21.1 C
Bengaluru
Tuesday, July 9, 2024

ಕಾರು ಖರೀದಿಸುವ ಮುನ್ನ ನೀವು ತಿಳಿಯಬೇಕಾದ ವಿಷಯಗಳಿವು..

ಬೆಂಗಳೂರು, ಡಿ. 31 : ಪ್ರತಿಯೊಬ್ಬರಿಗೂ ಸ್ವಂತ ಮನೆ, ಕಾರನ್ನು ಖರೀದಿಸುವ ಆಸೆ ಇದ್ದೇ ಇರುತ್ತದೆ. ಆದರೆ ಏನನ್ನೇ ಖರೀದಿಸುವ ಮುನ್ನ ಸಾಕಷ್ಟು ವಿಚಾರ ಮಾಡಬೇಕಾಗುತ್ತದೆ. ನಮಗೆ ಆ ವಸ್ತುವಿನ ಅಗತ್ಯವಿದೆಯಾ ಎಂಬುದನ್ನು ತಿಳಿಯಬೇಕಾಗುತ್ತದೆ. ಆಸೆಗಳಿಗೇನು ಎಲ್ಲೆ ಇಲ್ಲ. ಕನಸು ಕಂಡಷ್ಟೂ ದೂರ ಆಸೆಗಳ ಪಟ್ಟಿ ಏರುತ್ತಾ ಹೋಗುತ್ತದೆ. ಆದರೆ ಆಸೆಗಳಿಗೆ ನಾವೇ ಮಿತಿ ಹಾಕಿಕೊಳ್ಳಬೇಕು. ಇನ್ನು ಕೆಲವೊಮ್ಮೆ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಕಾಲವೂ ಹಣವನ್ನು ಕೂಡಿಡುತ್ತೀವಿ. ಕಾರು ಖರೀದಿಸಲು ಯೋಚನೆ ಇದ್ದರೆ ಅದಕ್ಕೂ ಮುನ್ನ ನೀವು ಗಮನಿಸಬೇಕಾದ ಕೆಲ ಅಂಶಗಳಿವೆ. ಅವುಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ.

 

ನಿಮ್ಮ ಬಜೆಟ್ ಗೆ ಅನುಗುಣವಾಗಿ ನಿಮ್ಮ ಅವಶ್ಯಕತೆಗಳ ಬಗ್ಗೆ ಪಟ್ಟಿ ಮಾಡಿ. ನಿಮಗೆ ಅವಶ್ಯಕತೆ ಇದೆ ಎಂದಾದರೆ ಯಾತಕ್ಕಾಗಿ ಕಾರು ಬೇಕು ಎಂಬುದನ್ನು ಅರಿತುಕೊಳ್ಳಿ. ನಿತ್ಯ ಬಳಕೆಗೆ ಬೇಕಾ. ನಿಮ್ಮ ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೆ. ಚಿಕ್ಕ ಕಾರು ಇದ್ದರೆ ಸಾಕಾ ಇಲ್ಲ 7 ಸೀಟರ್ ನ ಕಾರು ಅಗತ್ಯವೇ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಬಜೆಟ್ ಗೆ ಸರಿದೂಗುವಂತಹ ಕಾರನ್ನು ಖರೀದಿಸಿ. ಸುಮ್ಮನೆ ಆಸೆಯ ಬೆನ್ನೇರಿ ಸಮಸ್ಯೆಗಳನ್ನು ಎದುರಿಸಬೇಡಿ. ಕಾರು ಪಾರ್ಕಿಂಗ್ ಗೆ ಸ್ಥಳವಿದೆಯಾ. ದೂರದ ಪ್ರಯಾಣಕ್ಕೆ ಮಾತ್ರವೇ ಕಾರು ಬೇಕಾ ಎಂಬ ಬಗ್ಗೆ ಕೂಲಂಕುಶವಾಗಿ ಲೆಕ್ಕಾಚಾರ ಹಾಕಿ ನಿರ್ಧಾರ ಮಾಡಿ.

