ನವದೆಹಲಿ : ವೈಯಕ್ತಿಕ ಸಾಲ(Personalloan) ಸೇರಿದಂತೆ ವಾಣಿಜ್ಯ ಬ್ಯಾಂಕ್‌ಗಳು ನೀಡುವ ಗ್ರಾಹಕ ಸಾಲಗಳ ಮೇಲಿನ ಋಣ ಭಾರವನ್ನು(Debt burden) ಆರ್‌ಬಿಐ(RBI) ಹೆಚ್ಚಿಸಿದೆ.ವೈಯಕ್ತಿಕ ಸಾಲ ಅನ್ನು(Personal loan) RBI ಭದ್ರತೆ ಇಲ್ಲದೆ ಸಾಲ ಅಂದರೆ Unsecured Loan ಎಂದು ಪರಿಗಣಿಸಿದೆ. ಈ ಕಾರಣಕ್ಕೆ ಬ್ಯಾಂಕುಗಳಿಗೆ ಇರುವ Risk Factor ಪ್ರಮಾಣವನ್ನು ಶೇ. 25 ರಿಂದ ಶೇ. 125 ಕ್ಕೆ ಏರಿಕೆ ಮಾಡಲಾಗಿದೆ. ಆದರೆ ಚಿನ್ನ ಮತ್ತು ಚಿನ್ನಾಭರಣದ ಮೇಲಿನ ರಿಸ್ಕ್ ಫ್ಯಾಕ್ಟಾರ್(Riskfactor) ಅನ್ನು ಶೇ.100 ರ ಹಾಗೆ ಮುಂದುವರೆಯಲಿದೆ. RBI ಹೊಸ ನಿಯಮ ಗೃಹ ಸಾಲ, ಶಿಕ್ಷಣ ಸಾಲ ಮತ್ತು ವಾಹನ ಸಾಲಕ್ಕೆ ಅನ್ವಯವಾಗುವುದಿಲ್ಲ. ಪರ್ಸನಲ್ ಲೋನ್(Personalloan) ಹೆಚ್ಚಿನ ಸುರಕ್ಷತೆಯನ್ನು ನೀಡದಿರುವ ಕಾರಣ RBI ಗ್ರಾಹಕರಿಗೆ ಹೊಸ ನಿಯಮವನ್ನು ಪರಿಚಯಿಸಿದೆ ಎನ್ನಬಹುದು.ಗೃಹ, ವ್ಯಾಸಂಗ, ಚಿನ್ನ ಮತ್ತು ವಾಹನ ಸಾಲಗಳನ್ನು ಇದರಿಂದ ಹೊರಗಿಡಲಾಗಿದೆ. ಅಸುರಕ್ಷಿತ ಸಾಲಗಳ ನಿಯಮಗಳನ್ನು ಆರ್‌ಬಿಐ(RBI) ಬಿಗಿಗೊಳಿಸುತ್ತಿರುವುದರಿಂದ ಸಾಲಗಳ ವಿತರಣೆಯನ್ನು ಬ್ಯಾಂಕ್‌ಗಳು(Bank) ಕಡಿಮೆ ಮಾಡಲು ಅವಕಾಶವಿದೆ. ಆದರೆ ಸಾಲ ಮಾಡ ಬಯಸುವವರಿಗೆ ಇದು ಕೆಟ್ಟ ಸುದ್ದಿಯೇ ಸರಿ.ಇಲ್ಲಿಯವರೆಗೆ, ಗ್ರಾಹಕ ಸಾಲವು ಶೇಕಡಾ 100 ರಷ್ಟು ಅಪಾಯದ ತೂಕವನ್ನ ಆಕರ್ಷಿಸಿತು, ಅದನ್ನು ಈಗ ಶೇಕಡಾ 125ಕ್ಕೆ ಪರಿಷ್ಕರಿಸಲಾಗಿದೆ.ಪರಿಶೀಲನೆಯ ನಂತರ, ವೈಯಕ್ತಿಕ ಸಾಲಗಳು(Personal loan) ಸೇರಿದಂತೆ ವಾಣಿಜ್ಯ ಬ್ಯಾಂಕುಗಳ (ಬಾಕಿ ಇರುವ ಮತ್ತು ಹೊಸ) ಗ್ರಾಹಕ ಸಾಲದ ಮಾನ್ಯತೆಗೆ ಸಂಬಂಧಿಸಿದಂತೆ ಅಪಾಯದ ತೂಕವನ್ನ ಹೆಚ್ಚಿಸಲು ನಿರ್ಧರಿಸಲಾಗಿದೆ.