21.1 C
Bengaluru
Monday, December 23, 2024

ನಾಡಪ್ರಭು ಕೆಂಪೇಗೌಡ ಅವರ ಸಂಸ್ಮರಣೆಗಾಗಿ ಇಂದು ಮತ್ತು ನಾಳೆ ನಮ್ಮ ಬೆಂಗಳೂರು ಹಬ್ಬ 2023

ಬೆಂಗಳೂರುಮಾ. 25 : : ಕರ್ನಾಟಕ ಸಂಸ್ಕೃತಿ ಇತಿಹಾಸ ಹಾಗೂ ಪರಂಪರೆಗಳನ್ನು ಬೆಂಗಳೂರಿನಲ್ಲಿ ನೆಲೆಸಿರುವ ಇತರೆ ಭಾಷಿಕರನ್ನು ಒಳಗೊಂಡಂತೆ ನಾಡಿನ ಜನರಿಗೆ ಪರಿಚಯಿಸುವ ದೃಷ್ಟಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಉದ್ಯಾನನಗರಿ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ನಮ್ಮ ಬೆಂಗಳೂರು ಹಬ್ಬ ನಡೆಯಲಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಮ್ಮ ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಈ ಬಾರಿ ಸರಳವಾಗಿ ನಮ್ಮ ಬೆಂಗಳೂರು ಹಬ್ಬ ಆಚರಿಸಲಾಗುತ್ತದೆ.

ಮುಂದಿನ ವರ್ಷ ಮೈಸೂರು ದಸರಾದಂತೆ ವೈಭವವಾಗಿ ಬೆಂಗಳೂರು ಹಬ್ಬ ಆಚರಿಸಲಾಗುವುದು ಎಂದು ಸಚಿವ ಆರ್‌ ಅಶೋಕ್‌ ಹೇಳಿದ್ದಾರೆ.ಕಾರ್ಯಕ್ರಮವು ಕಬ್ಬನ್​ ಪಾರ್ಕ್​ ಮತ್ತು ವಿಧಾನಸೌಧ ಸುತ್ತ ಮುತ್ತ ನಡೆಯಲಿದೆ. ಈ ಹಬ್ಬದಲ್ಲಿ ನಾಟಕ, ಕಲೆ, ಸಾಂಪ್ರದಾಯಿಕ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.ಹಬ್ಬಕ್ಕಾಗಿ ಸಾವಿರಾರು ಜನರು ಬರುವ ನಿರೀಕ್ಷೆ ಇದ್ದು ಅದಕ್ಕೆ ತಕ್ಕಂತೆ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದ ವೇದಿಕೆಯಲ್ಲಿ ದಿನಾಂಕ:25.032023 ರಂದು ಸಂಜೆ 06.00 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ನಂತರ ಅನನ್ಯ ಭಟ್, ನವೀನ್ ಸಜ್ಜು, ಜನಾರ್ಧನ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಮಾರ್ಚ್ 26 ರಂದು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ,

ಕಬ್ಬನ್ ಪಾರ್ಕ್‌ನ ಆವರಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು:-

*ಚಿತ್ರಸಂತೆಯ ಮಾದರಿಯಲ್ಲಿ ಕಬ್ಬನ್ ಪಾರ್ಕ್ ನ ಒಂದಿಡೀ ರಸ್ತೆಯಲ್ಲಿ ವೈವಿಧ್ಯಮಯ ಚಿತ್ರಕಲೆಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಮತ್ತು ಮಾರಾಟ ಹಾಗೂ ಶಿಲ್ಪಕಲಾ ಉತ್ಸವದಡಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವತಿಯಿಂದ ಜೇಡಿಮಣ್ಣು/ಶಿಲೆ/ ಶಿಲ್ಪಗಳ  ಪ್ರದರ್ಶನ ಮತ್ತು ಮಾರಾಟಗಳನ್ನು ಏರ್ಪಡಿಸಲಾಗಿದೆ. ವಿವಿಧ ಇಲಾಖೆಗಳು, ಅಕಾಡೆಮಿಗಳು, ವಿವಿಧ ಸಂಘಟನೆಗಳ ವತಿಯಿಂದ ಕರಕುಶಲ ವಸ್ತುಗಳ ಮೇಳವನ್ನೂ ಆಯೋಜಿಸಲಾಗಿದೆ.

