ಬೆಂಗಳೂರು, ಏ. 20 : ಮುಡುಬಿದಿರೆ ಬಳಿ ಸಾವಿರಕ್ಕೂ ಅಧಿಕ ಎಕೆರೆಯ ಭೂಮಿಯನ್ನು ಕೈಗಾರಿಕೆಗಳಿಗೆ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಆರೋಪಿಸಿದ್ದಾರೆ. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಳ್ಳುಂಜೆ, ಉಳೆಪಾಡಿ, ಕೊಲ್ಲೂರು, ಅತಿಕಾರಿಬೆಟ್ಟು, ಕವತ್ತಾರು, ಬಜ್ಜೆಯ ವ್ಯಾಪ್ತಿಯಲ್ಲಿ ಸಾವರಿಕ್ಕೂ ಅಧಿಕ ಎಕರೆ ಜಮೀನು ಇದೆ. ಈ ಜಾಗದಲ್ಲಿ ಕೈಗಾರಿಕೆಗೆ ಮಾರಾಟ ಮಾಡಲು ಕೆಲ ಶಾಸಕರು ಮುಂದಾಗಿದ್ದಾರೆ ಎಂದು ಮಿಥುನ್ ರೈ ಆರೋಪ ಮಾಡಿದ್ದಾರೆ.
ಸಾವಿರಾರು ಎಕರೆ ಜಮೀನನ್ನು ಸರಕಾರಕ್ಕೆ ನೀಡಲು ಜನರು ಉತ್ಸುಕರಾಗಿದ್ದಾರೆ. ತಾವು ದಯವಿಟ್ಟು ಈ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಭೂ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಬೇಕು. ಇಲ್ಲಿ ಕೈಗಾರಿಕೆ ಸ್ಥಾಪಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಅವರು ಸರಕಾರ ಹಾಗೂ ಕೆಐಡಿಬಿ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಈ ಬಗ್ಗೆ ಮಿಥುನ್ ರೈ ಅವರು ಸುದ್ದಿಗೋಷ್ಢೀ ನಡೆಸಿದ್ದಾರೆ. ಈ ಭಾಗದ ಕೃಷಿಕರಿಗೆ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುವ ಪ್ರಯತ್ನ ನಡೆಯುತ್ತಿದೆ ಅಂತ ಮಿಥುನ್ ರೈ ಆರೋಪ ಮಾಡಿದ್ದಾರೆ.
ಈ ಜಾಗವನ್ನು ಸ್ವಾಧೀನಪಡಿಸಿಕಳ್ಳುವ ಬಗ್ಗೆ ಕಳೆದ ತಿಂಗಳು ಶಾಸಕ ಹಾಗೂ ಸಂಸದರ ಮಧ್ಯಸ್ಥಿಕೆಯಲ್ಲಿ ತಡೆ ಹಿಡಿಯಲಾಗಿತ್ತು. ಇದು ಎಲ್ಲಾ ಶಾಸಕರ ಹಾಗೂ ಸಂಸದರ ನಾಟಕ. ಈ ಪ್ರದೇಶದಲ್ಲಿ ಈಗಾಗಲೇ ಕೈಗಾರಿಕೆಗೆ ಸರ್ವೇ ಕೂಡ ನಡೆಸಲಾಗಿದೆ. ಶಾಸಕರು ಕೋಟ್ಯಂತರ ರೂ. ಬೆಲೆ ಬಾಳುವ ಬೇನಾಮಿ ಆಸ್ತಿಗಳನ್ನು ಹೊಂದಿದ್ದಾರೆ. ಇದರಲ್ಲಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡ ಭಾಗಿಯಾಗಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮಿಥುನ್ ರೈ ಅವರು ಶಾಸಕ ಉಮಾನಾಥ ಕೋಟ್ಯಾನ್ ಅವರ ವಿರುದ್ಧವೂ ಗುಡುಗಿದರು. ಕೋಟ್ಯಾನ್ ಸುಳ್ಳು ಹೇಳಿ ರೈತರಿಗೆ ಮೋಸ ಮಾಡಲು ಮುಂದಾಗಿದ್ದಾರೆ ಹಾಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಇಲ್ಲದೇ ಹೋದಲ್ಲಿ ನಾವು ಉಗ್ರ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಸುದ್ದಿಗೋಷ್ಢಿಯಲ್ಲಿ ಒತ್ತಾಯಿಸಿದರು.