22 C
Bengaluru
Monday, December 23, 2024

ಬ್ಯಾಂಕ್ ವ್ಯವಹಾರಕ್ಕೆ ಹೊಸ ನಿಯಮ ಜಾರಿಗೆ ಬರಲಿದೆ

ಬೆಂಗಳೂರು, ಆ. 02 : ಆಧಾರ್ ಕಾರ್ಡ್ ಬಂದಾಗ ಮೊದಲ ಬಾರಿಗೆ ಫಿಂಗರ್ ಪ್ರಿಂಟ್, ಮುಖ ಹಾಗೂ ಐರಿಸ್ ಸ್ಕ್ಯಾನ್ ಗೆ ಪರಿಚಯವಾದ್ವಿ. ಬಳಿಕ ಎಲ್ಲಾ ಸ್ಮಾರ್ಟ್ ಫೋನ್ ಗಳಲ್ಲೂ ಫಿಂಗರ್ ಪ್ರಿಂಟ್ ಹಾಗೂ ಮುಖದ ಸ್ಕ್ಯಾನ್ ಗೆ ಪರಿಚಯವಾಗಿ, ಎಲ್ಲರೂ ತಮ್ಮ ಮೊಬೈಲ್ ಗಳಲ್ಲಿ ಫಿಂಗರ್ ಪ್ರಿಂಟ್ ಹಾಗೂ ಮುಖದ ಸ್ಕ್ಯಾನ್ ಬಳಸಲು ಮುಂದಾದರು. ಆದರೆ ಇನ್ಮುಂದೆ ನಿಮ್ಮ ಹಣವನ್ನು ವಿತ್ ಡ್ರಾ ಮಾಡಲು ಕೂಡ ಮುಖ ಹಾಗೂ ಐರಿಸ್ ಸ್ಕ್ಯಾನ್ ಮಾಡಬೇಕಾಗಿ ಬರುತ್ತದೆ.

ಈ ಬಗ್ಗೆ ಈ ಹಿಂದೆಯೇ ಅಲ್ಲೊಂದು ಇಲ್ಲೊಂದು ಸುದ್ದಿ ಕೇಳಿದ್ದರಬಹುದು. ಆದರೆ ಈಗ ಭಾರತದಲ್ಲೇ ಇದರ ಪರಿಚಯವಾಗಿದೆ. ಈಗ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಸೇರಿದಂತೆ ಹಲವು ಬ್ಯಾಂಕಿಂಗ್ ವ್ಯವಹಾರಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ಇದನ್ನು ತಡೆಗಟ್ಟಲು ಸರ್ಕಾರ ಮುಂದಾಗಿದೆ. ಬ್ಯಾಂಕಿಂಗ್ ವ್ಯವಹಾರಗಳಿಗೂ ಮುಖ ಮತ್ತು ಐರಿಸ್ ಸ್ಕ್ಯಾನ್ ಬಳಸುವತ್ತ ಸಾಗಿವೆ. ಈ ಬಗ್ಗೆ ಕೇಂದ್ರ ಸರ್ಕಾರ ಅದಾಗಲೇ ಬ್ಯಾಂಕ್ ಗಳಿಗೆ ಮುಖ ಮತ್ತು ಐರಿಸ್ ಸ್ಕ್ಯಾನ್ ಮೂಲಕ ವಹಿವಾಟಿಗೆ ಮುಂದಾಗುವಂತೆ ಸೂಚಿಸಿದೆ.

ಸದ್ದಿಲ್ಲದೇ, ಬ್ಯಾಂಕ್ ಗಳಲ್ಲಿ ವಯಕ್ತಿಕ ವಹಿವಾಟಿಗೆ ಗ್ರಾಹಕರ ಫೇಸ್ ಮತ್ತು ಐರಿಸ್ ಸ್ಕ್ಯಾನ್ ಗೆ ಮುಂದಾಗಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.. ತೆರಿಗೆ ವಂಚನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮುಖ ಗುರುತಿಸುವಿಕೆ ಮತ್ತು ಐರಿಸ್ ಸ್ಕ್ಯಾನ್ ಬಳಸಿಕೊಂಡು ನಿರ್ದಿಷ್ಟ ವಾರ್ಷಿಕ ಮಿತಿಯನ್ನು ಮೀರಿದ ವೈಯಕ್ತಿಕ ವಹಿವಾಟುಗಳನ್ನು ಪರಿಶೀಲಿಸಲು ಭಾರತ ಸರ್ಕಾರ ಬ್ಯಾಂಕ್ಗಳಿಗೆ ಅವಕಾಶ ನೀಡುತ್ತಿದೆ. ಕೆಲವು ದೊಡ್ಡ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್ಗಳು ಈ ಆಯ್ಕೆಯನ್ನು ಬಳಸಲು ಪ್ರಾರಂಭಿಸಿವೆ.