*ಬಾಲಭವನ ಆವರಣದ ಆಂಪಿಕ್ ಥಿಯೇಟರ್ ವಿವಿಧ ಅಕಾಡೆಮಿಗಳು, ರಂಗ ಶಂಕರ ಮತ್ತು ನೀನಾಸಂ ಸಂಸ್ಥೆಗಳ ಸಹಯೋಗದಲ್ಲಿ ನಾಟಕ, ಬೀದಿ ನಾಟಕಗಳು, ಗೊಂಬೆ ಪ್ರದರ್ಶನ, ಯಕ್ಷಗಾನ, ಗಾಯನ, ನೃತ್ಯ ಕಾರ್ಯಕ್ರಮಗಳನ್ನು ಬಾಲಭವನ ಆವರಣದ ಅಂಪೀಕ್ ಥಿಯೇಟರ್‌ನಲ್ಲಿ ಆಯೋಜಿಸಲಾಗಿದೆ.

*ಬೆಂಗಳೂರು ಹಬ್ಬದ ಅಂಗವಾಗಿ ದಿನಾಂಕ:25.03.2023 ಮತ್ತು 26.03.2023ರಂದು ಬೆಂಗಳೂರಿನ ಆಯ್ದ ಸಿನಿಮಾ ಮಂದಿರಗಳಲ್ಲಿ ಬೆಳಗಿನ ಆಟದಲ್ಲಿ ಹಳೆಯ ಕನ್ನಡ ಸಿನಿಮಾಗಳ ಉಚಿತ ವೀಕ್ಷಣೆಗೆ ಅವಕಾಶ ಮಾಡಲಾಗಿದೆ.

*ಬಾಲಭವನ ಸಭಾಂಗಣದಲ್ಲಿ ದಿನಾಂಕ:24.03.2023 ರಿಂದ 26.03.2023ರವರೆಗೆ ಪ್ರತಿದಿನ 3 ಪ್ರದರ್ಶನಗಳ ಮಕ್ಕಳ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ.

 

*ವಿಧಾನಸೌಧದ ಮುಂಭಾಗದಲ್ಲಿ ನಿರ್ಮಾಣಗೊಂಡಿರುವ ನಾಡಪ್ರಭು ಕೆಂಪೇಗೌಡ ಮತ್ತು ಜಗಜ್ಯೋತಿ ಬಸವೇಶ್ವರ ಅವರ ಪ್ರತಿಮೆಯನ್ನು ಮಾರ್ಚ್​ 26ರಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಲೋಕಾರ್ಪಣೆಗೊಳಿಸಲಿದ್ದಾರೆ.

*ಮಾರ್ಚ್ 26 ರಂದು ಕೆಂಪೇಗೌಡ ಮತ್ತು ಬಸವೇಶ್ವರರ ಪ್ರತಿಮೆಗಳನ್ನು ಉತ್ಸವದ ಸಮಯದಲ್ಲಿ ಅನಾವರಣಗೊಳಿಸಲಾಗುವುದು ಎಂದು ತಿಳಿಸಿರುವ ಅಶೋಕ್, ಬೆಂಗಳೂರಿನ ಸಂಸ್ಕೃತಿ ಮತ್ತು ಪರಿವರ್ತನೆಯನ್ನು ಪ್ರದರ್ಶಿಸುವುದು ಉತ್ಸವದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

 

Related News

spot_img

Revenue Alerts

spot_img

News

spot_img