26.3 C
Bengaluru
Thursday, April 24, 2025

ಪಿಎಂ ಮಿತ್ರ ಯೋಜನೆಯಡಿ ಕರ್ನಾಟಕ ಸೇರಿದಂತೆ 7 ರಾಜ್ಯದಲ್ಲಿ ಮೆಗಾ ಜವಳಿ ಪಾರ್ಕ್‌; ಮೋದಿ ಘೋಷಣೆ

ಬೆಂಗಳೂರು;ಮಾ18;Mega Textile Park ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಪಿಎಂ ಮಿತ್ರ ಮೆಗಾ ಟೆಕ್ಸ್​ಟೈಲ್ ಪಾರ್ಕ್​ಗಳು ಸ್ಥಾಪನೆ ಆಗಲಿವೆ.ಕೇಂದ್ರ ಸರ್ಕಾರ ವಿವಿಧೆಡೆ 7 ಬೃಹತ್ ಜವಳಿ ಪಾರ್ಕ್​ಗಳನ್ನು ಸ್ಥಾಪಿಸುತ್ತಿದೆ. ಇದರ ಒಂದು ಪಾರ್ಕ್ ಕರ್ನಾಟಕಕ್ಕೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 17, ಶುಕ್ರವಾರ ಜವಳಿ ಪಾರ್ಕ್ ಸ್ಥಾಪನೆಯಾಗುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಈ 7 ಮಹಾ ಜವಳಿ ಕೇಂದ್ರಗಳು ತಲೆ ಎತ್ತಲಿವೆ.5ಎಫ್ (ಫಾರ್ಮ್, ಫೈಬರ್, ಫ್ಯಾಕ್ಟರಿ, ಫ್ಯಾಷನ್, ಫಾರೀನ್) ದೃಷ್ಟಿಕೋನದಲ್ಲಿ ಈ ಪಾರ್ಕ್​ಗಳಿಂದ ಜವಳಿ ಉದ್ಯಮಕ್ಕೆ ಪುಷ್ಟಿ ಸಿಗಲಿದೆ. ಕರ್ನಾಟಕದಲ್ಲಿ ಕಲಬುರ್ಗಿಗೆ ಜವಳಿ ಪಾರ್ಕ್ ಸ್ಥಾಪನೆಯ ಅವಕಾಶ ಸಿಕ್ಕಿದೆ.

ಜವಳಿ ಪಾರ್ಕ್?
ಭಾರತ ಜವಳಿ ಉದ್ಯಮದಲ್ಲಿ ವಿಶ್ವದ ಆರನೇ ಅತಿದೊಡ್ಡ ರಫ್ತುದಾರ ದೇಶವಾಗಿದೆ. ಟೆಕ್ಸ್ಟೈಲ್ ಪಾರ್ಕ್ ಮೂಲಕ ಈ ವಲಯದಲ್ಲಿ ರಫ್ತು ಶ್ರೇಣಿಯನ್ನು ಸುಧಾರಿಸುವ ಗುರಿಯನ್ನು ಹೊಂದಲಾಗಿದೆ ಜವಳಿ ಸಚಿವಾಲಯದ ಸಮಗ್ರ ಜವಳಿ ಪಾರ್ಕ್ ಯೋಜನೆಯಡಿ, ದೇಶದಲ್ಲಿ 59 ಜವಳಿ ಪಾರ್ಕ್‌ಗಳಿಗೆ ಅನುಮೋದನೆ ನೀಡಲಾಗಿದೆ.

ಮುಂದಿನ ದಿನಗಳಲ್ಲಿ ದೇಶದ ಜವಳಿ ಉದ್ಯಮವನ್ನು ಬಲಪಡಿಸಲು ಮತ್ತು ಸುಧಾರಿಸಲು ಇದು ಉಪಯುಕ್ತವಾಗಿದೆ ಎಂದಿದ್ದಾರೆ,ಮತ್ತೊಂದು ಟ್ವೀಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ‘ಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್‌ಗಳು ಜವಳಿ ಕ್ಷೇತ್ರಕ್ಕೆ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸುತ್ತವೆ. ಇದು ದೇಶಕ್ಕೆ ಕೋಟ್ಯಂತರ ರೂಪಾಯಿ ಬಂಡವಾಳವನ್ನು ತರಲಿದೆ. ಇದು ಲಕ್ಷಾಂತರ ಜನರಿಗೆ ಉದ್ಯೋಗದ ಮಾರ್ಗವನ್ನು ತೆರೆಯುತ್ತದೆ. ಇದು ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ವರ್ಲ್ಡ್ ಗೆ ಉತ್ತಮ ಉದಾಹರಣೆಯಾಗಲಿದೆ’ ಎಂದು ಬರೆದಿದ್ದಾರೆ.ಉತ್ಪಾದನೆ-ಸಂಯೋಜಿತ ಪ್ರೋತ್ಸಾಹದಂತೆ ಜವಳಿ ಉದ್ಯಮದಲ್ಲಿ ಇದುವರೆಗೆ ಸುಮಾರು 1,536 ಕೋಟಿ ರೂಪಾಯಿ ಹೂಡಿಕೆಯನ್ನು ಮಾಡಲಾಗಿದೆ ಎಂದು ಜವಳಿ ಸಚಿವಾಲಯ ತಿಳಿಸಿದೆ.