ಮುಖ ಗುರುತಿಸುವಿಕೆ ಹಾಗೂ ಐರಿಸ್ ಸ್ಕ್ಯಾನ್ ಅನ್ನು ಕಡ್ಡಯಾಗೊಳಿಸಿಲ್ಲ. ಬದಲಿಗೆ ವಾರ್ಷಿಕವಾಗಿ 20 ಲಕ್ಷಕ್ಕಿಂತಲೂ ಹೆಚ್ಚಿನ ವಹಿವಾಟು ನಡೆಸುವ ಹಾಗೂ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಬ್ಯಾಂಕ್ ಜೊತೆಗೆ ಹಂಚಿಕೊಳ್ಳದ ವ್ಯಕ್ತಿಗಳಿಗೆ ಇದು ಅನ್ವಯವಾಗುತ್ತದೆ. ಒಂದು ಹಣಕಾಸು ವರ್ಷದಲ್ಲಿ ₹ 20 ಲಕ್ಷಕ್ಕಿಂತ ಹೆಚ್ಚು ಠೇವಣಿ ಮಾಡುವ ಮತ್ತು ಹಿಂಪಡೆಯುವ ವ್ಯಕ್ತಿಗಳ ಗುರುತನ್ನು ಪರಿಶೀಲಿಸಲು ಹೊಸ ಕ್ರಮಗಳನ್ನು ಬಳಸಬಹುದು.

ಆಧಾರ್ ಕಾರ್ಡ್ ವ್ಯಕ್ತಿಯ ಫಿಂಗರ್ಪ್ರಿಂಟ್ಗಳು, ಮುಖ ಮತ್ತು ಕಣ್ಣಿನ ಸ್ಕ್ಯಾನ್ಗೆ ವಿಶಿಷ್ಟವಾದ ಸಂಖ್ಯೆಯನ್ನು ಹೊಂದಿದೆ. ಡಿಸೆಂಬರ್ನಲ್ಲಿ ಹಣಕಾಸು ಸಚಿವಾಲಯವು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಪತ್ರದ ಮೇಲೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಬ್ಯಾಂಕ್ಗಳಿಗೆ ಮುಖ ಮತ್ತು ಐರಿಸ್ ಸ್ಕ್ಯಾನ್ ಗೆ ಸೂಚನೆ ನೀಡಿದೆ. ಬಹುಮುಖ್ಯವಾಗಿ ವ್ಯಕ್ತಿಯ ಫೂಂಗರ್ ಪ್ರಿಂಟ್ ಧೃಢೀಕರಣ ವಿಫಲವಾದರೆ, ಮುಖ ಹಾಗೂ ಐರಿಸ್ ಸ್ಕ್ಯಾನ್ ಮಾಡುವಂತೆ ತಿಳಿಸಿದೆ.

ಈಗಾಗಲೇ ಕೆಲ ಬ್ಯಾಂಕ್ ಗಳು ಮುಖ ಹಾಗೂ ಐರಿಸ್ ಸ್ಕ್ಯಾನ್ ಗೆ ಮುಂದಾಗಿವೆ. ಆದರೆ, ಅದು ಯಾವ ಬ್ಯಾಂಕ್ ಎಂಬ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ. ಆದರೆ, ಮುಖ ಹಾಗೂ ಐರಿಸ್ ಸ್ಕ್ಯಾನ್ ಗೆ ವ್ಯಕ್ತಿ ಒಪ್ಪದಿದ್ದರೆ, ಒತ್ತಾಯ ಹೇರಲು ಅಥವಾ ಕ್ರಮ ಕೈಗೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿಲ್ಲ. ಇನ್ನು ಐಆವ ಬ್ಯಾಂಕ್ ಗಳಲ್ಲಿ ಫೇಸ್ ಐಡಿ ಮತ್ತು ಐರಿಸ್ ಸ್ಕ್ಯಾನ್ ನಡೆಯುತ್ತಿದೆ ಎಂಬುದನ್ನು ಮುಂದೆ ತಿಳಿಯಬೇಕಿದೆ.

Related News

spot_img

Revenue Alerts

spot_img

News

spot_img