ಇನ್ನು ಮೊದಲು ಮನೆಯವರ ಬಳಿ ಕೂತು ಚರ್ಚೆ ಮಾಡಿ. ಕಾರಿನ ಮೈಲೇಜ್ ಬಗ್ಗೆಯೂ ಗಮನವಿಡಿ. ಯಾಕೆಂದರೆ ಈಗ ಪೆಟ್ರೋಲ್, ಡೀಸೆಲ್ ಬೆಲೆ ಕೈಗೆಟುಕುವಂತಿಲ್ಲ. ನೀವು ಬ್ಯಾಂಕ್ ನಲ್ಲಿ ಲೋನ್ ಪಡೆದು ಕಾರು ಖರಿದಿಸುವುದಾದರೆ, ಬಡ್ಡಿ ಎಷ್ಟಾಗುತ್ತದೆ. ಪ್ರತಿ ತಿಂಗಳ ಇಎಂಐ ಎಷ್ಟು ಬೀಳುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಯಾವ ಬ್ಯಾಂಕಿನಲ್ಲಿ ಬಡ್ಡಿ ದರ ಕಡಿಮೆ ಇದೆ ಎಂಬುದರ ಬಗ್ಗೆ ಮಾಹಿತಿ ಪಡೆಯಿರಿ. ಹೊಸ ಕಾರು ಖರೀದಿಸುವ ಹುಮ್ಮಸ್ಸಿನಲ್ಲಿ ನಿಮ್ಮ ಉಳಿತಾಯಕ್ಕೆ ತೊಂದರೆ ಮಾಡಿಕೊಳ್ಳಬೇಡಿ. ಹಣ ಉಳಿತಾಯಕ್ಕೆ ಕಡಿತ ಬಿದ್ದರೆ, ನಿಮ್ಮ ಕಷ್ಟದ ಸಮಯಕ್ಕೂ ತೊಂದರೆ ಎದುರಾಗುವ ಮುನ್ನ ಗಮನಿಸುವುದು ಸೂಕ್ತ.

ಕಾರಿನ ಸ್ಪೇರ್ ಪಾರ್ಟ್ಸ್, ಆಫ್ಟರ್ ಸೇಲ್ ಸರ್ವಿಸ್ ಬಗ್ಗೆ ಮಾಹಿತಿ ತಿಳಿಯಿರಿ. ನಂತರ ಯಾವ ಬೆಲೆಗೆ ಮಾರಾಟ ಮಾಡಬಹುದು ಎಂಬುದನ್ನು ತಿಳಿಯಿರಿ. ಕಾರಿನ ಸೇಫ್ಟಿ ಫೀಚರ್ಸ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಏರ್ ಬ್ಯಾಗ್, ಆಟೋ ಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಡಿಪಾರ್ಚರ್ ವಾರ್ನಿಂಗ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಟೆಸ್ಟ್ ಡ್ರೈವ್ ಮಾಡಿ ನೋಡಿ. ಹೈವೆಯಲ್ಲಿ, ಟ್ರಾಫಿಕ್ ನಲ್ಲಿ ಕಾರು ಹೇಗೆ ಚಲಿಸುತ್ತದೆ ಎಂದು ಗಮನಿಸಿ. ಇದರ ಜೊತೆಗೆ ನಿಮಗೆ ಅಗತ್ಯವಿರುವ ಫೀಚರ್ ಕಾರಿಸನಲ್ಲಿದೆಯಾ ಎಂದು ತಿಳಿಯಿರಿ. ಡಿಕ್ಕಿಯನ್ನು ಪರಿಶೀಲಿಸಿ. ಕಾರಿನ ಎಂಜಿನ್, ಮೋಟಾರ್, ಡೈಮೆನ್ಶನ್ ಟ್ರಾನ್ಸ್ ಮಿಶನ್ ಬಗ್ಗೆ ಗಮನವಿಡಿ.

ಕಾರಿನಲ್ಲಿ ಲೈಟ್ಸ್, ಎಸಿ, ಪವರ್ ವಿಂಡೋಸ್, ಎಕ್ಸ್ ಟೇರಿಯರ್, ಇಂಧನ ಕ್ಷಮತೆಗಳ ಬಗ್ಗೆ ತಿಳಿದುಕೊಳ್ಳಿ. ಇನ್ನು ಕಾರಿನ ಹೆಚ್ಚಿನ ಮಾಹಿತಿಗಾಗಿ ಒಂದಷ್ಟು ವೆಬ್ ಸೈಟ್ ಗಳಿವೆ ಅದಕ್ಕೆ ಭೇಟಿ ಕೊಟ್ಟು ಲೆಕ್ಕಚಾರ ಮಾಡಿ. ಯಾವ ಕಾರು ನಿಮಗೆ ನಿಮ್ಮ ಮನೆಯ ಸದಸ್ಯರಿಗೆ ಒಪ್ಪುವಂತಹ ಕಾರನ್ನು ಖರೀದಿಸಿ. ಇದೆಲ್ಲದಕ್ಕಿಂತಲೂ ಹೆಚ್ಚು ಕಾರನ್ನು ಖರೀದಿಸಿದ ಬಳಿಕ ಅದರ ಮುಂದಿನ ನಿರ್ವಹಣೆಯ ಬಗ್ಗೆಯೂ ಮುಂದಾಲೋಚನೆ ಇರುವುದು ಸೂಕ್ತ. ಎಲ್ಲಾ ಮಾಹಿತಿ ಪಡೆದು, ಆಸೆಯನ್ನು ನೆರವೇರಿಸಿಕೊಳ್ಳಿ.

Related News

spot_img

Revenue Alerts

spot_img

News

spot_img