21.1 C
Bengaluru
Monday, July 8, 2024

ಬೆಂಗಳೂರಿನಲ್ಲಿ ಹೊಸ ವರ್ಷ ಆಚರಿಸಲು ಹೊಸ ರೂಲ್ಸ್.

ಬೆಂಗಳೂರಿನಲ್ಲಿ ಪ್ರತಿವರ್ಷವೂ ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಈ ವರ್ಷವೂ ಸಹ ಬೆಂಗಳೂರಿನ ಜನಗಳಿಗೆ ಹೊಸವರ್ಷ ಆಚರಿಸುವ ಸಂದರ್ಭದಲ್ಲಿ ಯಾವೂದೇ ಅಹಿತಕರ ಘಟನೆಗಳು ಸಂಬವಿಸಬಾರದೆಂದು ಬಿಬಿಎಂಪಿ ರೂಲ್ಸ್ ಜಾರಿ ಮಾಡಿದೆ.

ಪ್ರತಿ ವರ್ಷವೂ ಸಹ ಬೆಂಗಳೂರಿನಲ್ಲಿ ಹೊಸ ವರ್ಷ ಆಚರಿಸುತಿದ್ದು ಕುಣಿದು , ಕುಡಿದು ಕುಪ್ಪಳಿಸುವ ವೇಳೆ ಹಲವು ಅಹಿತಕರ ಘಟನೆಗಳು ಸಂಭವಿಸಿವೆ. ಈ ವರ್ಷ ಸಹ ಮುಗಿಯುವುದಕ್ಕೆ ಕೆಲವು ದಿನಗಳು ಮಾತ್ರ ಉಳಿದು ಕೊಂಡಿದೆ. ಆದ್ದರಿಂದ ಪ್ರತಿ ವರ್ಷ ವರ್ಷದಂತೆ ಈ ವರ್ಷವೂ ಸಹ ಬೃಹತ್ ಬೆಂಗಳೂರು ಮಹಾನರ ಪಾಲಿಗೆ ಡಿ. ೩೧ ಕ್ಕೆ ಒಂದಷ್ಟು ರೂಲ್ಸ್ ಗಳನ್ನು ಜಾರಿಗೆ ತಂದಿದೆ.

* ಮಧ್ಯ ರಾತ್ರಿ ೧ ಗಂಟೆಗೆ ಹೊಸ ವರ್ಷದ ಸಂರ್ಭಮಾಚರಣೆಯನ್ನು ಮುಗಿಸಬೇಕು.
* ಇಂದಿರಾನಗರ, ಬ್ರಿಗೇಡ್ ರೋಡ್ , ಎಂಜಿ ರೋಡ್ ನಲ್ಲಿ ಮಾತ್ರ ಆಚರಣೆಗೆ ಅನುಮತಿ ನೀಡಲಾಗುವುದು.
* ಯಾವದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚರಿಕೆ ವಹಿಸಲು ೨೦೦ ಕ್ಕೂ ಹೆಚ್ಚು CCTV ಯನ್ನು ಅಡಳವಡಿಕೆ.
* ರಾತ್ರಿ ೮ ಗಂಟೆಯ ನಂತರ ಬ್ರಿಗೇಡ್ ರೋಡ್ ಹಾಗೂ ಎಂಜಿ ರೋಡ್ ರಸ್ತೆ ಸಂಪೂರ್ಣ ಕ್ಲೋಸ್.
* ರಾತ್ರಿ ೧೦ ಗಂಟೆಗಳ ನಂತರ ಪ್ರಮುಖ ಫ್ಲೈ ಓವರ್ ಬಂದ್.
* ಬ್ರಿಗೇಡ್ ರೋಡ್ ಹಾಗೂ ಎಂಜಿ ರೋಡ್ ನಲ್ಲಿ ಸೆಲೆಬ್ರೇಷನ್ ಗೆ ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.
* ಪಬ್, ಬಾರ್ ಗಳಿಗೂ ರಾತ್ರಿ 1 ಗಂಟೆ ಬಳಿಕ ಬಂದ್ ಗೆ ಸೂಚನೆ ನೀಡಿದೆ.
* ಲೌಡ್ ಸ್ಪೀಕರ್, ಪಟಾಕಿ ಸಿಡಿಸಲು ನಿರ್ಬಂಧ ಹೇರಲಾಗಿದೆ,
* ರಾತ್ರಿ 1 ಗಂಟೆ ತನಕ ನಮ್ಮ ಮೆಟ್ರೋ ಸಂಚಾರ ವ್ಯವಸ್ಥೆ ಇದೆ.
* BMTC ಹೆಚ್ಚುವರಿ ಬಸ್ ಸಂಚಾರ ವ್ಯವಸ್ಥೆ ಇರಲಿದೆ.

ಚೈತನ್ಯ, ‌ರೆವಿನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು

Related News

spot_img

Revenue Alerts

spot_img

News

spot_img