂದು ಸರ್ಕಾರವೇ ವೆಬ್ ಸೈಟ್ ನಲ್ಲಿ ಹೊಸ ತೆರಿಗೆ ಪದ್ಧತಿಯ ಕ್ಯಾಲ್ ಕ್ಯುಲೇಟರ್ ಅನ್ನು ನೀಡಿದೆ.
ಇದು ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ನಲ್ಲಿ ಇದ್ದು, ಈ ಕ್ಯಾಲ್ಕ್ಯುಲೇಟರ್ ಅನ್ನು ಬಳಸಿ ಹಳೆಯ ತರಿಗೆ ಅಥವಾ ಹೊಸ ತೆರಿಗೆ ವ್ಯವಸ್ಥೆ ಯಾವುದು ಬೇಕೋ ಅದನ್ನು ಆರಸಿಕೊಳ್ಳಬಹುದು. ಅದರ ಮೂಲಕ ನಿಮ್ಮ ವಾರ್ಷಿಕ ಆದಾಯ, ತೆರಿಗೆ ವಿನಾಯಿತಿಗಳನ್ನು ನಮೂದಿಸಿದರೆ, ಕ್ಯಾಲ್ಕುಲೇಟರ್ ಲೆಕ್ಕ ಮಾಡುತ್ತದೆ. ಆದರೆ, ಈ ಲೆಕ್ಕಾ ಪಕ್ಕಾ ಎಂದುಕೊಳ್ಳಬೇಡಿ, ಅಂದಾಜು ಲೆಕ್ಕ ಇದರಲ್ಲಿ ಸಿಗುತ್ತದೆ. ಈದನ್ನು ಬಳಸಿಕೊಂಡು ನೀವು ಎಷ್ಟು ಆದಾಯ ತೆರಿಗೆಯನ್ನು ಕಟ್ಟಬೇಕು ಎಂಬುದನ್ನು ತಿಳಿಯಬಹುದು.
ಹೊಸ ತೆರಿಗೆ ದರಗಳ ಪ್ರಕಾರ, 3 ಲಕ್ಷದವರಿಗೆ ಆದಾಯ ಬರುವವರು ಯಾವುದೇ ವೈಯಕ್ತಿಕ ತೆರಿಗೆ ಇಲ್ಲ. 3 ರಿಂದ 6 ಲಕ್ಷದವರಿಗೆ ಶೇ.5 ರಷ್ಟು ತೆರಿಗೆಯನ್ನು ಕಟ್ಟಬೇಕಾಗುತ್ತದೆ. 6 ರಿಂದ 9 ಲಕ್ಷದವರಿಗೆ ವಿಧಿಸಲಾಗುತ್ತದೆ. 12 ರಿಂದ 15 ಲಕ್ಷದವರಿಗೆ ಶೇ. 20 ರಷ್ಟು ತೆರಿಗೆ ವಿಧಿಸಲಾಗುತ್ತದೆ. 15 ಲಕ್ಷದಿಂದ ಮೇಲ್ಪಟ್ಟ ಮೊತ್ತಕ್ಕೆ ಶೇ.30 ರಷ್ಟು ತೆರಿಗೆಯನ್ನು ಕಟ್ಟಬೇಕು. ಹೊಸ ತೆರಿಗೆ ವ್ಯವಸ್ಥೆಯಲ್ಲಿ ಟ್ಯಾಕ್ಸ್ ರಿಬೇಟ್ ಮಿತಿಯನ್ನು 5 ಲಕ್ಷದಿಂದ 7 ಲಕ್ಷ ರೂಗೆ ಏರಿಸಲಾಗಿದೆ. ಇದರ ಜೊತೆಗೆ 50 ಸಾವಿರ ರೂನಷ್ಟು ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಇರುತ್ತದೆ.