ನವದೆಹಲಿ, ಆಗಸ್ಟ್ 29: ದೇಶದ ಗೃಹಿಣಿಯರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.ಎಲ್ ಪಿ ಜಿ ಸಿಲಿಂಡರ್ ಗಳ ಬೆಲೆಯನ್ನು 200 ರೂ.ಗಳಷ್ಟು ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ 24 ಗಂಟೆಗಳಲ್ಲಿ ಕೇಂದ್ರವು ಬೆಲೆ ಕಡಿತವನ್ನು ಘೋಷಿಸಬಹುದು ಎಂದು ಮೂಲಗಳು ತಿಳಿಸಿವೆ.ಸದ್ಯ 14 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 1,100 ರೂ ಇದೆ.ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಿರುವುದರಿಂದ ಮಧ್ಯಮ ವರ್ಗದವರಿಗೆ ಇದು ಒಳ್ಳೆಯ ಸುದ್ದಿಯಾಗಿದೆ.ಎಲ್ಪಿಜಿ ಬೆಲೆ ಕಡಿತವು ಜನರಿಗೆ ದೊಡ್ಡ ಪರಿಹಾರವನ್ನು ನೀಡುತ್ತದೆ.ಆಗಸ್ಟ್ 30 ರಿಂದ 200 ರೂಪಾಯಿ ಇಳಿಕೆಯಾಗಲಿದ್ದು, ಕೇಂದ್ರ ಕ್ಯಾಬಿನೆಟ್ ಸಿಲಿಂಡರ್ ಇಳಿಕೆಗೆ ಅನುಮತಿ ನೀಡಿದೆ. ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಸಿಎನ್‌ಬಿಸಿಟಿ ವರದಿ ಪ್ರಕಾರ ಅಡುಗೆ ಅನಿಲ ಬೆಲೆಯಲ್ಲಿ 200 ರೂಪಾಯಿ ಇಳಿಕೆಯಾಗಲಿದೆ ಎಂದು ಇಂಡಿಯಾ ಟಿವಿ ನ್ಯೂಸ್ ವರದಿ ಮಾಡಿದೆ.ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆ ಕರ್ನಾಟಕದಲ್ಲಿ 1,105.50 ರೂಪಾಯಿ ಇದ್ದರೆ, ದೆಹಲಿಯಲ್ಲಿ 1053, ಮುಂಬೈನಲ್ಲಿ 1052.50 ರೂಪಾಯಿ, ಚೆನ್ನೈನಲ್ಲಿ 1079 ರೂಪಾಯಿ ದರವಿದೆ. ಈ ಬೆಲೆಯಲ್ಲಿ 200 ರೂಪಾಯಿ ಕಡಿತಗೊಳ್ಳಲಿದೆ.ಸಾಮಾನ್ಯವಾಗಿ ಅಡುಗೆ ಅನಿಲ ಹಾಗೂ ವಾಣಿಜ್ಯ ಗ್ಯಾಸ್ ಬೆಲೆ ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಣೆಗೊಳ್ಳಲಿದೆ. ನಾಳೆಯಿಂದಲೇ ಹೊಸ ದರ ಜಾರಿಯಾಗುವ ಸಾಧ್ಯತೆ ಇದೆ.