21.5 C
Bengaluru
Monday, December 23, 2024

ಬೆಂಗಳೂರು ನಗರದ ವಿವಿಧೆಡೆ 3, 000 ಕ್ಕೂ ಹೆಚ್ಚುಉಚಿತ ವೈಫೈ ವಲಯ

#More than #3000 #free wifi #Bangalore

ಬೆಂಗಳೂರು;ಬೆಂಗಳೂರಿನ ಜನತೆಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು,ಟೆಕ್ ಕ್ಯಾಪಿಟಲ್ ಬೆಂಗಳೂರಿನಲ್ಲಿ 3, 000 ಕ್ಕೂ ಹೆಚ್ಚು ಉಚಿತ ವೈ-ಫೈ ವಲಯಗಳನ್ನು ನಿರ್ಮಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಈ ಯೋಜನೆಯನ್ನು ರಾಜ್ಯದ ಇತರ ಭಾಗಗಳಿಗೆ ವಿಸ್ತರಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭಾನುವಾರ ಭೇಟಿಯಾಗಿ ಉಚಿತ ವೈ-ಫೈ ಯೋಜನೆ ಕುರಿತು ಚರ್ಚೆ ನಡೆಸಿದ್ದಾರೆ.ಸಭೆ ಬಳಿಕ ಪ್ರಿಯಾಂಕ್ ಖರ್ಗೆ ಜತೆ ನಮ್ಮ ಪಕ್ಷದ ಪ್ರಣಾಳಿಕೆ ಹಾಗೂ ಇತರೆ ವಿಚಾರವಾಗಿ ಚರ್ಚೆ ಮಾಡಿದ್ದೇನೆ.

ಬೆಂಗಳೂರಿನ ವಿವಿಧ ಕಡೆಗಳಲ್ಲಿ ಉಚಿತ ವೈಫೈ ವಲಯ ಸ್ಥಾಪನೆ ಹಾಗೂ ಎನ್‌ಆರ್‌ಐ ವಿಚಾರ ಸಭೆಯ ದಿನಾಂಕ ಪ್ರಕಟಿಸುತ್ತೇವೆ ಎಂದು ತಿಳಿಸಿದರು.ಈಗಾಗಲೇ ಬ್ರಾಡ್ಬ್ಯಾಂಡ್ ಪೂರೈಕೆದಾರರು ಮತ್ತು ಟೆಲಿಕಾಂ ಕಂಪನಿಗಳೊಂದಿಗೆ ಸಂಪರ್ಕಿಸಲು ಮತ್ತು ಚರ್ಚಿಸಲು ಚಿಂತನೆ ನಡೆಸುತ್ತಿದೆ. ಈ ಯೋಜನೆಯಡಿ ಬಳಕೆದಾರರಿಗೆ ಡೇಟಾ ಮಿತಿ 50 MB ನೀಡಲಾಗಿದೆ.ಸರ್ಕಾರಕ್ಕೆ ಯೋಜನೆಯ ವೆಚ್ಚ ಬಹುತೇಕ ಶೂನ್ಯವಾಗಿರುತ್ತದೆ. ವರದಿಗಳ ಪ್ರಕಾರ ಬೆಂಗಳೂರಿಗೆ ಕನಿಷ್ಠ 3,000 ವೈ-ಫೈ ಸ್ಪಾಟ್‌ಗಳ ಅಗತ್ಯವಿದೆ. ಈ ಯೋಜನೆಯನ್ನು ಮೊದಲು ಮಾರುಕಟ್ಟೆ, ಮೆಟ್ರೋ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಂತಹ ಹೆಚ್ಚು ಜನರಿರುವ ಪ್ರದೇಶಗಳಲ್ಲಿ ಪರಿಚಯಿಸಲಾಗುತ್ತದೆ,ಈ ಯೋಜನೆಯನ್ನು ಈಗಾಗಲೇ MG ರಸ್ತೆಯಲ್ಲಿ ಪ್ರಾರಂಭಿಸಲಾಗಿದೆ. ಡೌನ್‌ಲೋಡ್ ಮಾಡಬಹುದಾದ ಡೇಟಾ ಮಿತಿ 50 MB ನೀಡಲಾಗಿದೆ. ಬಳಕೆದಾರರಿಗೆ ಮೂರು ಗಂಟೆಗಳ ಉಚಿತ ಬ್ರೌಸಿಂಗ್ ಅನ್ನು ನೀಡಲಾಗಿದೆ.

Related News

spot_img

Revenue Alerts

spot_img

News

spot_img