27.3 C
Bengaluru
Monday, July 1, 2024

ಇಂದಿರಾ ಕ್ಯಾಂಟೀನ್ ನಲ್ಲಿ ಹೊಸ ಮೆನು ಬಿಡುಗಡೆ: ಸಿಎಂ ಸಿದ್ದರಾಮಯ್ಯ

ಇಂದಿರಾ ಕ್ಯಾಂಟೀನ್ ನಲ್ಲಿ ವಿಶೇಷ ಊಟದ ಮೆನುವನ್ನು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ದಾರೆ.ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದಿನ ಅವಧಿಯಲ್ಲಿ ಬಡಜನರ ಹಸಿವು ನೀಗಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ನ್ನು ಜಾರಿಗೆ ತಂದಿತ್ತು. ಈಗಲು ಸಹ ಕಾಂಗ್ರೆಸ್ ರಾಜ್ಯ ಸರ್ಕಾರ ಈಗಲು ಸಹ ಮತ್ತಷ್ಟು ಶುಚಿ ಹಾಗು ರುಚಿಕರವಾದ ಹೊಸ ಬಗೆಯ ಆಹಾರದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧವಾಗಿದೆ.

ಕಡಿಮೆ ಬೆಲೆಯಲ್ಲಿ ರುಚಿಕರವಾದ ತಿಂಡಿ ಹಾಗು ಊಟ ದೊರೆಯುತ್ತದೆ. ಇಂದಿರಾ ಕ್ಯಾಂಟೀನ್ ನಿಮ್ಮ ಹೊಟ್ಟೆಯನ್ನು ತುಂಬಿಸಲು ನಾವು ಯೋಜನೆಯನ್ನು ಜಾರಿ ಮಾಡಿರುವುದು ಅದನ್ನು ಸಂಪೂರ್ಣವಾಗಿ ಸದುಪಯೋಗ ಮಾಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಮಾಡುವವರಿಗೆ ಮುದ್ದೆ ಭಾಗ್ಯ..!

ಸಿಲಿಕಾನ್ ಸಿಟಿಯಲ್ಲಿ 2017ರಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಯಿತು. ಇಂದಿರಾ ಕ್ಯಾಂಟೀನ್ ಆರಂಭದಿಂದಲೂ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ, ಚಪಾತಿ ನೀಡುವುದಕ್ಕೆ ಬೇಡಿಕೆ ಕೇಳಿ ಬರುತ್ತಿತ್ತು. ಇದೀಗ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಮಾಡುವವರಿಗೆ ಮುದ್ದೆ ಭಾಗ್ಯ ನೀಡುವುದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವೇ ಈಗ ಅನುಮತಿ ನೀಡಿದೆ.

ಸಕ್ಕರೆ ಕಾಯಿಲೆ ಇರುವವರಿಗೆ ಸಹಕಾರವಾಗುವ ಆಹಾರ..!

ಇಲ್ಲಿಯವರೆಗೂ ಕೂಡ ಮಧ್ಯಾಹ್ನ ಮತ್ತು ರಾತ್ರಿ ಅಥವಾ ಅನ್ನ, ಸಾಂಬರ್, ರೈಸ್‌ ಬಾತ್‌ ಹಾಗು ಮೊಸರನ್ನ ಮಾತ್ರ ವಿತರಣೆ ಮಾಡಲಾಗುತ್ತಿತ್ತು. ಹಿರಿಯ ನಾಗರಿಕರು ಸಕ್ಕರೆ ಕಾಯಿಲೆ ಇರುವವರು ಸೇರಿದಂತೆ ಮೊದಲಾದವರು ಕೇವಲ ರೈಸ್‌ ಪದಾರ್ಥದ ಊಟ ಬೇಡ ಎಂದು ಚಪಾತಿ ಹಾಗು ಮುದ್ದೆಯನ್ನು ನೀಡಿ ಎಂದು ಕೇಳುತ್ತಿದ್ದರು. ಇದು ರಾಜ್ಯ ಸರ್ಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯ ಗಮನಕ್ಕೆ ಬಂದಿತ್ತು. ಆದ್ದರಿಂದ ಹೊಸ ವರ್ಷದಿಂದ ಇಂದಿರಾ ಕ್ಯಾಂಟೀನ್‌ ನಲ್ಲಿ ಕಡ್ಡಾಯವಾಗಿ ಮುದ್ದೆ ಪೂರೈಕೆಗೆ ಸರ್ಕಾರ ತೀರ್ಮಾನಿಸಿದೆ.

