ಭಾರತವು ಪ್ರಗತಿ ಪರ ದೇಶವಾಗಿದ್ದು 2047 ರ ವೇಳೆಗೆ ದೇಶದ ಅರ್ಧದಷ್ಟು ಜನಸಂಖ್ಯೆಯು ನಗರಗಳಲ್ಲಿ ವಾಸಿಸುವ ನಿರೀಕ್ಷೆಯಿರುವುದರಿಂದ ನಗರಗಳ ಸುಸ್ಥಿರ ಅಭಿವೃದ್ಧಿಗಾಗಿ ನಗರ ಯೋಜನೆ ಸುಧಾರಣೆಗಳ ಅಗತ್ಯತೆಯ ಮೇಲೆ ಒತ್ತಡವಿದೆ ಆದ್ದರಿಂದ ಕೇಂದ್ರ ಸರ್ಕಾರವು 2022-23ರ ಬಜೆಟ್ ನಲ್ಲಿ ಮೆಗಾಸಿಟಿಗಳು, ಎರಡನೇ ಮತ್ತು ಮೂರನೇ ದರ್ಜೆ ನಗರಗಳ ಅಭಿವೃದ್ಧಿಯ ಅಗತ್ಯವನ್ನು ಮನಗಂಡು ಕಳೆದ ವರ್ಷ ಹಲವಾರು ಕ್ರಮಗಳು ಮತ್ತು ಯೋಜನೆಗಳನ್ನು ಘೋಷಿಸಿತು.
ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರು ಇಂದು ಘೋಷಿಸಿದ ಬಜೆಟ್ ನಲ್ಲಿ ಎರಡು ಮತ್ತು ಮೂರನೇ ದರ್ಜೆ ನಗರಗಳ ಅಭಿವೃದ್ದಿಗೆ “ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಯುಐಡಿಎಫ್)” ಸ್ಥಾಪಿಸಲಾಗುವುದು ಮತ್ತು ಇದಕ್ಕಾಗಿ ವಾರ್ಷಿಕ ₹ 10,000 ಕೋಟಿ ಮೀಸಲಿಡಲಾಗುವುದು ಎಂದು ತಿಳಿಸಿದ್ದಾರೆ.
“RIDF [ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ] ಮತ್ತು UIDF (ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ )ಸ್ಥಾಪಿಸಲು ಉದ್ದೇಶಿಸಿದ್ದು ಇದನ್ನು ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನಿರ್ವಹಣೆ ಮಾಡತ್ತದೆ ಮತ್ತು ಸಾರ್ವಜನಿಕ ಏಜೆನ್ಸಿಗಳು ಎರಡನೇ ದರ್ಜೆ ಮತ್ತು ಮೂರನೇ ದರ್ಜೆ ನಗರಗಳಲ್ಲಿ ಮೂಲಸೌಕರ್ಯವನ್ನು ರಚಿಸಲು ನಿಧಿಯನ್ನು ಬಳಸುತ್ತವೆ ಎಂದು ಅವರು ಹೇಳಿದರು.
ಯುಐಡಿಎಫ್ ಅನ್ನು ಪ್ರವೇಶಿಸುವಾಗ ಸೂಕ್ತವಾದ ಬಳಕೆದಾರ ಶುಲ್ಕಗಳನ್ನು ಅಳವಡಿಸಿಕೊಳ್ಳಲು 15 ನೇ ಹಣಕಾಸು ಆಯೋಗದ ಅನುದಾನ ಮತ್ತು ಅಸ್ತಿತ್ವದಲ್ಲಿರುವ ಯೋಜನೆಗಳಿಂದ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಅವರು ಹೇಳಿದರು.
ಎಲ್ಲಾ ನಗರಗಳು ಮತ್ತು ಪಟ್ಟಣಗಳು ಮ್ಯಾನ್ಹೋಲ್ನಿಂದ ಯಂತ್ರ-ಹೋಲ್ ಮೋಡ್ಗೆ ಪರಿವರ್ತನೆ ಮಾಡಲು ಸೆಪ್ಟಿಕ್ ಟ್ಯಾಂಕ್ಗಳು ಮತ್ತು ಒಳಚರಂಡಿಗಳ ಡೆಸ್ಲಡ್ಜಿಂಗ್ಗೆ 100% ಯಾಂತ್ರಿಕ ಬೆಂಬಲವನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು. “ಒಣ ಮತ್ತು ಆರ್ದ್ರ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಗೆ ವರ್ಧಿತ ಗಮನವನ್ನು ಒದಗಿಸಲಾಗುವುದು.” ಎಂದು ತಿಳಿಸಿದರು ಇದರ ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಹಣಕಾಸು ಮತ್ತು ಸಾಲದ ಅರ್ಹತೆಯನ್ನು ಸುಧಾರಿಸಲು ಪ್ರೋತ್ಸಾಹ ನೀಡಲಾಗುವುದು ಎಂದು ಅವರು ಹೇಳಿದರು.