#Narendra Modi, #most successful #Prime Minister # India’s history#Mukesh Ambani
ನವದೆಹಲಿ;ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ 2024 ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, ಭಾರತದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಪ್ರಧಾನ ಮಂತ್ರಿಯಾಗಿ ಮತ್ತು ಗುಜರಾತ್ ಅನ್ನು ನವ ಭಾರತದ ಮುಖವನ್ನಾಗಿ ಪರಿವರ್ತಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. “ನಮ್ಮ ಪ್ರೀತಿಯ ನಾಯಕ ನಮ್ಮ ಕಾಲದ ಶ್ರೇಷ್ಠ ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ” ಎಂದು ಮುಖೇಶ್ ಅಂಬಾನಿ ಹೇಳಿದರು. ಈ ಶೃಂಗ ಸಭೆಯು 20 ವರ್ಷಗಳಿಂದ ನಡೆಯುತ್ತಿರುವುದಕ್ಕೆ ಅವರೇ ಪ್ರಮುಖ ಕಾರಣ ಎಂದಿದ್ದಾರೆ. ನಮ್ಮ ದೇಶ 2047ರ ಒಳಗಾಗಿ 35 ಟ್ರಿಲಿಯನ್ ಡಾಲರ್(trillion dollars)ಆರ್ಥಿಕತೆಯಾಗಲಿದೆ ಎಂದು ಹೇಳಿದ್ದಾರೆ. ಗುಜರಾತ್ ಪರಿವರ್ತೆನೆಯಲ್ಲಿ ಅವರ ಪಾತ್ರ ಬಹಳ ಇದೆ ಎಂದು ಅಂಬಾನಿ ಹೇಳಿದ್ದಾರೆ. ಜಗತ್ತಿನ ಯಾವ ಶಕ್ತಿಯೂ ಇದನ್ನು ನಿಲ್ಲಿಸಲು ಆಗುವುದಿಲ್ಲ. ರಿಲಯನ್ಸ್ ಗುಜರಾತಿ ಕಂಪನಿಯಾಗಿಯೇ ಉಳಿದುಕೊಂಡಿದೆ ಮತ್ತು ಮುಂದೆಯೂ ಯಾವಾಗಲೂ ಗುಜರಾತಿ ಕಂಪೆನಿಯಾಗಿಯೇ ಉಳಿಯುತ್ತದೆ.ನಮ್ಮ ಕಾಲದ ಶ್ರೇಷ್ಠ ಜಾಗತಿಕ ನಾಯಕರಾಗಿ ಹೊರಹೊಮ್ಮಿದವರು ಪ್ರಧಾನಿ ಮೋದಿ.ಭಾರತದಲ್ಲಿ ತನ್ನ ಕಂಪನಿಯ 150 ಬಿಲಿಯನ್ ಡಾಲರ್ ಹೂಡಿಕೆಯ ಮೂರನೇ ಒಂದು ಭಾಗ ಗುಜರಾತ್‌ನಲ್ಲಿ ನಡೆದಿದೆ ಎಂದು ಅಂಬಾನಿ ಹೇಳಿದ್ದಾರೆ.ರಿಲಯನ್ಸ್ ಗುಜರಾತಿ ಕಂಪನಿಯಾಗಿಯೇ ಉಳಿದಿದೆ ಮತ್ತು ಯಾವಾಗಲೂ ಇರುತ್ತದೆ. ರಿಲಯನ್ಸ್ ಕಳೆದ 10 ವರ್ಷಗಳಲ್ಲಿ ಭಾರತದಾದ್ಯಂತ ವಿಶ್ವದರ್ಜೆಯ ಆಸ್ತಿ ಮತ್ತು ಸಾಮರ್ಥ್ಯಗಳನ್ನು ಸೃಷ್ಟಿಸಲು 150 ಶತಕೋಟಿ ಡಾಲರ್ ₹ 12 ಲಕ್ಷ ಕೋಟಿಗಳನ್ನು ಹೂಡಿಕೆ ಮಾಡಿದೆ, ಅದರಲ್ಲಿ 1/ ಕ್ಕಿಂತ ಹೆಚ್ಚು 3ನೆಯದನ್ನು ಗುಜರಾತ್‌ನಲ್ಲಿ ಮಾತ್ರ ಹೂಡಿಕೆ ಮಾಡಲಾಗಿದೆ, ಎಂದು ಅವರು ಹೇಳಿದರು.