ಇಂದಿರಾ ಕ್ಯಾಂಟೀನ್ ಗಳ ಬೆಳಿಗ್ಗೆಯ ಮೆನು..!

ಬೆಳಗ್ಗಿನ ತಿಂಡಿಗೆ ಅಂದರೆ ಬೆಳಿಗ್ಗೆ 7ರಿಂದ 10 ವರೆಗೆ ಇಡ್ಲಿ-ಸಾಂಬಾರ್, ಇಡ್ಲಿ-ಚಟ್ನಿ, ಬಿಸಿಬೇಳೆ ಬಾತ್-ಬೂಂದಿ, ಚೌಚೌಬಾತ್- ಚಟ್ನಿ, ವೆಜ್ ಪುಲಾವ್, ಖಾರಾಬಾತ್-ಚಟ್ನಿ, ಪೊಂಗಲ್-ಚಟ್ನಿ, ಬ್ರೆಡ್-ಜಾಮ್ ಮತ್ತು ಬನ್ಸ್, ಮಂಗಳೂರು ಬನ್ಸ್, ನೀಡಲಾಗುತ್ತಿದ್ದು, ಒಂದು ಪ್ಲೇಟ್ಗೆ 5 ರೂ, ನಿಗದಿ ಮಾಡಲಾಗಿದೆ.

ಮಧ್ಯಾಹ್ನದ ಮೆನು..!

ಮಧ್ಯಾಹ್ನದ ಊಟಕ್ಕೆ ಅಂದರೆ ಮಧ್ಯಾಹ್ನ 1ರಿಂದ 3 ರವರೆಗೆ ಅನ್ನ-ತರಕಾರಿ ಸಂಬಾರು, ಖೀರು, ಅನ್ನ-ತರಕಾರಿ ಸಾಂಬಾರು,ಅನ್ನ-ತರಕಾರಿ ಸಾಂಬಾರು, ರಾಗಿ ಮುದ್ದೆ-ಸೊಪ್ಪಿನ ಸಾರು, ಮೊಸರನ್ನ , ಖೀರು ಮತ್ತು ಚಪಾತಿ-ಸಾಗು, ಕೊಡಲಾಗುತ್ತಿದ್ದು ಪ್ಲೇಟ್ಗೆ 10 ರೂ, ನಿಗದಿ ಮಾಡಲಾಗಿದೆ.

ರಾತ್ರಿಯ ಮೆನು..!

ಇನ್ನೂ ರಾತ್ರಿ ಊಟದ ಮೆನು ನೋಡುವುದಾದರೆ ಸಂಜೆ 7:30 ರಿಂದ ರಾತ್ರಿ 9 ಅನ್ನ-ತರಕಾರಿ ಸಾಂಬಾರು, ಅನ್ನ-ತರಕಾರಿ ಸಾಂಬಾರು, ರಾಗಿ ಮುದ್ದೆ-ಸೊಪ್ಪಿನ ಸಾರು ಮತ್ತು ಚಪಾತಿ-ವೆಜ್ ಗ್ರೇವಿ ಇರುತ್ತದೆ. ದರ ಪ್ಲೇಟ್ಗೆ 10 ರೂ, ಬೆಲೆ ಇರಲಿದೆ. ವಿಶೇತೆ ಅಂದರೆ ರಾತ್ರಿ ಊಟಕ್ಕೆ ಮುದ್ದೆ ಇರಲಿದೆ. ಮುದ್ದೆ ನೀಡುವುದರಿಂದ ಇಂದಿರಾ ಕ್ಯಾಟೀಂನ್ ನ ಗ್ರಾಹಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು

Related News

spot_img

Revenue Alerts

spot_img

News

spot_img