ಜವಳಿ ಉದ್ಯಮಕ್ಕಾಗಿ, ಗಾತ್ರ ಮತ್ತು ಪ್ರಮಾಣವನ್ನು ಸಾಧಿಸಲು ಮತ್ತು ಸ್ಪರ್ಧಾತ್ಮಕವಾಗಲು ಜವಳಿಗಾಗಿ ಸರ್ಕಾರವು Rs10,683 ಕೋಟಿಗಳ ಅನುಮೋದಿತ ಹಣಕಾಸಿನ ವೆಚ್ಚದೊಂದಿಗೆ ಯೋಜನೆಯನ್ನು ಪ್ರಾರಂಭಿಸಿದೆ.ಕೇಂದ್ರ ಸರ್ಕಾರದ ಪ್ರಕಾರ, ದೇಶದಲ್ಲಿ ಜವಳಿ ಉದ್ಯಮದ ವಹಿವಾಟು $ 45 ಬಿಲಿಯನ್ ಆಗಿದ್ದು, 2025 ರ ವೇಳೆಗೆ ಇದು $ 200 ಬಿಲಿಯನ್ ತಲುಪುವ್ ನಿರೀಕ್ಷೆಯಿದೆ. 10 ನೇ ಪಂಚವಾರ್ಷಿಕ ಯೋಜನೆಯಡಿ 2005 ರಲ್ಲಿ ಕೇಂದ್ರ ಸರ್ಕಾರವು ಇಂಟಿಗ್ರೇಟೆಡ್ ಟೆಕ್ಸ್ಟೈಲ್ ಪಾರ್ಕ್ ಸ್ಕೀಮ್ (ITPS) ಅನ್ನು ಆರಂಭಿಸಿತ್ತು ಎಂಬುದು ಇಲ್ಲಿ ಗಮನಾರ್ಹ.

ವಿಜಯಪುರ ಮತ್ತು ಕಲಬುರ್ಗಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆ ಮಾಡಿ ಎಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಹಿಂದೆಯೇ ಶಿಫಾರಸು ಮಾಡಿತ್ತು. ಈಗ ಕಲಬುರ್ಗಿಗೆ ಜವಳಿ ಪಾರ್ಕ್ ಅವಕಾಶ ಸಿಕ್ಕಿದೆ. ಇಲ್ಲಿನ ಜನರ ಬಹುವರ್ಷದ ಕನಸು ಈಗ ಸಾಕಾರಗೊಂಡಿದೆ.ಒಂದು ಸಾವಿರ ಎಕರೆಗೂ ಹೆಚ್ಚು ವಿಸ್ತೀರ್ಣ ಜಾಗದಲ್ಲಿ ನಿರ್ಮಾಣವಾಗಲಿರುವ ಪ್ರತಿಯೊಂದು ಪಾರ್ಕ್​ನಿಂದಲೂ 2ಲಕ್ಷದವರೆಗೆ ನೇರ ಉದ್ಯೋಗ ಸಿಗುವ ಸಾಧ್ಯತೆ ಇದೆ. ಕಲಬುರ್ಗಿಯ ಫಿರೋಜಾಬಾದ್​ನ ಹೊನ್ನಕಿರಣಗಿ ಎಂಬಲ್ಲಿ 1,000 ಎಕರೆ ಭೂಮಿಯನ್ನು ಜವಳಿ ಪಾರ್ಕ್ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಕೆಲ ತಿಂಗಳ ಹಿಂದೆ ಕೇಂದ್ರ ಅಧಿಕಾರಿಗಳ ತಂಡ ಇಲ್ಲಿ ಬಂದು ಭೂಮಿಯನ್ನು ಪರಿಶೀಲಿಸಿಕೊಂಡು ಹೋಗಿತ್ತು.

Related News

spot_img

Revenue Alerts

spot_img

News

spot_img